ಫ್ಲೈ 91 ವಿಮಾನಯಾನ ಸಂಸ್ಥೆ
ಫ್ಲೈ 91 ವಿಮಾನಯಾನ ಸಂಸ್ಥೆ PTI
ವಾಣಿಜ್ಯ

ಭಾರತದ ವಿಮಾನಯಾನ ಕ್ಷೇತ್ರಕ್ಕೆ ಮತ್ತೊಂದು 'ರೆಕ್ಕೆ': DGCA ಏರ್ ಆಪರೇಟರ್ ಪ್ರಮಾಣಪತ್ರ ಪಡೆದ FLY91

Srinivasamurthy VN

ಪಣಜಿ: ಭಾರತದ ವಿಮಾನಯಾನ ಕ್ಷೇತ್ರಕ್ಕೆ ಮತ್ತೊಂದು 'ರೆಕ್ಕೆ' ಸೇರ್ಪಡೆಯಾಗಿದ್ದು, ವಾಯುಯಾನ ನಿಯಂತ್ರಕ DGCA ಯಿಂದ ಫ್ಲೈ 91 (FLY91) ವಿಮಾನಯಾನ ಸಂಸ್ಥೆ ಏರ್ ಆಪರೇಟರ್ ಪ್ರಮಾಣಪತ್ರ ಪಡೆದಿದೆ.

ಗೋವಾ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆ FLY91 ಬುಧವಾರ ವಾಯುಯಾನ ನಿಯಂತ್ರಕ DGCA ಯಿಂದ ಏರ್ ಆಪರೇಟರ್ ಪ್ರಮಾಣಪತ್ರವನ್ನು (AOC) ಸ್ವೀಕರಿಸಿದ್ದು, ವಾಹಕವು ಈಗ ಎಲ್ಲಾ ಅನುಸರಣೆ ಅಗತ್ಯತೆಗಳನ್ನು ಪೂರ್ಣಗೊಳಿಸಿದಂತಾಗಿದೆ. ಹೀಗಾಗಿ ಶೀಘ್ರದಲ್ಲೇ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ಸಂಸ್ಥೆಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವಾರ ದುಬೈ ಏರೋಸ್ಪೇಸ್ ಎಂಟರ್‌ಪ್ರೈಸ್‌ನಿಂದ ಗುತ್ತಿಗೆ ಪಡೆದ ಎರಡು ವಿಮಾನಗಳಲ್ಲಿ ಒಂದಾದ ATR 72-600 ತನ್ನ ಮೊದಲ ವಿಮಾನವಾಗಿ FLY91 ಸಂಸ್ಥೆ ಪಡೆದುಕೊಂಡಿತ್ತು.

ಸರ್ಕಾರದ ಪ್ರಾದೇಶಿಕ ವಾಯು ಸಂಪರ್ಕ ಯೋಜನೆ ಉಡಾನ್ ಅಡಿಯಲ್ಲಿ ವಿಮಾನಯಾನ ಸಂಸ್ಥೆಯು ತನ್ನ ಮೊದಲ ಮಾರ್ಗಗಳನ್ನು ಈಗಾಗಲೇ ನಿಗದಿಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಉಡಾನ್ ಅಡಿಯಲ್ಲಿ, ವಿಮಾನಯಾನವು ಸಿಂಧುದುರ್ಗ, ಜಲಗಾಂವ್, ಮಹಾರಾಷ್ಟ್ರದ ನಾಂದೇಡ್ ಮತ್ತು ಲಕ್ಷದ್ವೀಪದ ಅಗಟ್ಟಿಯನ್ನು ಸಂಪರ್ಕಿಸುತ್ತದೆ.

ಗೋವಾ ಮೂಲದ ಮೊದಲ ಪ್ರಾದೇಶಿಕ ವಿಮಾನಯಾನ ಸಂಸ್ಥೆ

ಅಂದಹಾಗೆ ಫ್ಲೈ 91 ಉನ್ನತ ವಿಮಾನಯಾನ ಪರಿಣತರಿಂದ ಕೂಡಿರುವ ಸಂಸ್ಥೆಯಾಗಿದ್ದು, 'ಭಾರತ್ ಅನ್‌ಬೌಂಡ್' ಎಂಬ ಅಡಿಬರಹವನ್ನು ಹೊಂದಿದೆ. FLY91 (Just Udo Aviation Pvt Ltd) ಗೋವಾದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ.

ಫೇರ್‌ಫ್ಯಾಕ್ಸ್ ಇಂಡಿಯಾದ ಮಾಜಿ ಮುಖ್ಯಸ್ಥ ಹರ್ಷ ರಾಘವನ್ ಮತ್ತು ನಿಷ್ಕ್ರಿಯಗೊಂಡಿರುವ ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಮಾಜಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮನೋಜ್ ಚಾಕೊ ಅವರು ಈ ಫ್ಲೈ91 ಏರ್‌ಲೈನ್ಸ್ ನ ಪ್ರಚಾರಕರಾಗಿದ್ದಾರೆ. ವಿಮಾನಯಾನವು GMR ನಿಂದ ನಿರ್ಮಿಸಲಾದ ಹೊಸ ಗೋವಾ ವಿಮಾನ ನಿಲ್ದಾಣವನ್ನು ಅದರ ಮುಖ್ಯ ನೆಲೆಯಾಗಿ ಹೊಂದಿರುತ್ತದೆ. ಆ ಮೂಲಕ ಭಾರತದ ಕರಾವಳಿ ರಾಜ್ಯ ಗೋವಾ ಮೊದಲ ಬಾರಿಗೆ ವಿಮಾನಯಾನ ಸಂಸ್ಥೆಯ ಪ್ರಧಾನ ಕಚೇರಿಯನ್ನು ಹೊಂದಿದಂತಾಗಿದೆ.

SCROLL FOR NEXT