ವಾಣಿಜ್ಯ

GST 2.0 ಇಂದಿನಿಂದ ಜಾರಿ: ಯಾವ ವಸ್ತುಗಳು ಅಗ್ಗ, ಯಾವುದು ದುಬಾರಿ?

ಇದರಿಂದ ನವರಾತ್ರಿ ಹಬ್ಬದ ಋತುವಿನಲ್ಲಿ ಬಳಕೆಯಲ್ಲಿ ಹೆಚ್ಚಳ ಮತ್ತು ಮಾರಾಟದಲ್ಲಿ ಏರಿಕೆ ಕಾಣುವ ನಿರೀಕ್ಷೆಯಿದೆ.

ಪ್ರಮುಖ ಎಫ್‌ಎಂಸಿಜಿ(Fast-Moving Consumer Goods) ಕಂಪನಿಗಳು ಬೆಲೆಗಳನ್ನು ಕಡಿತಗೊಳಿಸಿರುವುದರಿಂದ, ಜಿಎಸ್‌ಟಿ ಕಡಿತದ ಪ್ರಯೋಜನಗಳನ್ನು ಗ್ರಾಹಕರಿಗೆ ವಿಸ್ತರಿಸಿರುವುದರಿಂದ, ಇಂದು ಸೋಮವಾರದಿಂದ ದಿನನಿತ್ಯದ ಅಗತ್ಯ ವಸ್ತುಗಳು ಮತ್ತು ಆಹಾರ ಉತ್ಪನ್ನಗಳು ಅಗ್ಗವಾಗಲಿವೆ.

ಇದರಿಂದ ನವರಾತ್ರಿ ಹಬ್ಬದ ಋತುವಿನಲ್ಲಿ ಬಳಕೆಯಲ್ಲಿ ಹೆಚ್ಚಳ ಮತ್ತು ಮಾರಾಟದಲ್ಲಿ ಏರಿಕೆ ಕಾಣುವ ನಿರೀಕ್ಷೆಯಿದೆ.

ನಿರಂತರ ಆಹಾರ ಹಣದುಬ್ಬರ ಮತ್ತು ನಗರ ಬಳಕೆಯ ನಿಧಾನಗತಿಯನ್ನು ಕಂಡ ಕೆಲವು ಸವಾಲು ಎದುರಿಸುವುದರಿಂದ FMCG ಕಂಪನಿಗಳು ಯಾವುದೇ ಅಡೆತಡೆಯಿಲ್ಲದೆ ಬೆಲೆಯಲ್ಲಿ ತಕ್ಷಣದ ಕಡಿತದೊಂದಿಗೆ GST 2.0 ರ ಪ್ರಯೋಜನಗಳನ್ನು ವಿಸ್ತರಿಸಿವೆ, ಜೊತೆಗೆ ಹಬ್ಬಗಳಿಗೆ ಕೆಲವು ರಿಯಾಯಿತಿಗಳನ್ನು ನೀಡಿವೆ.

FMCG ಉತ್ಪನ್ನಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳು ಸೋಪ್‌ಗಳು, ಶಾಂಪೂ, ಬೇಬಿ ಡೈಪರ್‌ಗಳು, ಟೂತ್‌ಪೇಸ್ಟ್, ರೇಜರ್‌ಗಳು ಮತ್ತು ಆಫ್ಟರ್-ಶೇವ್ ಲೋಷನ್‌ಗಳು ಸೇರಿದಂತೆ ತಮ್ಮ ಉತ್ಪನ್ನಗಳ ಮೇಲೆ ಹೊಸ MRP ದರಗಳೊಂದಿಗೆ ಪರಿಷ್ಕೃತ ಬೆಲೆ ಪಟ್ಟಿಗಳನ್ನು ಬಿಡುಗಡೆ ಮಾಡಿವೆ, ಇದು ಸೆಪ್ಟೆಂಬರ್ 22 ರಿಂದ ಜಾರಿಗೆ ಬರುತ್ತದೆ.

ಹಾಗಾದರೆ ಯಾವುದು ಇಂದಿನಿಂದ ಅಗ್ಗವಾಗುತ್ತವೆ, ಯಾವುದು ದುಬಾರಿಯಾಗುತ್ತವೆ ಎಂದು ನೋಡೋಣ

ಯಾವುದು ಅಗ್ಗ?

ಪ್ರಸ್ತುತ ಶೇ. 12ರಷ್ಟು ತೆರಿಗೆ ವಿಧಿಸಿರುವ ಅನೇಕ ಗೃಹೋಪಯೋಗಿ ಉತ್ಪನ್ನಗಳು ಶೇ. 5ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ. ಇದರಲ್ಲಿ ಟೂತ್‌ಪೇಸ್ಟ್, ಸೋಪ್‌, ಶಾಂಪುಗಳು, ಬಿಸ್ಕತ್ತು, ತಿಂಡಿ, ಜ್ಯೂಸ್‌ಗಳು, ತುಪ್ಪ, ಡೈರಿ ಉತ್ಪನ್ನಗಳು, ಬೈಸಿಕಲ್‌ ಮತ್ತು ಸ್ಟೇಷನರಿ, ಉಡುಪು, ಪಾದರಕ್ಷೆಗಳು ಸೇರಿವೆ. ಇದರಿಂದ ಮಧ್ಯಮ ವರ್ಗದ ಕುಟುಂಬಗಳಿಗೆ ಸಾಕಷ್ಟು ಪ್ರಯೋಜನವಾಗಲಿದೆ.

ಗೃಹೋಪಯೋಗಿ ಉಪಕರಣಗಳಾದ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲಿನ ತೆರಿಗೆ ಶೇ. 28ರಿಂದ ಶೇ. 18ಕ್ಕೆ ಇಳಿಯಲಿದೆ. ಇದರ ಪರಿಣಾಮ ಎಲೆಕ್ಟ್ರಾನಿಕ್ ಉತ್ಪನ್ನಗಳು ಶೇ. 7- 8ರಷ್ಟು ಅಗ್ಗವಾಗಲಿದೆ. ಇದರಲ್ಲಿ ಎಸಿ, ರೆಫ್ರಿಜರೇಟರ್‌, ಡಿಶ್‌ವಾಶರ್‌, ಟಿವಿ, ಸಿಮೆಂಟ್ ಇತ್ಯಾದಿಗಳು ಸೇರಿವೆ. ಇವು ಭಾರತದಲ್ಲಿ ಬೆಳೆಯುತ್ತಿರುವ ಮಧ್ಯಮ ವರ್ಗಕ್ಕೆ ಬಹುದೊಡ್ಡ ಪ್ರಯೋಜನವನ್ನು ಒದಗಿಸಲಿದೆ.

ಅಲ್ಲದೇ ಆಟೋಮೊಬೈಲ್ ವಲಯವು ಕೂಡ ಇದರ ವ್ಯಾಪ್ತಿಗೆ ಬರಲಿದೆ. 1,200 ಸಿಸಿಗಿಂತ ಕಡಿಮೆ ಎಂಜಿನ್ ಗಾತ್ರ ಹೊಂದಿರುವ ಸಣ್ಣ ಕಾರುಗಳು, ದ್ವಿಚಕ್ರ ವಾಹನಗಳ ತೆರಿಗೆ ಕೂಡ ಶೇ. 28ರಿಂದ ಶೇ. 18ಕ್ಕೆ ಇಳಿಯಲಿದೆ. ದೊಡ್ಡ ಐಷಾರಾಮಿ ಕಾರುಗಳು ಮತ್ತು ಎಸ್‌ಯುವಿಗಳ ಮೇಲಿನ ತೆರಿಗೆಯಲ್ಲಿ ಇದರಿಂದ ವ್ಯತ್ಯಾಸವಾಗುವುದಿಲ್ಲ.

ಕಡಿಮೆ ಬೆಲೆಗೆ ಸಣ್ಣ ವಾಹನಗಳು ಗ್ರಾಹಕರ ಕೈಗೆ ದೊರೆತರೆ ಏರಿಳಿತದ ಮಾರಾಟವನ್ನು ಕಂಡಿರುವ ವಲಯದಲ್ಲಿ ಮತ್ತೆ ಬೇಡಿಕೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇದರಿಂದ ಮಾರುತಿ ಸುಜುಕಿ, ಹುಂಡೈ, ಟಾಟಾ ಮೋಟಾರ್ಸ್‌ನಂತಹ ಆಟೋ ಕಂಪೆನಿಗಳಿಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ.

ಇನ್ನು ವಿಮೆ ಮತ್ತು ಹಣಕಾಸು ಸೇವೆಗಳು ಕೂಡ ಶೇ. 18ರಷ್ಟು ಜಿಎಸ್ ಟಿ ಅನ್ನು ಒಳಗೊಳ್ಳಲಿದೆ. ಇದರಿಂದ ಪ್ರೀಮಿಯಂ ಮೊತ್ತಗಳ ಮೇಲೆ ಪರಿಣಾಮ ಬೀರುವುದು. ಕಡಿಮೆ ದರಕ್ಕೆ ವಿಮೆ ಸೌಲಭ್ಯ ದೊರೆತರೆ ಮಧ್ಯಮ ವರ್ಗಕ್ಕೆ ಇದರಲ್ಲಿ ಹೂಡಿಕೆ ಮಾಡುವುದು ಸುಲಭವಾಗುತ್ತದೆ. ಅವರ ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ.

ಏನು ದುಬಾರಿ ?

ಜಿಎಸ್ ಟಿ 2.0 ಅಡಿಯಲ್ಲಿ ಎಲ್ಲವೂ ಅಗ್ಗವಾಗುವುದಿಲ್ಲ. ಕೆಲವು ಸರಕುಗಳು ಶೇ. 40ರಷ್ಟು ತೆರಿಗೆಯನ್ನು ಎದುರಿಸಲಿದೆ. ಇದರಲ್ಲಿ ತಂಬಾಕು ಉತ್ಪನ್ನಗಳು, ಮದ್ಯ, ಪಾನ್ ಮಸಾಲಾ, ಆನ್‌ಲೈನ್ ಬೆಟ್ಟಿಂಗ್, ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಸೇರಿವೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿ ಯಿಂದ ಹೊರಗೆ ಇರಿಸಲಾಗುವುದು. ಹೀಗಾಗಿ ಇಂಧನ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ವಜ್ರ, ಅಮೂಲ್ಯ ಕಲ್ಲುಗಳಂತಹ ಐಷಾರಾಮಿ ವಸ್ತುಗಳ ಮೇಲೂ ಹೆಚ್ಚಿನ ತೆರಿಗೆ ವಿಧಿಸುವ ಸಾಧ್ಯತೆಗಳಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರು ಶೇ. 8.5 ರಷ್ಟು ಬೆಳವಣಿಗೆಯೊಂದಿಗೆ ಮುಂಬೈ, ದೆಹಲಿಗಿಂತ ಹೆಚ್ಚು ವೇಗವಾಗಿ ಬೆಳೆಯುತ್ತಿದೆ! ಇಲ್ಲಿದೆ ವರದಿ...

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಸಿದ್ದರಾಮಯ್ಯ 'ಫೇಸ್ ಬುಕ್ 'ನಲ್ಲಿ ಲೈವ್ ಬಂದರೆ ಹೇಗಿರುತ್ತದೆ? ಈ Video ನೋಡಿ..

ರಾಜ್ಯಪಾಲರು ಮಸೂದೆಗಳನ್ನು ಅನಿರ್ದಿಷ್ಟವಾಗಿ ವಿಳಂಬ ಮಾಡಲು ಸಾಧ್ಯವಿಲ್ಲ; ಹಾಗೆಂದು ಅನುಮೋದನೆಗೆ ನಾವು ಕಾಲಮಿತಿ ನಿಗದಿಪಡಿಸಲಾಗದು: ಸುಪ್ರೀಂ ಕೋರ್ಟ್

ಕುನೋದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ ಭಾರತದಲ್ಲಿ ಜನಿಸಿದ ಚೀತಾ; Video

ದಾಖಲೆಯ 10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್; ಮೋದಿ ಭಾಗಿ; Video

SCROLL FOR NEXT