ಸಾಂದರ್ಭಿಕ ಚಿತ್ರ 
ವಾಣಿಜ್ಯ

ಆಭರಣ ಪ್ರಿಯರಿಗೆ ಸಿಹಿಸುದ್ದಿ: ಚಿನ್ನದ ಬೆಲೆಯಲ್ಲಿ ಕುಸಿತ; ಒಂದೇ ದಿನದಲ್ಲಿ ಬರೋಬ್ಬರಿ 5 ಸಾವಿರ ರೂ ಇಳಿಕೆ ಕಂಡ ಬೆಳ್ಳಿ!

ಇತ್ತೀಚಿನ ದಿನಗಳಲ್ಲಿ ದುಬಾರಿಯಾಗಿದ್ದ ಅಮೂಲ್ಯ ಲೋಹಗಳ ಬೆಲೆಯಲ್ಲಿ ಬದಲಾವಣೆ ಕಂಡುಬಂದಿರುವುದು ಆಭರಣ ಖರೀದಿದಾರರ ಗಮನ ಸೆಳೆಯುತ್ತಿದೆ.

ಚಿನ್ನ ಮತ್ತು ಬೆಳ್ಳಿ ಖರೀದಿಸಲು ಯೋಜಿಸುತ್ತಿರುವವರಿಗೆ ಬೆಲೆ ಇಳಿಕೆಯ ಸುದ್ದಿ ಗಮನ ಸೆಳೆದಿದೆ. ಬುಧವಾರ, ಅಕ್ಟೋಬರ್ 22ರಂದು ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದ್ದು, ಬೆಳ್ಳಿ ಬೆಲೆಯೂ ಕೆಳಮುಖವಾಗಿದೆ.

ಇತ್ತೀಚಿನ ದಿನಗಳಲ್ಲಿ ದುಬಾರಿಯಾಗಿದ್ದ ಅಮೂಲ್ಯ ಲೋಹಗಳ ಬೆಲೆಯಲ್ಲಿ ಬದಲಾವಣೆ ಕಂಡುಬಂದಿರುವುದು ಆಭರಣ ಖರೀದಿದಾರರ ಗಮನ ಸೆಳೆಯುತ್ತಿದೆ.

ಪ್ರಸ್ತುತ ಲಭ್ಯವಿರುವ ದರಗಳ ಪ್ರಕಾರ, ಅಕ್ಟೋಬರ್‌ 22 2026 ಗುರುವಾರದಂದು 24 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 170ರೂ ಇಳಿಕೆಯಾಗಿದ್ದು, 1 ಗ್ರಾಂ ಬೆಲೆ ಈಗ 14,438 ರೂಪಾಯಿ ದಾಖಲಾಗಿದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಬರೋಬ್ಬರಿ 1700ರೂ ಇಳಿಕೆಯಾಗಿದ್ದು, ಇಂದಿನ ಅಪರಂಜಿ ಚಿನ್ನದ ದರ 1,44,380 ರೂ ದಾಖಲಾಗಿದೆ.

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು 127 ರೂ ಕುಸಿತ ಕಂಡುಬಂದಿದ್ದು, 1 ಗ್ರಾಂ ಬೆಲೆ ಈಗ 10,829 ರೂ ಆಗಿದ್ದು 10 ಗ್ರಾಂ ಬೆಲೆ ಈಗ 1,08,290 ರೂಪಾಯಿ ದಾಖಲಾಗಿದೆ. ಜಾಗತಿಕ ಅಸ್ಥಿರತೆಗಳ ನಡುವೆಯೂ ಕೆಲದಿನಗಳಿಂದ ಸ್ಥಿರವಾಗಿದ್ದ ಚಿನ್ನ ಬೆಲೆಯಲ್ಲಿ ದಿಢೀರ್‌ ಇಳಿಕೆಯಾಗಿದೆ. ಅ.22ರಂದು 1 ಗ್ರಾಂ ಬೆಳ್ಳಿ ಬೆಲೆಯಲ್ಲಿ 5 ರೂ ಕುಸಿದು 250ರೂ ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 5000 ರೂ ಇಳಿಕೆಯಾಗಿದ್ದು, 2.25 ಲಕ್ಷ ರೂ ದಾಖಲಿಸಿದೆ.

ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ (MCX) ವಹಿವಾಟಿನಲ್ಲೂ ಚಿನ್ನದ ಬೆಲೆ ಕುಸಿದಿದೆ. ಡಿಸೆಂಬರ್ ವಿತರಣೆಯ ಚಿನ್ನದ ಫ್ಯೂಚರ್ಸ್ ಬೆಲೆ 10 ಗ್ರಾಂಗೆ ₹509 ಇಳಿಕೆಯಾಗಿದ್ದು, ₹1,46,010ಕ್ಕೆ ತಲುಪಿದೆ. ಇದು ಶೇಕಡಾ 0.35ರಷ್ಟು ಇಳಿಕೆಯಾಗಿದೆ.

ಇದೇ ವೇಳೆ, ಬೆಳ್ಳಿ ಫ್ಯೂಚರ್ಸ್ ಬೆಲೆಯಲ್ಲೂ ಗಮನಾರ್ಹ ಕುಸಿತ ದಾಖಲಾಗಿದೆ. ಪ್ರತಿ ಕಿಲೋಗ್ರಾಂ ಬೆಳ್ಳಿಯ ಬೆಲೆ ₹2,124 ಇಳಿಕೆಯಾಗಿ ₹2,09,361ಕ್ಕೆ ತಲುಪಿದೆ. ಮಾರುಕಟ್ಟೆಯಲ್ಲಿನ ಈ ಬದಲಾವಣೆಗಳು ಹೂಡಿಕೆದಾರರು ಮತ್ತು ಬೆಳ್ಳಿ ಖರೀದಿಸಲು ಉದ್ದೇಶಿಸಿರುವವರ ಗಮನ ಸೆಳೆದಿವೆ.

ಬೆಂಗಳೂರಿನಲ್ಲಿ (Bengaluru) ಅಕ್ಟೋಬರ್ 22ರಂದು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹1,46,070 ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ ₹1,33,890 ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೌದಿ ಅರೇಬಿಯಾ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ: ಓರ್ವ ಭಾರತೀಯ ಸೇರಿ ಇಬ್ಬರ ಸಾವು, 8 ಮಂದಿಗೆ ಗಾಯ..!

ಮೈಸೂರು ದಸರಾ ಜಂಬೂಸವಾರಿ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ! ICUನಲ್ಲಿ ಸಾವು-ಬದುಕಿನ ಹೋರಾಟ!

ದಸರಾ ಜಾತ್ರೆಯಿಂದ ಮನೆಗೆ ಮರಳುತ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ: ಚಲಿಸುವ ಕಾರಿನ ಮೇಲ್ಛಾವಣಿಗೆ ಕಟ್ಟಿ 1.5 ಕಿ.ಮೀ. ಎಳೆದೊಯ್ದು ಕಾರು ಹತ್ತಿಸಿದ ದುಷ್ಕರ್ಮಿಗಳು! Video

CS ಗೆ ತನಿಖೆ ಮಾಡಿ ವರದಿ ನೀಡಲು ಹೇಳಿದ್ದೇನೆ: ಮೈಸೂರಿನಲ್ಲಿ ಸಚಿವರನ್ನೇ ಅಡ್ಡಗಟ್ಟಿ ನಿಲ್ಲಿಸಿದ ಪೊಲೀಸರ ವರ್ತನೆಗೆ ಸಿಎಂ ಡಿಕೆಶಿ ಏನೆಂದರು?

ಡಿ-ಕಂಪನಿ ನಮ್ಮದಲ್ಲ, Dawood ಪಾಕ್ ಆಶ್ರಯದಲ್ಲೇ ಇದ್ದಾನೆ: ವಿಶ್ವಸಂಸ್ಥೆ ವರದಿಗಾರನ ಪಕ್ಷಪಾತ ಆಟಕ್ಕೆ ಬ್ರೇಕ್, ದಾಖಲೆ ಸಮೇತ ಸುಳ್ಳು ಬಯಲಿಗೆಳೆದ ಭಾರತ..!