ಸೆನ್ಸೆಕ್ಸ್ ಭಾರಿ ಕುಸಿತ 
ವಾಣಿಜ್ಯ

ಮಧ್ಯಪ್ರಾಚ್ಯ ಬಿಕ್ಕಟ್ಟು, ದುರ್ಬಲ Monsoon ಆತಂಕ; Indian Stock Market ಭಾರಿ ಕುಸಿತ!

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಬರೊಬ್ಬರಿ ಶೇ.1.44ರಷ್ಟು ಕುಸಿತ ಕಂಡಿದ್ದರೆ, ನಿಫ್ಟಿ ಕೂಡ ಶೇ.1.50ರಷ್ಟು ಕುಸಿತ ದಾಖಲಿಸಿದೆ.

ಮುಂಬೈ: ದುರ್ಬಲ ಮುಂಗಾರು ಮುನ್ಸೂಚನೆ, ಭೌಗೋಳಿಕ-ರಾಜಕೀಯ ಅನಿಶ್ಚಿತತೆಗಳ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ವಾರಾಂತ್ಯದಲ್ಲಿ ಮತ್ತೆ ಭಾರಿ ಪ್ರಮಾಣದ ಕುಸಿತ ಕಂಡಿದೆ.

ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಭಾರಿ ಪ್ರಮಾಣದಲ್ಲಿ ಕುಸಿದಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಬರೊಬ್ಬರಿ ಶೇ.1.44ರಷ್ಟು ಕುಸಿತ ಕಂಡಿದ್ದರೆ, ನಿಫ್ಟಿ ಕೂಡ ಶೇ.1.50ರಷ್ಟು ಕುಸಿತ ದಾಖಲಿಸಿದೆ.

ಸೆನ್ಸೆಕ್ಸ್ ಇಂದು ಬರೊಬ್ಬರಿ 1,092.05 ಅಂಕಗಳ ಇಳಿಕೆಯೊಂದಿಗೆ 74,775.74 ಅಂಕಗಳಿಗೆ ಕುಸಿತವಾಗಿದ್ದರೆ, ನಿಫ್ಟಿ 359.40 ಅಂಕಗಳ ಇಳಿಕೆಯೊಂದಿಗೆ 23,547.75 ಅಂಕಗಳಿಗೆ ಕುಸಿತವಾಗಿ ದಿನದ ಮತ್ತು ವಾರದ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಆಟೋ, ಮೆಟಲ್, ಇಂಧನ ವಲಯದ ಷೇರುಗಳು ಭಾರಿ ನಷ್ಟ ಅನುಭವಿಸಿವೆ.

ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ವಿಪ್ರೋ, ಎಚ್‌ಸಿಎಲ್‌ಟೆಕ್ ಮತ್ತು ಟೆಕ್ ಮಹೀಂದ್ರಾ ಮಾತ್ರ ನಿಫ್ಟಿ ಷೇರುಗಳು ಏರಿಕೆ ಕಂಡವು. ಇಂಟರ್‌ಗ್ಲೋಬ್ ಏವಿಯೇಷನ್, ಐಷರ್ ಮೋಟಾರ್ಸ್ ಮತ್ತು ಟಾಟಾ ಸ್ಟೀಲ್ ಷೇರುಗಳು ಭಾರಿ ನಷ್ಟ ಕಂಡಿವೆ.

ಇತ್ತ ನಿಫ್ಟಿಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಪವರ್ ಗ್ರಿಡ್, ಇಂಟರ್ ಗ್ಲೋಬ್ ಏವಿಯೇಷನ್, NTPC, ಮಹೀಂದ್ರಾ & ಮಹೀಂದ್ರಾ, ಟಾಟಾ ಸ್ಟೀಲ್ ಮತ್ತು ಬಜಾಜ್ ಫೈನಾನ್ಸ್ ಸಂಸ್ಥೆಯ ಷೇರುಗಳ ಮೌಲ್ಯದಲ್ಲೂ ಭಾರಿ ಕುಸಿತವಾಗಿದೆ.

ಮಧ್ಯಪ್ರಾಚ್ಯ ಬಿಕ್ಕಟ್ಟು, ದುರ್ಬಲ Monsoon ಆತಂಕ

ಇಂದಿನ ಷೇರುಮಾರುಕಟ್ಟೆ ಕುಸಿತಕ್ಕೆ ಮಧ್ಯಪ್ರಾಚ್ಯ ಬಿಕ್ಕಟ್ಟು,. ದುರ್ಬಲ ಮಾನ್ಸೂನ್ ಆತಂಕ ಕಾರಣ ಎಂದು ಹೇಳಲಾಗುತ್ತಿದ್ದು, ಜಾಗತಿಕ ರಾಜಕೀಯ ಬೆಳವಣಿಗೆಗಳೂ ಮಾರುಕಟ್ಟೆ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ನೂತನ ಸಚಿವ ಸಂಪುಟ ರಚನೆ: ದೆಹಲಿಯಲ್ಲಿ ಸಿದ್ದರಾಮಯ್ಯ-ಡಿ.ಕೆ ಶಿವಕುಮಾರ್ ಮಾತುಕತೆ, ಸಹಭೋಜನ

ಸಿದ್ದರಾಮಯ್ಯ ರಾಜಿನಾಮೆ; ಡಿಕೆ ಶಿವಕುಮಾರ್ ಎಂಟ್ರಿ ಬೆನ್ನಲ್ಲೇ ಈ ಕಂಪನಿ ಷೇರುಗಳು ಶೇಕಡಾ 20ರಷ್ಟು ಏರಿಕೆ!

IPL 2026: LSG ತಂಡದ ನಾಯಕನ ಸ್ಥಾನಕ್ಕೆ ರಿಷಭ್ ರಾಜೀನಾಮೆ; ಶಾಕಿಂಗ್ ನಿರ್ಧಾರ ಪ್ರಕಟಿಸಿದ ಪಂತ್!

30 ದೇಶಗಳೊಂದಿಗೆ ಮಹತ್ವದ ಮಾತುಕತೆ: ಚೀನಾಕ್ಕೆ ಹೊಡೆತ ನೀಡಲು ಭಾರತ ತಯಾರಿ!

NEET ಪ್ರಶ್ನೆಪತ್ರಿಕೆ ಸೋರಿಕೆ: ಲೋಪ ಪ್ರಶ್ನಿಸಿದ ಸುಪ್ರೀಂ ಕೋರ್ಟ್; ಹೊಣೆಗಾರಿಕೆ ಫಿಕ್ಸ್ ಮಾಡುವಂತೆ ಕೇಂದ್ರಕ್ಕೆ ಸೂಚನೆ

SCROLL FOR NEXT