FD or RD ಯಾವುದರಲ್ಲಿ ಹೆಚ್ಚು ಲಾಭ? Online Desk
ವಾಣಿಜ್ಯ

FD or RD: ಯಾವುದರಲ್ಲಿ ಹೆಚ್ಚು ಲಾಭ? ಹೂಡಿಕೆಗೂ ಮುಂಚೆ ಈ ವಿಷಯ ತಿಳ್ಕೊಳಿ!

FD or RD: ಹೂಡಿಕೆ ಮಾಡಬೇಕು ಅಂತ ಯೋಚಿಸಿದಾಗ ಮೊದಲು ನೆನಪಿಗೆ ಬರೋದು FD ಮತ್ತು RD. ಎರಡೂ ಬ್ಯಾಂಕ್ ಆಫರ್ ಮಾಡುವ ಸುರಕ್ಷಿತ ಹೂಡಿಕೆ ಆಯ್ಕೆಗಳು. ಅದರಂತೆ ಎರಡರಲ್ಲೂ ರಿಸ್ಕ್ ಕಡಿಮೆ, ಗ್ಯಾರಂಟಿ ರಿಟರ್ನ್ ಸಿಗೋದ್ರಿಂದ ಮಧ್ಯಮ ವರ್ಗದವರ ಮೊದಲ ಆಯ್ಕೆ ಇದೇ. ಹಾಗಾದರೆ ಯಾವುದು ಗೊತ್ತಾ?

FD vs RD Which Is Better Investment Tips: ಹೂಡಿಕೆ (Investment) ಮಾಡಬೇಕು ಅಂತ ಯೋಚಿಸಿದಾಗ ಮೊದಲು ನೆನಪಿಗೆ ಬರೋದು FD ಮತ್ತು RD. ಎರಡೂ ಬ್ಯಾಂಕ್ ಆಫರ್ (Bank Offer) ಮಾಡುವ ಸುರಕ್ಷಿತ ಹೂಡಿಕೆ ಆಯ್ಕೆಗಳು. ಅದರಂತೆ ಎರಡರಲ್ಲೂ ರಿಸ್ಕ್ ಕಡಿಮೆ, ಗ್ಯಾರಂಟಿ ರಿಟರ್ನ್ ಸಿಗೋದ್ರಿಂದ ಮಧ್ಯಮ ವರ್ಗದವರ ಮೊದಲ ಆಯ್ಕೆ ಇದೇ. ಆದ್ರೆ ಫಿಕ್ಸೆಡ್ ಡೆಪಾಸಿಟ್ (Fixed Deposit) ಒಳ್ಳೇದಾ ರಿಕರಿಂಗ್ ಡೆಪಾಸಿಟ್ (Recurring Deposit) ಒಳ್ಳೇದಾ? ಯಾವುದರಲ್ಲಿ ಜಾಸ್ತಿ ಲಾಭ ಸಿಗುತ್ತೆ? ಹೂಡಿಕೆಗೂ ಮುಂಚೆ ಇದನ್ನು ತಿಳ್ಕೊಳ್ಳೋದು ಮುಖ್ಯ. ಹಾಗಾಗಿ ಆ ಕುರಿತ ವರದಿ ಇಲ್ಲಿದೆ.

FD ಅಂದ್ರೆ ಏನು?
ಫಿಕ್ಸೆಡ್ ಡೆಪಾಸಿಟ್ (Fixed Deposit) ಅಂದ್ರೆ ಒಂದು ಮೊತ್ತದ ಹಣವನ್ನು ನಿರ್ದಿಷ್ಟ ಅವಧಿಗೆ ಬ್ಯಾಂಕ್‌ನಲ್ಲಿ ಠೇವಣಿ ಇಡುವುದು. ಉದಾಹರಣೆಗೆ 1 ಲಕ್ಷ ರೂಪಾಯಿ 1 ವರ್ಷಕ್ಕೆ FD ಮಾಡಿದರೆ, ಅವಧಿ ಮುಗಿದ ಮೇಲೆ ಅಸಲು ಅದರೊಂದಿಗೆ ಬಡ್ಡಿ ಒಟ್ಟಿಗೆ ಸಿಗುತ್ತೆ. ಇನ್ನು ಇದರ ಬಡ್ಡಿ ದರ ಸಾಮಾನ್ಯವಾಗಿ 6% ರಿಂದ 7.5% ವರೆಗೆ ಇರುತ್ತೆ. ಜೊತೆಗೆ ಸೀನಿಯರ್ ಸಿಟಿಜನ್‌ಗಳಿಗೆ 0.5% ಹೆಚ್ಚುವರಿ ಬಡ್ಡಿ ಸಿಗುತ್ತೆ. ಏತನ್ಮಧ್ಯೆ ತುರ್ತು ಸಂದರ್ಭ ಬಂದ್ರೆ ನಿಗದಿತ ಅವಧಿಗೂ ಮುಂಚೆನೇ ಹಣ ವಾಪಸ್ ತೆಗೆಯಬಹುದು, ಆದ್ರೆ ದಂಡ ಬೀಳುತ್ತೆ.

RD ಅಂದ್ರೆ ಏನು?
ರಿಕರಿಂಗ್ ಡೆಪಾಸಿಟ್ (Recurring Deposit) ಅಂದ್ರೆ ಪ್ರತಿ ತಿಂಗಳು ಒಂದು ನಿರ್ದಿಷ್ಟ ಮೊತ್ತದ ಹಣವನ್ನು ಬ್ಯಾಂಕ್‌ನಲ್ಲಿ ಜಮಾ ಮಾಡುವುದು. ಉದಾಹರಣೆಗೆ ತಿಂಗಳಿಗೆ 5000 ರೂಪಾಯಿ 2 ವರ್ಷ RD ಮಾಡಿದರೆ, ಅವಧಿ ಮುಗಿದ ಮೇಲೆ ಒಟ್ಟು ಹಣ ಸೇರಿ ಬಡ್ಡಿ ಸಿಗುತ್ತೆ. ಇನ್ನು, ಇದರ RD ಬಡ್ಡಿ ದರವೂ FD ಗೆ ಸಮಾನವಾಗಿರುತ್ತದೆ.

ಉದಾಹರಣೆಗೆ: ನೀವು ₹12,000 ಹಣವನ್ನು ವರ್ಷದ RD ಇಟ್ಟರೆ, ಮೊದಲ ತಿಂಗಳ ₹1,000 ಗೆ ಮಾತ್ರ 12 ತಿಂಗಳ ಬಡ್ಡಿ ಸಿಗುತ್ತದೆ. ಕೊನೆಯ ತಿಂಗಳು ಕಟ್ಟುವ ₹1,000 ಗೆ ಕೇವಲ 1 ತಿಂಗಳ ಬಡ್ಡಿ ಸಿಗುತ್ತದೆ. ಆದ್ದರಿಂದ ಬಡ್ಡಿ ದರ ಒಂದೇ ಆಗಿದ್ದರೂ, ಎಫ್‌ಡಿಗೆ ಹೋಲಿಸಿದರೆ RDಯಲ್ಲಿ ಸಿಗುವ ಒಟ್ಟು ಬಡ್ಡಿಯ ಮೊತ್ತ ಕಡಿಮೆಯಿರುತ್ತದೆ. ಹಾಗಾಗಿ, ಉಳಿತಾಯದ ಅಭ್ಯಾಸ ಇಲ್ಲದವರಿಗೆ RD ತುಂಬಾ ಒಳ್ಳೆಯದು.

FD vs RD - ಯಾವುದರಲ್ಲಿ ಹೆಚ್ಚು ಲಾಭ?

  • ಲಂಪ್‌ಸಮ್ ಹಣ ಇದ್ದರೆ FD ಬೆಸ್ಟ್. ಯಾಕಂದ್ರೆ, ಒಟ್ಟಿಗೆ ದೊಡ್ಡ ಮೊತ್ತ ಠೇವಣಿ ಇಡಬಹುದು. ಅದರಲ್ಲೂ, ಒಟ್ಟಿಗೆ ಹಣ ಇಡುವುದರಿಂದ ಬಡ್ಡಿ ಜಾಸ್ತಿ ಸಿಗುತ್ತೆ.

  • ತಿಂಗಳ ಉಳಿತಾಯ ಮಾಡುವವರಿಗೆ RD ಬೆಸ್ಟ್. ಯಾಕಂದ್ರೆ ಪ್ರತಿ ತಿಂಗಳು ಸಣ್ಣ ಸಣ್ಣ ಮೊತ್ತ ಕಟ್ಟಿ ದೊಡ್ಡ ಮೊತ್ತ ಕೂಡಿಸಬಹುದು.

  • ಬಡ್ಡಿ ದರ ಎರಡಕ್ಕೂ ಬಹುತೇಕ ಒಂದೇ ಇರುತ್ತೆ. ಆದ್ರೆ FDನಲ್ಲಿ ಬಡ್ಡಿಯನ್ನು ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ಹಣ ತೆಗೆಯುವ ಆಯ್ಕೆ ಇರುತ್ತೆ. ಆದರೆ, RD ನಲ್ಲಿ ಅವಧಿ ಮುಗಿದ ಮೇಲಷ್ಟೇ ಸಿಗುತ್ತೆ.

  • ತೆರಿಗೆ ವಿಚಾರದಲ್ಲೂ ಎರಡಕ್ಕೂ TDS ಅನ್ವಯ ಆಗುತ್ತೆ. 5 ವರ್ಷದ ಟ್ಯಾಕ್ಸ್ ಸೇವಿಂಗ್ FD ಗೆ 80C ಪ್ರಯೋಜನ ಇದೆ.

  • ಅವಧಿ: FDಯನ್ನು ಕನಿಷ್ಠ 7 ದಿನಗಳಿಂದ 10 ವರ್ಷಗಳವರೆಗೆ ಮಾಡಬಹುದು. RDಯನ್ನು ಕನಿಷ್ಠ 6 ತಿಂಗಳಿಂದ 10 ವರ್ಷಗಳವರೆಗೆ ಮಾಡಬಹುದು.

ಒಟ್ಟಾರೆಯಾಗಿ, ನಿಮ್ಮ ಬಳಿ ಒಟ್ಟಿಗೆ ಹಣ ಇದ್ದರೆ FD ಆಯ್ಕೆ ಮಾಡಿ. ಸಂಬಳದಿಂದ ಪ್ರತಿ ತಿಂಗಳು ಉಳಿಸಲು ಬಯಸಿದರೆ RD ಸೂಕ್ತ. ಅದರಲ್ಲೂ, ರಿಸ್ಕ್ ಇಲ್ಲದ, ಗ್ಯಾರಂಟಿ ರಿಟರ್ನ್ ಬಯಸುವವರಿಗೆ ಎರಡೂ ಒಳ್ಳೆಯ ಆಯ್ಕೆ. ಏತನ್ಮಧ್ಯೆ ಹೂಡಿಕೆ ಮಾಡುವ ಮುನ್ನ ಬ್ಯಾಂಕ್‌ನ ಬಡ್ಡಿ ದರ, ಅವಧಿ ಮತ್ತು ನಿಮ್ಮ ಗುರಿ ನೋಡಿ ನಿರ್ಧಾರ ಮಾಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್