ಬಿಗ್ ಬಿಲಿಯನ್ ಡೇ ಜಾಹೀರಾತು 
ವಾಣಿಜ್ಯ

iPhone 16, 16 Pro ಆರ್ಡರ್ Cancelled! ಏನಿದು 'ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ' ಶಾಕ್?

ಫ್ಲಿಪ್‌ಕಾರ್ಟ್ ಈಗ ದುಬಾರಿ ಬೆಲೆಗಳ ಹಿಂದೆ ಬಿದ್ದು ಜನರನ್ನು ವಂಚಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ನವದೆಹಲಿ: ಸದ್ಯ ನಡೆಯುತ್ತಿರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಮಾರಾಟದಲ್ಲಿ iPhone 16 ಮತ್ತು iPhone 16 Pro ಮಾಡೆಲ್ ಗಳಿಗೆ ಕೆಲವೊಂದು ಭಾರಿ ರಿಯಾಯಿತಿ ಬೆಲೆಗಳನ್ನು ಪರಿಚಯಿಸಲಾಗಿತ್ತು. ಇದು ಪ್ರಪಂಚದಾದ್ಯಂತ ಸಾವಿರಾರು ಖರೀದಿದಾರರನ್ನು ಆಕರ್ಷಿಸಿತು. ಸೆಪ್ಟೆಂಬರ್ 22 ರಂದು Flipkart Black ಮತ್ತು ಸದಸ್ಯರಿಗೆ ನೇರವಾಗಿ ಮಾರಾಟ ಮಾಡಿತ್ತು. ಇಂದು ಕೂಡಾ ಎಲ್ಲಾ ಫ್ಲಿಪ್‌ಕಾರ್ಟ್ ಬಳಕೆದಾರರಿಗೆ ನೇರವಾಗಿ ಮಾರಾಟ ನಡೆಯುತ್ತಿದೆ.

ಆದಾಗ್ಯೂ, ಫ್ಲಿಪ್‌ಕಾರ್ಟ್ ಈಗ ದುಬಾರಿ ಬೆಲೆಗಳ ಹಿಂದೆ ಬಿದ್ದು ಜನರನ್ನು ವಂಚಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಏಕೆಂದರೆ ಆರ್ಡರ್ ಮಾಡಿದ ಕೆಲ ಗಂಟೆಗಳ ನಂತರ ತಮ್ಮ ಆರ್ಡರ್ ಅನ್ನು ಇ-ಕಾಮರ್ಸ್ ದೈತ್ಯ ರದ್ದುಗೊಳಿಸುತ್ತಿದೆ ಎಂದು ಖರೀದಿದಾರರು ವರದಿ ಮಾಡುತ್ತಿದ್ದಾರೆ.

ಇದು ಪಾರದರ್ಶಕತೆ, ಹೊಣೆಗಾರಿಕೆಯೇ ಅಥವಾ ಹೆಚ್ಚಿನ ಬೇಡಿಕೆ ಇರುವುದರಿಂದ ಸ್ವಲ್ಪ ಸಮಯ ತೆಗೆದುಕೊಳ್ಳುವ ತಂತ್ರವೇ? ಎಂಬ ಕಾರಣಗಳನ್ನು ಹುಟ್ಟುಹಾಕುತ್ತಿದೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಮಾರಾಟದ ವಂಚನೆ ಕುರಿತು ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಈ ವರ್ಷ, ಫ್ಲಿಪ್‌ಕಾರ್ಟ್ ಸ್ಟ್ಯಾಂಡರ್ಡ್ iPhone 16 ಮತ್ತು iPhone 16 Pro ಮಾಡೆಲ್ ಗಳ ಮೇಲೆ ಭಾರಿ ರಿಯಾಯಿತಿಗಳ ಜಾಹೀರಾತು ನೀಡಿತ್ತು. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಪೇಜ್ ಪ್ರಕಾರ, iPhone 16, 128GB storage variant ಬೆಲೆ ರೂ. 51,999 ಮತ್ತು iPhone 16 Pro’s 128GB storage variant ಬೆಲೆ ರೂ.69,999 ಎಂದು ಜಾಹೀರಾತು ನಲ್ಲಿ ಹೇಳಲಾಗಿತ್ತು.

ಆರಂಭದಲ್ಲಿ ಕೆಲ ಖರೀದಿದಾರರು ಈ ಡಿಸ್ಕೌಂಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಈ ಕುತೂಹಲ ಹೆಚ್ಚಿನ ಕಾಲ ಇರಲಿಲ್ಲ. ಖರೀದಿದಾರರು ಹಣ ಪಾವತಿಸಿ ಆರ್ಡರ್ ಮಾಡುತ್ತಿದ್ದಂತೆಯೇ ಅವುಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಅಸಮಾಧಾನಗೊಂಡ ಕೆಲ ಐಪೋನ್ ಖರೀದಿದಾರರು ಸಾಮಾಜಿಕ ಜಾಲತಾಣಗಳ ಮೂಲಕ 'ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇ ಸೇಲ್' ಒಂದು ವಂಚನೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಧರ್ಮಸ್ಥಳ ಪ್ರಕರಣ: ದಕ್ಷಿಣ ಕನ್ನಡದಿಂದ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು!

ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ಸಿಕ್ಕ ಮರುದಿನವೇ ಚಾಮುಂಡಿಬೆಟ್ಟದಲ್ಲಿ ಸೂತಕದ ಛಾಯೆ: ಅರ್ಚಕ ರಾಜು ನಿಧನ

ಚೊಚ್ಚಲ Ballon d’Or ಗೆದ್ದ ಫ್ರೆಂಚ್ ಫುಟ್ಬಾಲ್ ಆಟಗಾರ ಔಸ್ಮಾನೆ ಡೆಂಬೆಲೆ; ಇತಿಹಾಸ ನಿರ್ಮಿಸಿದ ಎಟಾನಾ ಬೊನ್ಮತಿ!

ಇಂತಹ ಮಳೆಯನ್ನು ನಾನು ಎಂದೂ ನೋಡಿಲ್ಲ: ಕೋಲ್ಕತ್ತಾ ಪ್ರವಾಹದ ಬಗ್ಗೆ ಮಮತಾ

ವಿಪ್ರೋ ಕ್ಯಾಂಪಸ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಿ: ಅಜೀಂ ಪ್ರೇಮ್‌ಜಿಗೆ ಸಿಎಂ ಸಿದ್ದರಾಮಯ್ಯ ಪತ್ರ

SCROLL FOR NEXT