ಮುಂಬೈ ಷೇರು ಮಾರುಕಟ್ಟೆ  
ವಾಣಿಜ್ಯ

ಕಚ್ಚಾ ತೈಲ ಬೆಲೆ ಏರಿಕೆ: ಷೇರು ಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ ಕುಸಿತ

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 821.79 ಅಂಕಗಳಷ್ಟು ಕುಸಿದು 76,674.57ಕ್ಕೆ ತಲುಪಿತು. 50 ಷೇರುಗಳ ಎನ್‌ಎಸ್‌ಇ ನಿಫ್ಟಿ 287.3 ಅಂಕಗಳಷ್ಟು ಇಳಿದು 23,890.35ಕ್ಕೆ ತಲುಪಿತು.

ಮುಂಬೈ: ಜಾಗತಿಕ ಮಾರುಕಟ್ಟೆಯ ದುರ್ಬಲ ಪ್ರವೃತ್ತಿ, ಕಚ್ಚಾ ತೈಲದ ಬೆಲೆಯಲ್ಲಿ ತೀವ್ರ ಏರಿಕೆ ಮತ್ತು ವಿದೇಶಿ ಹೂಡಿಕೆದಾರರ ಹಣ ಹಿಂತೆಗೆತದ ಪರಿಣಾಮವಾಗಿ ಇಂದು ಗುರುವಾರ ಬೆಳಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಕುಸಿತ ಕಂಡವು.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 821.79 ಅಂಕಗಳಷ್ಟು ಕುಸಿದು 76,674.57ಕ್ಕೆ ತಲುಪಿತು. 50 ಷೇರುಗಳ ಎನ್‌ಎಸ್‌ಇ ನಿಫ್ಟಿ 287.3 ಅಂಕಗಳಷ್ಟು ಇಳಿದು 23,890.35ಕ್ಕೆ ತಲುಪಿತು.

ಸೆನ್ಸೆಕ್ಸ್‌ನ ಪ್ರಮುಖ 30 ಕಂಪನಿಗಳಲ್ಲಿ ಇಂಟರ್‌ಗ್ಲೋಬ್ ಏವಿಯೇಷನ್, ಇಟರ್ನಲ್, ಅಲ್ಟ್ರಾಟೆಕ್ ಸಿಮೆಂಟ್, ಮಹೀಂದ್ರಾ & ಮಹೀಂದ್ರಾ, ಆಕ್ಸಿಸ್ ಬ್ಯಾಂಕ್ ಮತ್ತು ಅಡಾಣಿ ಪೋರ್ಟ್ಸ್ ಭಾರೀ ಕುಸಿತ ಕಂಡವು. ಬಜಾಜ್ ಫೈನಾನ್ಸ್, ಬಜಾಜ್ ಫಿನ್ಸರ್ವ್, ಟೆಕ್ ಮಹೀಂದ್ರಾ, ಇನ್ಫೋಸಿಸ್ ಮತ್ತು ಪವರ್ ಗ್ರಿಡ್ ಲಾಭ ಕಂಡವು.

ಜಾಗತಿಕ ತೈಲದ ಮಾನದಂಡವಾದ ಬ್ರೆಂಟ್ ಕಚ್ಚಾತೈಲ 4.08 ಶೇಕಡಾ ಏರಿಕೆಯಾಗಿ ಬ್ಯಾರೆಲ್‌ಗೆ 122.8 ಅಮೆರಿಕನ್ ಡಾಲರ್‌ಗೆ ವಹಿವಾಟಾಗುತ್ತಿದೆ.

ವಿದೇಶಿ ಸಂಸ್ಥಾತ್ಮಕ ಹೂಡಿಕೆದಾರರು (FIIs) 2,468.42 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯದ ಅಂಕಿಅಂಶಗಳು ಸೂಚಿಸುತ್ತವೆ.

ಏಷ್ಯನ್ ಮಾರುಕಟ್ಟೆಗಳಲ್ಲಿ ದಕ್ಷಿಣ ಕೊರಿಯಾದ ಕೋಸ್ಪಿ, ಜಪಾನ್‌ನ ನಿಕ್ಕಿ 225 ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕಗಳು ಕುಸಿತ ಕಂಡಿದ್ದು, ಶಾಂಘೈ ಎಸ್‌ಎಸ್‌ಇ ಕಾಂಪೊಸಿಟ್ ಸೂಚ್ಯಂಕ ಸ್ವಲ್ಪ ಮಟ್ಟಿನ ಏರಿಕೆ ಕಂಡಿದೆ. ಅಮೆರಿಕದ ಮಾರುಕಟ್ಟೆಗಳು ಬಹುತೇಕ ಕುಸಿತದೊಂದಿಗೆ ಮುಕ್ತಾಯಗೊಂಡವು.

ಜಾಗತಿಕ ಭೂರಾಜಕೀಯ ಉದ್ವಿಗ್ನತೆಗಳು, ವಿಶೇಷವಾಗಿ ಸರಬರಾಜು ವ್ಯತ್ಯಯಗಳ ಬಗ್ಗೆ ಆತಂಕಗಳು ಮುಂದುವರಿದಿರುವುದರಿಂದ ಮಾರುಕಟ್ಟೆಗಳಲ್ಲಿ ಹೂಡಿಕೆದಾರರ ಮನೋಭಾವ ಕುಗ್ಗಿದ್ದು,ಷೇರು ಮಾರುಕಟ್ಟೆಗಳು ಹೆಚ್ಚು ಸಂವೇದನಶೀಲವಾಗಿವೆ ಎಂದು ಲೈವ್‌ಲಾಂಗ್ ವೆಲ್ತ್ ಸಂಸ್ಥಾಪಕ ಹಾಗೂ ಸಂಶೋಧನಾ ವಿಶ್ಲೇಷಕ ಹರಿಪ್ರಸಾದ್ ಕೆ ತಿಳಿಸಿದ್ದಾರೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ

ಭಾರತೀಯ ರೂಪಾಯಿ ಅಮೆರಿಕನ್ ಡಾಲರ್ ಎದುರು ಇತಿಹಾಸದಲ್ಲೇ ಅತಿ ಕಡಿಮೆ ಮಟ್ಟವಾದ 95.07ಕ್ಕೆ ಕುಸಿದು, ಒಂದು ಹಂತದಲ್ಲಿ 95.33ರವರೆಗೆ ಇಳಿಯಿತು. ಬಲವಾದ ಅಮೆರಿಕನ್ ಡಾಲರ್ ಮತ್ತು ಕಚ್ಚಾ ತೈಲದ ಬೆಲೆ ಏರಿಕೆಯೊಂದಿಗೆ, ವಿದೇಶಿ ಹೂಡಿಕೆ ಹಿಂತೆಗೆತ ಮತ್ತು ಭೂರಾಜಕೀಯ ಉದ್ವಿಗ್ನತೆಗಳು ರೂಪಾಯಿಗೆ ಒತ್ತಡ ತಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಶ್ಚಿಮ ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 100ಕ್ಕೆ ಏರಿಕೆ, ಹಲವರಿಗೆ ಗಾಯ

9 ದಿನಗಳಿಂದ ಉಪವಾಸ: ದೇವೇಂದ್ರ ಮಹ್ತೊ ಆಸ್ಪತ್ರೆಗೆ ದಾಖಲು; ಪೊಲೀಸರ ಲಾಠಿಚಾರ್ಚ್ ಖಂಡಿಸಿ ನಾಳೆ ಬಂದ್ ಗೆ BJP ಕರೆ!

ಶಾರುಖ್ ನಟನೆಯ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಪೋಸ್ಟ್ ವೈರಲ್!

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿ.ಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ನಾವು ಹಿಂಸಾಚಾರನ ಬೆಂಬಲಿಸಲ್ಲ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ: ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!