ವಾಣಿಜ್ಯ

Gold rate: ಸುಂಕ ಸಮರದ ನಡುವೆ ಚಿನ್ನದ ಬೆಲೆ ಗಗನಕ್ಕೆ! 10 ಗ್ರಾಂ ಬೆಲೆ 96,450 ರೂ; ಬೆಂಗಳೂರಿನಲ್ಲಿ ಈಗ ಎಷ್ಟಿದೆ ಗೊತ್ತಾ?

ಅಮೇರಿಕಾ-ಚೀನಾದ ನಡುವೆ ಸುಂಕ ಸಮರ ಹೆಚ್ಚುತ್ತಿರುವಂತೆಯೇ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಿರುವುದು ದೇಶದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ನವದೆಹಲಿ: ಸುಂಕ ಸಮರದ ನಡುವೆ ಹಳದಿ ಲೋಹದ ಬೆಲೆ ಗಗನಕ್ಕೇರಿದೆ. ಸ್ಥಳೀಯ ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಭಾರೀ ಬೇಡಿಕೆಯಿಂದಾಗಿ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 6,250 ರೂಪಾಯಿಗಳಷ್ಟು ಏರಿಕೆಯಾಗಿದ್ದು, 10 ಗ್ರಾಂ ಬೆಲೆ ರೂ. 96,450 ಗೆ ತಲುಪಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ​​ ತಿಳಿಸಿದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್ ಶುದ್ದ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ. 9,540 ಹಾಗೂ 10 ಗ್ರಾಂಗೆ ರೂ. 95,400 ಆಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ. 8,745, 10 ಗ್ರಾಂಗೆ ರೂ. 87,450 ಮತ್ತು 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ರೂ, 7,155 ಮತ್ತು 10 ಗ್ರಾಂಗೆ ರೂ. 71,550 ಆಗಿದೆ.

ಅಮೇರಿಕಾ-ಚೀನಾದ ನಡುವೆ ಸುಂಕ ಸಮರ ಹೆಚ್ಚುತ್ತಿರುವಂತೆಯೇ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಿರುವುದು ದೇಶದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಮಂಗಳವಾರ 10 ಗ್ರಾಂ ಚಿನ್ನದ ಬೆಲೆಯು ರೂ. 89,750 ಇದದ್ದು, ಬುಧವಾರ ರೂ. 96,000 ಕ್ಕೆ ತಲುಪಿತ್ತು. ಬೆಳ್ಳಿಯ ಬೆಲೆಯೂ ಹೆಚ್ಚಾಗಿದ್ದು, ಪ್ರತಿ ಕೆಜಿಗೆ ರೂ 2,300 ರಿಂದ ರೂ 95,500 ರವರೆಗೂ ಏರಿಕೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

SCROLL FOR NEXT