ನವದೆಹಲಿ: ಹೊಸ ವರ್ಷದಿಂದ ಅಂದ್ರೆ ಜನವರಿ 1 ರಿಂದ ರೆಫ್ರಿಜರೇಟರ್‌ಗಳು, ಟೆಲಿವಿಷನ್‌ಗಳು, ಎಲ್‌ಪಿಜಿ ಗ್ಯಾಸ್ ಸ್ಟೌವ್‌ಗಳು ಮತ್ತು ಕೂಲಿಂಗ್ ಟವರ್ ಸೇರಿದಂತೆ ಹಲವಾರು ಉಪಕರಣಗಳ ಮೇಲೆ ಇಂಧನ ದಕ್ಷತೆಯ ಸ್ಟಾರ್-ಲೇಬಲಿಂಗ್ ಅನ್ನು ಕಡ್ಡಾಯಗೊಳಿಸಲಾಗಿದೆ.
ಇಂಧನ ದಕ್ಷತೆಯ ಬ್ಯೂರೋ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, ಇಂಧನ ದಕ್ಷತೆಯ ಸ್ಟಾರ್ ರೇಟಿಂಗ್-ಲೇಬಲಿಂಗ್ ಕಡ್ಡಾಯ ನಿಯಮವು ಡೀಪ್ ಫ್ರೀಜರ್‌ಗಳು, ವಿತರಣಾ ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಗ್ರಿಡ್ ಸಂಪರ್ಕಿತ ಸೌರ ಇನ್ವರ್ಟರ್‌ಗಳಿಗೂ ಅನ್ವಯಿಸುತ್ತದೆ.
ಇದಕ್ಕೂ ಮೊದಲು, ಫ್ರಾಸ್ಟ್-ಫ್ರೀ ರೆಫ್ರಿಜರೇಟರ್‌ಗಳು, ಡೈರೆಕ್ಟ್ ಕೂಲ್ ರೆಫ್ರಿಜರೇಟರ್‌ಗಳು, ಡೀಪ್ ಫ್ರೀಜರ್‌ಗಳು, ಆರ್‌ಎಸಿ(ಕ್ಯಾಸೆಟ್, ಫ್ಲೋರ್ ಸ್ಟ್ಯಾಂಡಿಂಗ್ ಟವರ್, ಸೀಲಿಂಗ್, ಕಾರ್ನರ್ ಎಸಿ), ಕಲರ್ ಟೆಲಿವಿಷನ್‌ಗಳು ಮತ್ತು ಅಲ್ಟ್ರಾ-ಹೈ ಡೆಫಿನಿಷನ್ ಟೆಲಿವಿಷನ್‌ಗಳಂತಹ ವಸ್ತುಗಳ ಮೇಲೆ ಸ್ಟಾರ್ ರೇಟಿಂಗ್ ಸ್ವಯಂಪ್ರೇರಿತವಾಗಿತ್ತು. ಇದೀಗ ಅದನ್ನು ಕಡ್ಡಾಯಗೊಳಿಸಲಾಗಿದೆ.
ಸ್ಟಾರ್ ಲೇಬಲಿಂಗ್‌ಗಾಗಿ ಕಡ್ಡಾಯ ಉಪಕರಣಗಳ ಪಟ್ಟಿಯನ್ನು ಕಾಲಕಾಲಕ್ಕೆ ನವೀಕರಿಸಲಾಗುತ್ತದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊಠಡಿಯ ಹವಾನಿಯಂತ್ರಣಗಳು(ಸ್ಥಿರ ಮತ್ತು ವೇರಿಯಬಲ್ ವೇಗ), ವಿದ್ಯುತ್ ಸೀಲಿಂಗ್ ಮಾದರಿಯ ಫ್ಯಾನ್‌ಗಳು, ಸ್ಟೇಷನರಿ ಸ್ಟೋರೇಜ್ ಮಾದರಿಯ ವಿದ್ಯುತ್ ವಾಟರ್ ಹೀಟರ್, ವಾಷಿಂಗ್ ಮೆಷಿನ್ ಮತ್ತು ಟ್ಯೂಬ್ಯುಲರ್ ಫ್ಲೋರೊಸೆಂಟ್ ದೀಪಗಳು ಮತ್ತು ಸ್ವಯಂ-ಬ್ಯಾಲಸ್ಟೆಡ್ ಎಲ್‌ಇಡಿ ದೀಪಗಳ ಮೇಲೆ ಈ ಹಿಂದೆ ಸ್ಟಾರ್ ಲೇಬಲಿಂಗ್ ಅನ್ನು ಕಡ್ಡಾಯಗೊಳಿಸಲಾಗಿತ್ತು.