ವಿಲಿಯಂ ವಾಲ್ಷ್ 
ವಾಣಿಜ್ಯ

IndiGo ನೂತನ CEO ಆಗಿ ವಿಲಿಯಂ ವಾಲ್ಷ್ ನೇಮಕ

ವಿಮಾನಯಾನ ಉದ್ಯಮದ ಅನುಭವಿ ವಾಲ್ಷ್ ಅವರು ಪ್ರಸ್ತುತ ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಘದ(ಐಎಟಿಎ) ಮಹಾನಿರ್ದೇಶಕರಾಗಿದ್ದಾರೆ.

ನವದೆಹಲಿ: ಬ್ರಿಟಿಷ್ ಏರ್ವೇಸ್‌ನ ಮಾಜಿ ಮುಖ್ಯಸ್ಥ ವಿಲಿಯಂ ವಾಲ್ಷ್ ಅವರನ್ನು ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದ ನೂತನ ಸಿಇಒ ಆಗಿ ಮಂಗಳವಾರ ನೇಮಕ ಮಾಡಲಾಗಿದೆ.

ವಿಮಾನಯಾನ ಉದ್ಯಮದ ಅನುಭವಿ ವಾಲ್ಷ್ ಅವರು ಪ್ರಸ್ತುತ ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಘದ(ಐಎಟಿಎ) ಮಹಾನಿರ್ದೇಶಕರಾಗಿದ್ದಾರೆ.

ಭಾರತೀಯ ನಿಯಂತ್ರಕ ಅನುಮೋದನೆಗಳಿಗೆ ಒಳಪಟ್ಟು ವಾಲ್ಷ್ ಅವರನ್ನು ಸಿಇಒ ಆಗಿ ನೇಮಕ ಮಾಡಿರುವುದಾಗಿ ಘೋಷಿಸಿದ ಇಂಡಿಗೋ, ಐಎಟಿಎಯಲ್ಲಿ ಅವರ ಅಧಿಕಾರಾವಧಿ ಜುಲೈ 31 ರಂದು ಕೊನೆಗೊಳ್ಳಲಿದೆ ಮತ್ತು ಆಗಸ್ಟ್ 3 ರ ನಂತರ ಅವರು ಇಂಡಿಗೋ ಸೇರುವ ನಿರೀಕ್ಷೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಅವರ ಹಠಾತ್ ನಿರ್ಗಮನದ ಮೂರು ವಾರಗಳ ನಂತರ ಈ ಘೋಷಣೆ ಬಂದಿದೆ.

ವಿಲಿಯಂ ವಾಲ್ಷ್ ಅವರು 1979ರಲ್ಲಿ ಇಂಟರ್ನ್ಯಾಷನಲ್ ಏರ್​ಲೈನ್ಸ್ ಗ್ರೂಪ್​ನ ಏರ್ ಲಿಂಗಸ್​ನಲ್ಲಿ ಪೈಲಟ್ ಆಗಿ ವೃತ್ತಿಜೀವನ ಆರಂಭಿಸಿದ್ದರು. ನಂತರ, ಐರ್​ಲ್ಯಾಂಡ್ ಮೂಲದ ಆ ಏರ್​ಲೈನ್ಸ್ ಗ್ರೂಪ್​ ಸಿಇಒ ಸ್ಥಾನಕ್ಕೆ ಏರಿದರು. ಅದಾದ ಬಳಿಕ ಬ್ರಿಟಿಷ್ ಏರ್​ವೇಸ್​ಗೂ ಸಿಇಒ ಆಗಿ ಸೇವೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್; ಹೀಗಿದೆ ನಾಡಹಬ್ಬದ ವೇಳಾಪಟ್ಟಿ...

ಆರ್ ಎಸ್ಎಸ್ ಸಭೆ ನಡೆದಾಗಲೆಲ್ಲಾ ಅನೇಕ ಅನಾಹುತಗಳಾಗಿವೆ- ಬಿಕೆ ಹರಿಪ್ರಸಾದ್

ದೀದಿಗೆ ಮತ್ತೊಂದು ಶಾಕ್; ಮಮತಾ ನೇತೃತ್ವದ TMC ಬಣದ 12 ಬ್ಯಾಂಕ್ ಖಾತೆ ಫ್ರೀಜ್ ಮಾಡಿದ ಪೋಲೀಸರು!

2029ರ ಲೋಕಸಭೆ ಚುನಾವಣೆಯಿಂದಲೇ 'ಒಂದು ರಾಷ್ಟ್ರ–ಒಂದು ಚುನಾವಣೆ' ಜಾರಿ ಸಾಧ್ಯತೆ: JPC ಮುಖ್ಯಸ್ಥ ಪಿ.ಪಿ. ಚೌಧರಿ

ಮೊದಲ ಮಹಿಳಾ ಟೆಸ್ಟ್ ಪಂದ್ಯ: ಲಾರ್ಡ್ಸ್ ನಲ್ಲಿ ಅಪರೂಪದ ದಾಖಲೆ ಬರೆದ ಸ್ಮೃತಿ ಮಂಧಾನಾ! ಆಕರ್ಷಕ ಅರ್ಧಶತಕ