ಸಾಂದರ್ಭಿಕ ಚಿತ್ರ 
ವಾಣಿಜ್ಯ

ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: 2024-25 ಆರ್ಥಿಕ ವರ್ಷದಲ್ಲಿ ಹಣದುಬ್ಬರ ಶೇ. 4.4ಕ್ಕೆ ಇಳಿಯುವ ಸಾಧ್ಯತೆ- IMF

ಚುನಾವಣೆಗಳ ಹೊರತಾಗಿಯೂ, ಹಣಕಾಸಿನ ಬಲವರ್ಧನೆಯಾಗುತ್ತಿದೆ. ಮೀಸಲು ಸ್ಥಾನವು ಬಹಳ ಒಳ್ಳೆಯದು. ಆರ್ಥಿಕತೆಯ ಮೂಲಾಂಶಗಳು ಭಾರತ ಉತ್ತಮ ಸ್ಥಾನದಲ್ಲಿರುವುದನ್ನು ಹೇಳುತ್ತವೆ.

ವಾಷಿಂಗ್ಟನ್: ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಉಳಿದಿದ್ದು, ದೇಶದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಉತ್ತಮವಾಗಿವೆ ಎಂದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತದಲ್ಲಿ 2024-25ರಲ್ಲಿ ಆರ್ಥಿಕ ಬೆಳವಣಿಗೆಯನ್ನು ಶೇ.7 ಎಂದು ಅಂದಾಜಿಸಲಾಗಿದ್ದು, ಕೆಲವು ಏರಳಿತ ಹೊರತಾಗಿಯೂ ಆಹಾರದ ಬೆಲೆಗಳು ಸಾಮಾನ್ಯವಾದಂತೆ ಹಣದುಬ್ಬರ ಶೇ. 4. 4ಕ್ಕೆ ಇಳಿಯುವ ನಿರೀಕ್ಷೆಯಿದೆ ಎಂದು "ಐಎಂಎಫ್ ಏಷ್ಯಾ ಪೆಸಿಫಿಕ್ ಇಲಾಖೆಯ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಮಂಗಳವಾರ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಚುನಾವಣೆಗಳ ಹೊರತಾಗಿಯೂ, ಹಣಕಾಸಿನ ಬಲವರ್ಧನೆಯಾಗುತ್ತಿದೆ. ಮೀಸಲು ಸ್ಥಾನವು ಬಹಳ ಒಳ್ಳೆಯದು. ಆರ್ಥಿಕತೆಯ ಮೂಲಾಂಶಗಳು ಭಾರತ ಉತ್ತಮ ಸ್ಥಾನದಲ್ಲಿರುವುದನ್ನು ಹೇಳುತ್ತವೆ. ಚುನಾವಣೆ ನಂತರ ದೇಶದಲ್ಲಿ ಮೂರು ಕ್ಷೇತ್ರಗಳಲ್ಲಿ ಸುಧಾರಣೆಗೆ ಆದ್ಯತೆ ನೀಡಬೇಕು. ಅವುಗಳಲ್ಲಿ ಮೊದಲನೇಯದಾಗಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ 2019-202ರಲ್ಲಿ ಅನುಮೋದನೆಗೊಂಡಿರುವ ಕಾರ್ಮಿಕ ಸಂಹಿತೆ ಜಾರಿಗೊಳಿಸುವುದು ಮುಖ್ಯವಾಗಿದೆ. ಏಕೆಂದರೆ ಅದು ಕಾರ್ಮಿಕರಿಗೆ ರಕ್ಷಣೆ ನೀಡುವುದರೊಂದಿಗೆ ಕಾರ್ಮಿಕ ಮಾರುಕಟ್ಟೆಗಳು ಸಾಮಾಜಿಕವಾಗಿ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದರು.

ಇನ್ನೊಂದು ವಿಷಯವೆಂದರೆ, ಸ್ಪರ್ಧಾತ್ಮಕವಾಗಿರಲು ಬಯಸಿದರೆ, ಕೆಲವು ವ್ಯಾಪಾರ ನಿರ್ಬಂಧಗಳನ್ನು ತೆಗೆದುಹಾಕಬೇಕು. ಏಕೆಂದರೆ ವ್ಯಾಪಾರವನ್ನು ಉದಾರೀಕರಣಗೊಳಿಸಿದಾಗ ಉತ್ಪಾದಕ ಸಂಸ್ಥೆಗಳನ್ನು ಬದುಕಲು ಅವಕಾಶವಾಗುತ್ತದೆ. ಭಾರತದಲ್ಲಿ ಹೆಚ್ಚಿನ ಸ್ಪರ್ಧಾತ್ಮಕತೆ ಇದ್ದು, ಹೆಚ್ಚಿನ ವ್ಯಾಪಾರ ನಿರ್ಬಂಧಗಳನ್ನು ತೆಗೆದುಹಾಕುವುದು ಮುಖ್ಯ ಎಂದು ಭಾವಿಸುತ್ತೇನೆ. ಅಂತಿಮವಾಗಿ ಮೂಲಸೌಕರ್ಯ ಹೆಚ್ಚಿಸಬೇಕು. ಭೌತಿಕ ಅಥವಾ ಡಿಜಿಟಲ್ ಮೂಲಸೌಕರ್ಯ ಹೆಚ್ಚಿಸಬೇಕು. ಇದು ಪ್ರಮುಖ ಸಾಧನೆಯಾಗಿದ್ದು, ಅದನ್ನು ಮುಂದುವರೆಸಬೇಕು. ಅದನ್ನು ಮೀರಿ, ಕೃಷಿ ಮತ್ತು ಭೂ ಸುಧಾರಣೆಗಳತ್ತ ಗಮನ ಹರಿಸಬೇಕು, ಶಿಕ್ಷಣ ಮತ್ತು ಕೌಶಲ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಉದ್ಯೋಗಿಗಳನ್ನು ಕೌಶಲ್ಯಗೊಳಿಸಲು ಅಗತ್ಯವನ್ನು ಒತ್ತಿ ಹೇಳಿದ ಶ್ರೀನಿವಾಸನ್, ಸೇವಾ ವಲಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸಬಹುದಾದ ಆರ್ಥಿಕತೆಯಲ್ಲಿ, ಸರಿಯಾದ ರೀತಿಯ ಕೌಶಲ್ಯ ಹೊಂದಿರುವುದು ಮುಖ್ಯವಾಗಿದೆ. ಆದ್ದರಿಂದ, ಶಿಕ್ಷಣದಲ್ಲಿ ಹೂಡಿಕೆ ಮಾಡುವುದು, ಕಾರ್ಮಿಕ ಶಕ್ತಿಗಳನ್ನು ಕೌಶಲ್ಯಗೊಳಿಸುವುದು ಬಹಳ ಮುಖ್ಯವಾಗಿದೆ. ಸಾಮಾಜಿಕ ಸುರಕ್ಷತೆಯನ್ನು ಬಲಪಡಿಸುವುದು ಮತ್ತೊಂದು ಸುಧಾರಣೆಯಾಗಿದೆ. ಅಂತಿಮವಾಗಿ, ಜನರೊಂದಿಗೆ ಮುಕ್ತವಾಗಿ ಮಾತನಾಡುವುದು. ವ್ಯಾಪಾರದ ವಾತಾವರಣವನ್ನು ಸುಧಾರಿಸುವುದು ಮತ್ತಿತರ ಸುಧಾರಣೆಯ ಪ್ರಮುಖ ಅಂಶಗಳಾಗಿವೆ ಎಂದು ಶ್ರೀನಿವಾಸನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಿರುದ್ಯೋಗ ದರ ಶೇಕಡಾ 4.9 ಕ್ಕೆ ಇಳಿದಿರುವುದರ ಕುರಿತು ಮಾತನಾಡಿದ ಶ್ರೀನಿವಾಸನ್, ಕಾರ್ಮಿಕರ ಭಾಗವಹಿಸುವಿಕೆ ಮತ್ತು ಉದ್ಯೋಗ-ಜನಸಂಖ್ಯಾ ಅನುಪಾತವು ಹೆಚ್ಚುತ್ತಿದೆ. ಹೆಚ್ಚಿನ ಸುಧಾರಣೆಯು ಸ್ವಯಂ ಉದ್ಯೋಗಿಗಳಲ್ಲಿ ಕೇಂದ್ರೀಕೃತವಾಗಿದೆ. ಆದರೆ ಮಹಿಳಾ ಕಾರ್ಮಿಕರ ಸಂಖ್ಯೆ ಕಡಿಮೆಯಿದೆ. ಯುವ ಜನಾಂಗದ ನಿರುದ್ಯೋಗ ಪ್ರಮಾಣ ಸಾಕಷ್ಟು ಹೆಚ್ಚಾಗಿದೆ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ. ಹಾಗಾಗೀ ಉದ್ಯೋಗ ಸೃಷ್ಟಿಗೆ ಪೂರಕವಾದ ವಾತವಾರಣ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT