ಮುಂಬೈ: ಗಗನಕ್ಕೇರಿದ್ದ ಚಿನ್ನದ ದರದಲ್ಲಿ ಇಂದು ಮತ್ತೆ ಕುಸಿತ ಕಂಡುಬಂದಿದ್ದು, ಹಳದಿ ಲೋಹದ ನೂತನ ದರ ಪಟ್ಟಿಗಳು ಇಂತಿವೆ.
ಚಿನ್ನದ ದರ ಇಂದು ಕೂಡ ಕೊಂಚ ಇಳಿಕೆಯಾಗಿದ್ದು, ಮಂಗಳವಾರ ಚಿನ್ನದ ಬೆಲೆ 350 ರೂಗಳಷ್ಟು ಇಳಿಕೆಯಾಗಿದೆ.
ಇಂದು ಅಂದರೆ ಮಂಗಳವಾರ 22 ಕ್ಯಾರಟ್ ಚಿನ್ನದ ದರದಲ್ಲಿ 350 ರೂ ಇಳಿಕೆಯಾಗಿದ್ದು, 24 ಕ್ಯಾರಟ್ ಬಂಗಾರದ ಧಾರಣೆ ಗ್ರಾಂಗೆ 330ರೂ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.
22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ದರ 8,720ಕ್ಕೆ ಇಳಿಕೆಯಾಗಿದ್ದು, ಅಂತೆಯೇ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 87,200ಕ್ಕೆ ಇಳಿಕೆಯಾಗಿದೆ.
ಅಂತೆಯೇ 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 9,518 ರೂ ಇಳಿಕೆಯಾಗಿದ್ದು, 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 95,180 ರೂ ಗೆ ಇಳಿಕೆಯಾಗಿದೆ.
ಬೆಳ್ಳಿ ದರದಲ್ಲೂ ಅಲ್ಪ ಇಳಿಕೆ
ಇನ್ನು ಬೆಳ್ಳಿಯ ಬೆಲೆ ಗ್ರಾಂಗೆ ಅಲ್ಪ ಇಳಿಕೆಯಾಗಿದ್ದು, ಪ್ರತೀ ಗ್ರಾಂ ಬೆಳ್ಳಿ ದರದಲ್ಲಿ 10 ಪೈಸೆ ಇಳಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿ ದರ 99.80 ರೂಗೆ ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ 998 ರೂಗೆ ಮತ್ತು 1 Kg ಬೆಳ್ಳಿದರ 99,800 ರೂ ಗೆ ಇಳಿಕೆಯಾಗಿದೆ.