ಮೈಕ್ರೋಸಾಫ್ಟ್‌ 
ವಾಣಿಜ್ಯ

ಜಾಗತಿಕ ಮಟ್ಟದಲ್ಲಿ ಮೈಕ್ರೋಸಾಫ್ಟ್ ಸೇವೆಗಳು ದಿಢೀರ್ ಸ್ಥಗಿತ: ಲಕ್ಷಾಂತರ ಬಳಕೆದಾರರ ಪರದಾಟ! ತಾಂತ್ರಿಕ ದೋಷಕ್ಕೆ ಅಸಲಿ ಕಾರಣವೇನು?

ಜಾಗತಿಕ ಮಟ್ಟದಲ್ಲಿ ಮೈಕ್ರೋಸಾಫ್ಟ್ 365, ಔಟ್‌ಲುಕ್, ಮೈಕ್ರೋಸಾಫ್ಟ್ ಟೀಮ್ಸ್ ಮತ್ತು ಕೋಪೈಲಟ್ ಸೇರಿದಂತೆ ಹಲವು ಪ್ರಮುಖ ಸೇವೆಗಳಲ್ಲಿ ತೀವ್ರ ತಾಂತ್ರಿಕ ವ್ಯತ್ಯಯ ಉಂಟಾಗಿದೆ. ಇದರಿಂದ ಲಕ್ಷಾಂತರ ಬಳಕೆದಾರರು ತಮ್ಮ ಕೆಲಸಗಳನ್ನು ನಿರ್ವಹಿಸಲು ಪರದಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಭಾರತ ಸೇರಿದಂತೆ ವಿಶ್ವದ 74 ದೇಶಗಳಲ್ಲಿ ಮೈಕ್ರೋಸಾಫ್ಟ್ 365, ಔಟ್‌ಲುಕ್, ಮೈಕ್ರೋಸಾಫ್ಟ್ ಟೀಮ್ಸ್ ಮತ್ತು ಕೋಪೈಲಟ್ ಸೇವೆಗಳಲ್ಲಿ ಭಾರಿ ತಾಂತ್ರಿಕ ಅಡಚಣೆ ಉಂಟಾಗಿದೆ. ನವೆಂಬರ್ 12, 2026 ರ ರಾತ್ರಿ ಆರಂಭವಾದ ಈ ಸಮಸ್ಯೆಯು ನವೆಂಬರ್ 13 ರ ಶುಕ್ರವಾರವೂ ಮುಂದುವರಿದಿದ್ದು, ಲಕ್ಷಾಂತರ ಉದ್ಯೋಗಿಗಳು ಮತ್ತು ಸಂಸ್ಥೆಗಳ ದೈನಂದಿನ ಕೆಲಸಕ್ಕೆ ತೀವ್ರ ತೊಂದರೆಯಾಗಿದೆ. ಆ ಕುರಿತ ವರದಿ ಇಲ್ಲಿದೆ:

ಯಾವ ಆ್ಯಪ್‌ಗಳಲ್ಲಿ ಪ್ರಾಬ್ಲಂ?

ಪ್ರಮುಖವಾಗಿ ಮೈಕ್ರೋಸಾಫ್ಟ್ ಔಟ್‌ಲುಕ್ ಇಮೇಲ್, ಮೈಕ್ರೋಸಾಫ್ಟ್ ಟೀಮ್ಸ್ (ಕ್ಯಾಲೆಂಡರ್ ಮತ್ತು ಮೀಟಿಂಗ್ ಸೌಲಭ್ಯಗಳು), ಒನ್‌ಡ್ರೈವ್, ಶೇರ್‌ಪಾಯಿಂಟ್ ಮತ್ತು ಎಐ ಸಹಾಯಕ ಕೋಪೈಲಟ್ ಸೇವೆಗಳು ಸ್ಥಗಿತಗೊಂಡಿವೆ. ಔಟೇಜ್ ಟ್ರ್ಯಾಕರ್ ಡೌನ್‌ಡಿಟೆಕ್ಟರ್ ನಲ್ಲಿ ಸುಮಾರು 1.3 ಲಕ್ಷಕ್ಕೂ ಹೆಚ್ಚು ಬಳಕೆದಾರರು ಔಟ್‌ಲುಕ್ ಸಮಸ್ಯೆ ಬಗ್ಗೆ ದೂರು ದಾಖಲಿಸಿದ್ದಾರೆ. ಇದರೊಂದಿಗೆ, ಮೈಕ್ರೋಸಾಫ್ಟ್ ಸರ್ವರ್‌ಗಳನ್ನು ಅವಲಂಬಿಸಿರುವ ಓಪನ್‌ಎಐ (ಚಾಟ್‌ಜಿಪಿಟಿ) ಮತ್ತು ಆಂತ್ರೋಪಿಕ್ (ಕ್ಲಾಡ್) ಸೇವೆಗಳಲ್ಲೂ ವ್ಯತ್ಯಯ ಕಂಡುಬಂದಿದೆ. ಭಾರತದ ಇಂಡಿಗೋ ಮತ್ತು ಆಕಾಶ ಏರ್ ವಿಮಾನಯಾನ ಸಂಸ್ಥೆಗಳ ಇಮೇಲ್ ಬೆಂಬಲ ಸೇವೆಗಳಿಗೆ ತೊಂದರೆಯಾಗಿದ್ದು, ಯುರೋಪಿನ ಷೇರು ವಿನಿಮಯ ಕೇಂದ್ರ ಯೂರೋನೆಕ್ಸ್ಟ್ ಮತ್ತು ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ ಕೆಲಸಗಳಿಗೂ ಅಡಚಣೆಯಾಗಿದೆ.

ಹಾಗಾದ್ರೆ, ಈ ಸಮಸ್ಯೆಗೆ ನಿಜವಾದ ಕಾರಣವೇನು?

ಇದು ಯಾವುದೇ ಸೈಬರ್ ದಾಳಿ ಅಥವಾ ಹ್ಯಾಕಿಂಗ್ ಅಲ್ಲ ಎಂದು ಮೈಕ್ರೋಸಾಫ್ಟ್ ಸ್ಪಷ್ಟಪಡಿಸಿದೆ. ಸರ್ವರ್‌ಗಳಲ್ಲಿ ಸುರಕ್ಷಿತ ಸಂಪರ್ಕಗಳನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿ ಅನಿರೀಕ್ಷಿತವಾಗಿ ಹೆಚ್ಚಿನ ಒತ್ತಡ ಉಂಟಾಗಿದ್ದರಿಂದ ಹಲವು ಸರ್ವರ್‌ಗಳು ಸ್ವಯಂಚಾಲಿತ ತಪಾಸಣೆಯಲ್ಲಿ ವಿಫಲವಾಗಿ ಆಫ್‌ಲೈನ್‌ಗೆ ಹೋಗಿವೆ ಎನ್ನಲಾಗಿದೆ.

ಮುಂದುವರೆದು, ಸೇವೆಗಳನ್ನು ಮರುಸ್ಥಾಪಿಸಲು ತಾಂತ್ರಿಕ ತಂಡವು ನಿರಂತರವಾಗಿ ಶ್ರಮಿಸುತ್ತಿದ್ದು, ಭಾರತ ಮತ್ತು ಏಷ್ಯಾ-ಪೆಸಿಫಿಕ್ ಭಾಗದ ಹಲವು ಸರ್ವರ್‌ಗಳು ಈಗ ಹಂತ ಹಂತವಾಗಿ ಸಹಜ ಸ್ಥಿತಿಗೆ ಮರಳುತ್ತಿವೆ. ಅಲ್ಲದೇ, ವಿಳಂಬವಾದ ಇಮೇಲ್‌ಗಳು ಕಳೆದುಹೋಗದಂತೆ ತಡೆಯಲು ಮೈಕ್ರೋಸಾಫ್ಟ್ ಇಮೇಲ್ ಟೈಮ್‌ಔಟ್ ಅವಧಿಯನ್ನು 48 ಗಂಟೆಗಳಿಗೆ ವಿಸ್ತರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದಲ್ಲಿ ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಜೊತೆಯಾಗಿ ಸಾಗುತ್ತವೆ: ಕಾಸ್ಮೋಸ್- ಮೈಸೂರು ತಾರಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ!

₹1000 ಕೋಟಿ ಬಾಚಿಕೊಂಡ್ರೆ ಏನು? ₹4000 ಕೋಟಿ ಬಜೆಟ್ ಮಣ್ಣುಪಾಲು: ಮತ್ತೆ ಯಶ್ ನಟನೆಯ ರಾಮಾಯಣ ಟೀಕಿಸಿದ ಮುಖೇಶ್ ಖನ್ನಾ!

ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಮತಿ ನೀಡಿ: ವೇದಿಕೆಯಲ್ಲೇ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಡಿಕೆಶಿ ಮನವಿ!

PM Modi visit to Mysuru | ಕಾಸ್ಮೋಸ್-ಮೈಸೂರು ತಾರಾಲಯ ಉದ್ಘಾಟನೆ; ಭಾರತವು ಅನೇಕ ಶ್ರೇಷ್ಠ ಖಗೋಳಶಾಸ್ತ್ರಜ್ಞರ ತವರುಮನೆ- ಮೋದಿ

ಅಸ್ಸಾಂನಲ್ಲಿ ಘೋರ ದುರಂತ: ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಮಿನಿ ಬಸ್‌ಗೆ ಟ್ರಕ್ ಡಿಕ್ಕಿ, 23 ಸಾವು