ಅಂಚೆ ಕಚೇರಿ ಲೋಗೋ  Online Desk
ವಾಣಿಜ್ಯ

ಅಂಚೆ ಸೇವೆಯಲ್ಲಿ ಭಾರಿ ಬದಲಾವಣೆ ಮಾಡಿದ India Post; ಆಗಸ್ಟ್ 1 ರಿಂದ ದಾಖಲೆ ಮತ್ತು ಪಾರ್ಸೆಲ್ ಕಳುಹಿಸುವವರಿಗೆ ಹೊಸ ನಿಯಮ!

ದೇಶದ ಮೂಲೆ ಮೂಲೆಯನ್ನು ವೇಗವಾಗಿ ತಲುಪುವ ಪ್ರಮುಖ ಮಾರ್ಗವೆಂದರೆ ಅದು ಭಾರತೀಯ ಅಂಚೆ ಇಲಾಖೆಯು ತನ್ನ ಪೋಸ್ಟ್ ಸೇವೆಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ದೇಶದ ಮೂಲೆ ಮೂಲೆಯನ್ನು ವೇಗವಾಗಿ ತಲುಪುವ ಪ್ರಮುಖ ಮಾರ್ಗವೆಂದರೆ ಅದು ಭಾರತೀಯ ಅಂಚೆ ಇಲಾಖೆ ಮಾತ್ರ! ಅದೆಷ್ಟೋ ಆನ್ಲೈನ್ ಡೆಲಿವರಿಗಳು ಕೂಡ ತಲುಪಲು ಸಾಧ್ಯವಾಗದ ಸ್ಥಳಗಳನ್ನೂ ಕೂಡ ಅಂಚೆ ಇಲಾಖೆ ತಲುಪಿ, ಗ್ರಾಹಕರಿಗೆ ಸೇವೆ ನೀಡುತ್ತಿದೆ. ಇದರ ನಡುವೆಯೇ, ಅಂಚೆ ಇಲಾಖೆಯು ತನ್ನ ಪೋಸ್ಟ್ ಸೇವೆಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಆ ಕುರಿತ ವರದಿ ಇಲ್ಲಿದೆ:

ಬದಲಾವಣೆ ಏನು?

ಅಂಚೆ ಇಲಾಖೆಯು ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಸ್ಪೀಡ್ ಪೋಸ್ಟ್ ಸೇವೆಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿದೆ. ಅದರಂತೆ, ದಾಖಲೆ ಮತ್ತು ಪಾರ್ಸೆಲ್ ವಿಭಾಗಗಳಿಗೆ ಸ್ಪಷ್ಟ ವ್ಯಾಖ್ಯಾನ ನೀಡಿದ್ದು, ಹೊಸ ಶುಲ್ಕ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ದಾಖಲೆ ಮತ್ತು ಪಾರ್ಸೆಲ್ ನಡುವಿನ ವ್ಯತ್ಯಾಸವೇನು?

ಗ್ರಾಹಕರಲ್ಲಿದ್ದ ಗೊಂದಲ ನಿವಾರಿಸಲು ಅಂಚೆ ಇಲಾಖೆಯು ಎರಡೂ ವಿಭಾಗಗಳನ್ನು ಪ್ರತ್ಯೇಕಿಸಿದೆ:

  • ದಾಖಲೆ (Document): ಕೇವಲ ಕಾಗದದ ಪತ್ರಗಳು, ಯಾವುದೇ ಮರುಮಾರಾಟ ಮೌಲ್ಯವಿಲ್ಲದ ಮುದ್ರಿತ ಸಾಮಗ್ರಿಗಳು ಮಾತ್ರ ಈ ವಿಭಾಗಕ್ಕೆ ಸೇರುತ್ತವೆ. ಉದಾಹರಣೆಗೆ: ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಪಾಸ್‌ಬುಕ್, ಚೆಕ್‌ಬುಕ್, ಮತ್ತು ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು.

  • ಪಾರ್ಸೆಲ್ (Parcel): ಕಾಗದದ ದಾಖಲೆಗಳನ್ನು ಹೊರತುಪಡಿಸಿ ಪ್ಯಾಕೆಟ್‌ನಲ್ಲಿ ಪೆನ್, ಯುಎಸ್‌ಬಿ ಡ್ರೈವ್, ಬಟ್ಟೆ, ಪುಸ್ತಕಗಳು ಅಥವಾ ಇನ್ಯಾವುದೇ ಸಣ್ಣ ವಸ್ತುಗಳನ್ನು ಇಟ್ಟರೂ ಅದನ್ನು ಪಾರ್ಸೆಲ್ ಎಂದೇ ಪರಿಗಣಿಸಲಾಗುತ್ತದೆ.

ಗ್ಯಾರಂಟಿ ಡೆಲಿವರಿ ಸೇವೆ?

ಅಂಚೆ ಇಲಾಖೆಯು ನಿಯಮಿತ ಸಮಯಕ್ಕೆ ತಲುಪಿಸುವ ವಿಶೇಷ ಸ್ಪೀಡ್ ಪೋಸ್ಟ್ ಸೇವೆಗಳ ಶುಲ್ಕವನ್ನೂ ಪ್ರಕಟಿಸಿದೆ. ಅದರಂತೆ,

  • 24 ಸ್ಪೀಡ್ ಪೋಸ್ಟ್: 24 ಗಂಟೆಯೊಳಗೆ ತಲುಪಿಸುವ ಈ ಸೇವೆಗೆ ಸಾಮಾನ್ಯ ಗ್ರಾಹಕರಿಗೆ ತೂಕ ಮತ್ತು ದೂರದ ಆಧಾರದ ಮೇಲೆ ₹38 ರಿಂದ ₹186 ವರೆಗೆ ಶುಲ್ಕವಿರುತ್ತದೆ. (ಸಗಟು/ಬಲ್ಕ್ ಗ್ರಾಹಕರಿಗೆ ₹38 ರಿಂದ ₹100).

  • 48 ಸ್ಪೀಡ್ ಪೋಸ್ಟ್: 48 ಗಂಟೆಯೊಳಗೆ ತಲುಪಿಸುವ ಈ ಸೇವೆಗೆ ಚಿಲ್ಲರೆ ಗ್ರಾಹಕರಿಗೆ ₹61 ರಿಂದ ₹121 ವರೆಗೆ ಶುಲ್ಕವಿರುತ್ತದೆ. (ಸಗಟು ಗ್ರಾಹಕರಿಗೆ ₹48 ರಿಂದ ₹72).

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಭಟನಾನಿರತ ವಿದ್ಯಾರ್ಥಿ ವಿರುದ್ಧ ಪೆಲೆಟ್ ಗನ್ ಬಳಕೆ ವಿವಾದ; ಸಿಬ್ಬಂದಿಗಳ ಬೆನ್ನಿಗೆ ನಿಂತ CRPF ಮುಖ್ಯಸ್ಥ; ‘ನಿರ್ಭಯದಿಂದ ಕರ್ತವ್ಯ ನಿರ್ವಹಿಸುವಂತೆ ಸೂಚನೆ..!

Trump ಎಚ್ಚರಿಕೆ ಬೆನ್ನಲ್ಲೇ Iran ಮೇಲೆ ಅಮೆರಿಕ ಭೀಕರ ದಾಳಿ; ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ, ತೈಲ ಬೆಲೆ ಭಾರೀ ಏರಿಕೆ..!

ಅಧಿವೇಶನಕ್ಕೂ ಮುನ್ನ ಬಸವರಾಜ್ ಹೊರಟ್ಟಿಗೆ ಸರ್ಕಾರ ಶಾಕ್: ಸಭಾಪತಿ ಸ್ಥಾನ ರಾಜೀನಾಮೆ ನೀಡುವಂತೆ ಸೂಚನೆ, ಸಂಘರ್ಷ ಫಿಕ್ಸ್..!

ಪಕ್ಷಾಂತರಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್: DCC ಅಧ್ಯಕ್ಷರ ನೇಮಕಕ್ಕೆ ಹೊಸ ತಂತ್ರ, ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಫುಲ್ ಕಂಟ್ರೋಲ್...!

ಇನ್ನಿಬ್ಬರು DCM ನೇಮಕಕ್ಕೆ ಕಾಂಗ್ರೆಸ್ ಕಸರತ್ತು? 'ನನಗೂ ಅವಕಾಶ ಸಿಗುವ ವಿಶ್ವಾಸವಿದೆ' ಎಂದ ಸತೀಶ್ ಜಾರಕಿಹೊಳಿ..!