ಸಾಂದರ್ಭಿಕ ಚಿತ್ರ 
ವಾಣಿಜ್ಯ

GST 2.0: ಶೇ. 40 ಜಿಎಸ್ ಟಿ ದರಕ್ಕೆ ಒಳಪಡುವ ಸರಕು ಮತ್ತು ಸೇವೆಗಳ ಮಾಹಿತಿ ಇಲ್ಲಿದೆ..

ಈ ಸರಕುಗಳಲ್ಲಿ ಹಲವು ಹಿಂದೆ ಪ್ರಮಾಣಿತ ಜಿಎಸ್‌ಟಿ ಜೊತೆಗೆ ಪರಿಹಾರ ಸೆಸ್ ನ್ನು ಆಕರ್ಷಿಸಿದ್ದರಿಂದ ವಿಶೇಷ ದರವನ್ನು ಪರಿಚಯಿಸಲಾಯಿತು.

ನವದೆಹಲಿ: ಹೆಚ್ಚಿನ ಗೃಹೋಪಯೋಗಿ ಮತ್ತು ಜನರ ಐಷಾರಾಮಿ ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆ ಮಾಡಲಾಗಿದ್ದರೂ, ಕೆಲವು ವಸ್ತುಗಳಿಗೆ ಶೇಕಡಾ 40ರಷ್ಟು ವಿಶೇಷ ದರವನ್ನು ನಿಗದಿಪಡಿಸಲಾಗಿದೆ. ಈ ವಿಶೇಷ ದರವು ಕೆಲವು ಆಯ್ದ ಸರಕುಗಳಿಗೆ ಮಾತ್ರ ಅನ್ವಯಿಸುತ್ತದೆ, ಪ್ರಧಾನವಾಗಿ ತಂಬಾಕು ಮತ್ತು ಸಕ್ಕರೆ ಪಾನೀಯಗಳಂತಹ ಆರೋಗ್ಯ ಅಥವಾ ಸಮಾಜಕ್ಕೆ ಹಾನಿಕಾರಕವೆಂದು ಪರಿಗಣಿಸಲಾದ ಉತ್ಪನ್ನಗಳನ್ನು ಮತ್ತು ಕೆಲವು ಐಷಾರಾಮಿ ವಸ್ತುಗಳನ್ನು ಒಳಗೊಂಡಿದೆ.

ಈ ಸರಕುಗಳಲ್ಲಿ ಹಲವು ಹಿಂದೆ ಪ್ರಮಾಣಿತ ಜಿಎಸ್‌ಟಿ ಜೊತೆಗೆ ಪರಿಹಾರ ಸೆಸ್ ನ್ನು ಆಕರ್ಷಿಸಿದ್ದರಿಂದ ವಿಶೇಷ ದರವನ್ನು ಪರಿಚಯಿಸಲಾಯಿತು. ಪರಿಹಾರ ಸೆಸ್ ನ್ನು ಕೊನೆಗೊಳಿಸುವ ನಿರ್ಧಾರದ ನಂತರ ಸ್ಥಿರವಾದ ತೆರಿಗೆ ವ್ಯಾಪ್ತಿಯನ್ನು ಕಾಯ್ದುಕೊಳ್ಳಲು, ಸೆಸ್ ದರವನ್ನು ಜಿಎಸ್‌ಟಿಯೊಂದಿಗೆ ವಿಲೀನಗೊಳಿಸಲಾಗುತ್ತಿದೆ. ಇತರ ಸರಕು ಮತ್ತು ಸೇವೆಗಳಿಗೆ, ಈ ವಿಶೇಷ ದರವನ್ನು ಅನ್ವಯಿಸಲಾಗಿದೆ. ಅವುಗಳು ಈಗಾಗಲೇ ಶೇಕಡಾ 28ರ ಅತ್ಯಧಿಕ ಜಿಎಸ್‌ಟಿ ಚೌಕಟ್ಟಿನಲ್ಲಿವೆ.

ಶೇಕಡಾ 40ರಷ್ಟು ಜಿಎಸ್ ಟಿ ದರಕ್ಕೆ ಒಳಪಡುವ ಸರಕು ಮತ್ತು ಸೇವೆಗಳ ಪಟ್ಟಿ ಹೀಗಿದೆ:

ಪಾನ್ ಮಸಾಲಾ

ಸಂಸ್ಕರಿತ ಸಕ್ಕರೆ, ಇತರ ಸಿಹಿಕಾರಕ ವಸ್ತುಗಳು ಅಥವಾ ಸುವಾಸನೆಯನ್ನು ಒಳಗೊಂಡಿರುವ ಎಲ್ಲಾ ಸರಕುಗಳು

ಆಲ್ಕೋಹಾಲ್ ರಹಿತ ಪಾನೀಯಗಳು

ಹಣ್ಣಿನ ಪಾನೀಯ ಅಥವಾ ಹಣ್ಣಿನ ರಸದೊಂದಿಗೆ ಕಾರ್ಬೊನೇಟೆಡ್ ಪಾನೀಯಗಳು; ಕೆಫೀನ್ ಮಾಡಿದ ಪಾನೀಯಗಳು.

ತಂಬಾಕು ತ್ಯಾಜ್ಯ (ತಂಬಾಕು ಎಲೆಗಳನ್ನು ಹೊರತುಪಡಿಸಿ); ತಂಬಾಕು ಅಥವಾ ತಂಬಾಕು ಬದಲಿ ಪದಾರ್ಥಗಳು ಮತ್ತು ಸಿಗರೇಟ್‌ಗಳು.

ದೊಡ್ಡ ಕಾರುಗಳು, SUV ಗಳು ಮತ್ತು ಉನ್ನತ-ಮಟ್ಟದ ಐಷಾರಾಮಿ ವಾಹನಗಳು.

ವೈಯಕ್ತಿಕ ಬಳಕೆ ವಿಮಾನ.

ಮನರಂಜನೆ, ಕ್ರೀಡೆಗಾಗಿ ವಿಹಾರ ನೌಕೆಗಳು ಮತ್ತು ಇತರ ಹಡಗುಗಳು.

ಲಾಟರಿ ಟಿಕೆಟ್‌ಗಳು, ಬೆಟ್ಟಿಂಗ್, ಜೂಜು, ಕುದುರೆ ರೇಸಿಂಗ್ ಮತ್ತು ಕ್ಯಾಸಿನೊಗಳು.

ಕ್ಯಾಸಿನೊಗಳು, ರೇಸ್ ಕ್ಲಬ್‌ಗಳು, ಕ್ಯಾಸಿನೊಗಳು ಅಥವಾ ರೇಸ್ ಕ್ಲಬ್‌ಗಳನ್ನು ಹೊಂದಿರುವ ಯಾವುದೇ ಸ್ಥಳ ಅಥವಾ ಐಪಿಎಲ್‌ನಂತಹ ಕ್ರೀಡಾಕೂಟಗಳು

ಪರಿಹಾರ ಸೆಸ್ ಖಾತೆಯಡಿಯಲ್ಲಿ ಸಾಲ ಮತ್ತು ಬಡ್ಡಿ ಪಾವತಿ ಬಾಧ್ಯತೆಗಳು ಸಂಪೂರ್ಣವಾಗಿ ಬಿಡುಗಡೆಯಾಗುವವರೆಗೆ ಪಾನ್ ಮಸಾಲ, ಗುಟ್ಕಾ, ಸಿಗರೇಟ್, ಜಗಿಯುವ ತಂಬಾಕು ಉತ್ಪನ್ನಗಳಾದ ಜರ್ದಾ, ತಂಬಾಕುಗಳು ಜಿಎಸ್‌ಟಿ ಮತ್ತು ಪರಿಹಾರ ಸೆಸ್ ದರಗಳಲ್ಲಿ ಮುಂದುವರಿಯುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಯುದ್ಧದ ಕುರಿತು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಮೋದಿ ಮಹತ್ವದ ಮಾತುಕತೆ

ಗುಜರಾತ್: ರಾಹುಲ್ ಗಾಂಧಿ ಪರ ವಕಾಲತ್ತು ವಹಿಸಿದ್ದ ವಕೀಲ ಫಿರೋಜ್ ಪಠಾಣ್ ಮೃತದೇಹ ತಾಪಿ ನದಿಯ ದಡದಲ್ಲಿ ಪತ್ತೆ!

ಭಾರತಕ್ಕೆ ಉತ್ತಮ ವಿರೋಧಪಕ್ಷಕ್ಕಾಗಿ ಅಭಿಯಾನ ಅಗತ್ಯ: ಸೀತಾರಾಮನ್

ಧರ್ಮಸ್ಥಳ ಬುರುಡೆ ರಹಸ್ಯ ಬಹಿರಂಗ: ಮುಸುಕುಧಾರಿಗೆ 'ಬುರುಡೆ' ಕೊಟ್ಟಿದ್ದು ಸೌಜನ್ಯ ಮಾವ!

ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ; ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಅನುಷ್ಠಾನ

SCROLL FOR NEXT