ಸಂಗ್ರಹ ಚಿತ್ರ 
ವಾಣಿಜ್ಯ

TRAI ಹೊಡೆತಕ್ಕೆ ತತ್ತರ: ಬರೀ Voice Call, SMS ಗಳ ನೂತನ ರೀಚಾರ್ಜ್ ಪ್ಲಾನ್​ ಘೋಷಿಸಿದ Airtel

ಏರ್‌ಟೆಲ್ ಈ ಯೋಜನೆಯನ್ನು 499 ರೂ.ಗೆ ಬಿಡುಗಡೆ ಮಾಡಿತ್ತು, ಈಗ ಅದನ್ನು 469 ರೂ.ಗೆ ಪರಿಷ್ಕರಿಸಲಾಗಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಸೂಚನೆ ನಂತರ, ಟೆಲಿಕಾಂ ಕಂಪನಿಗಳು ತಮ್ಮ Voice Call ಯೋಜನೆಗಳನ್ನು ಪ್ರಾರಂಭಿಸಲು ಮುಂದಾಗಿವೆ. ಕೆಲವು ದಿನಗಳ ಹಿಂದೆ, Jio ಮೊದಲು ಕೇವಲ Voice Call ಯೋಜನೆಗಳನ್ನು ಪ್ರಾರಂಭಿಸಿತು. ಇದರ ನಂತರ, Airtel ಮತ್ತು ವೊಡಾಫೋನ್-ಐಡಿಯಾ ಕೂಡ ತಮ್ಮ ಧ್ವನಿ ಮಾತ್ರ ಯೋಜನೆಗಳನ್ನು ಪರಿಚಯಿಸಿದವು. ಆದಾಗ್ಯೂ, ಟೆಲಿಕಾಂ ಕಂಪನಿಗಳು ಪ್ರಾರಂಭಿಸಿರುವ ವಾಯ್ಸ್ ಕಾಲ್ ಮಾತ್ರ ಯೋಜನೆಗಳನ್ನು 7 ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದು TRAI ಸ್ಪಷ್ಟಪಡಿಸಿತ್ತು. ಈ ಆದೇಶದ ನಂತರ, ಏರ್‌ಟೆಲ್ ತನ್ನ ಎರಡೂ ಯೋಜನೆಗಳನ್ನು ಪರಿಷ್ಕರಿಸಿದ್ದು ಅವ ಅಗ್ಗವಾಗಿದೆ. ಈಗ ಬಳಕೆದಾರರು ಈ ಯೋಜನೆಗಳನ್ನು ಕಡಿಮೆ ಮೌತ್ತಕ್ಕೆ ಪಡೆಯುತ್ತಾರೆ.

ಏರ್‌ಟೆಲ್ ಈ ಯೋಜನೆಯನ್ನು 499 ರೂ.ಗೆ ಬಿಡುಗಡೆ ಮಾಡಿತ್ತು, ಈಗ ಅದನ್ನು 469 ರೂ.ಗೆ ಪರಿಷ್ಕರಿಸಲಾಗಿದೆ. ಕಂಪನಿಯು ಯೋಜನೆಯ ಬೆಲೆಯನ್ನು 30 ರೂ.ಗಳಷ್ಟು ಕಡಿಮೆ ಮಾಡಿದೆ. ಈ ಯೋಜನೆಯಲ್ಲಿ, ಬಳಕೆದಾರರು ಭಾರತದಾದ್ಯಂತ ಯಾವುದೇ ಸಂಖ್ಯೆಗೆ ಕರೆ ಮಾಡಲು ಅನಿಯಮಿತ ಧ್ವನಿ ಕರೆ ಮತ್ತು ಉಚಿತ ರಾಷ್ಟ್ರೀಯ ರೋಮಿಂಗ್‌ನ ಪ್ರಯೋಜನವನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ಏರ್‌ಟೆಲ್ ತನ್ನ ಬಳಕೆದಾರರಿಗೆ 900 ಉಚಿತ SMS ಗಳ ಪ್ರಯೋಜನವನ್ನು ನೀಡುತ್ತಿದೆ. ಈ ಪ್ರಿಪೇಯ್ಡ್ ಯೋಜನೆಯಲ್ಲಿ ಬಳಕೆದಾರರಿಗೆ ಯಾವುದೇ ಡೇಟಾವನ್ನು ನೀಡಲಾಗುವುದಿಲ್ಲ. ಇದರ ಪ್ರಯೋಜನಗಳು ವಿಶೇಷವಾಗಿ 2G ಫೀಚರ್ ಫೋನ್ ಬಳಕೆದಾರರಿಗೆ ಲಭ್ಯವಿರುತ್ತವೆ.

ಏರ್‌ಟೆಲ್ ಈ ಹಿಂದೆ ಈ ಯೋಜನೆಯನ್ನು 1959 ರೂ.ಗಳಿಗೆ ಬಿಡುಗಡೆ ಮಾಡಿತ್ತು. ಈಗ ಈ ಯೋಜನೆಯನ್ನು 1,849 ರೂ.ಗಳಿಗೆ ಪರಿಷ್ಕರಿಸಲಾಗಿದೆ. ಕಂಪನಿಯು ಯೋಜನೆಯ ಬೆಲೆಯನ್ನು 110 ರೂ.ಗಳಷ್ಟು ಕಡಿಮೆ ಮಾಡಿದೆ. ಈ ಏರ್‌ಟೆಲ್ ಯೋಜನೆಯಲ್ಲಿ, ಬಳಕೆದಾರರು 365 ದಿನಗಳ ಪೂರ್ಣ ಮಾನ್ಯತೆಯನ್ನು ಪಡೆಯುತ್ತಾರೆ. ಇದರಲ್ಲಿ ಬಳಕೆದಾರರು ಅನಿಯಮಿತ ಕರೆ ಮತ್ತು ಉಚಿತ ರಾಷ್ಟ್ರೀಯ ರೋಮಿಂಗ್‌ನ ಪ್ರಯೋಜನವನ್ನು ಪಡೆಯುತ್ತಾರೆ. ಇದಲ್ಲದೆ, ಬಳಕೆದಾರರು ಒಟ್ಟು 3600 ಉಚಿತ SMS ಗಳ ಪ್ರಯೋಜನವನ್ನು ಸಹ ಪಡೆಯುತ್ತಾರೆ.

ಜಿಯೋದ ವಾಯ್ಸ್ ಕಾಲ್ ಮಾತ್ರ ಯೋಜನೆಗಳು

ರಿಲಯನ್ಸ್ ಜಿಯೋದ ವಾಯ್ಸ್ ಕಾಲ್ ಮಾತ್ರ ಯೋಜನೆಯ ಬಗ್ಗೆ ಹೇಳುವುದಾದರೆ, ಕಂಪನಿಯ 84 ದಿನಗಳ ಯೋಜನೆ 458 ರೂ.ಗಳಿಗೆ ಬರುತ್ತದೆ. ಈ ಯೋಜನೆಯಲ್ಲಿ, ಕಂಪನಿಯು ಭಾರತದಾದ್ಯಂತ ಅನಿಯಮಿತ ಧ್ವನಿ ಕರೆ ಜೊತೆಗೆ 1,000 ಉಚಿತ SMS ನೀಡುತ್ತದೆ. ಅದೇ ಸಮಯದಲ್ಲಿ, ಕಂಪನಿಯ 365 ದಿನಗಳ ಯೋಜನೆಯ ಬೆಲೆ 1,958 ರೂ. ಈ ಯೋಜನೆಯು ಅನಿಯಮಿತ ಕರೆ ಜೊತೆಗೆ 3,600 ಉಚಿತ SMS ಗಳ ಪ್ರಯೋಜನವನ್ನು ನೀಡುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT