ಜಿಯೋ ಲಿಸ್ಟಿಂಗ್ ಕಾರ್ಯಕ್ರಮ 
ವಾಣಿಜ್ಯ

Jio listing event: ಅನಂತ್ ಅಂಬಾನಿ ಪತ್ನಿ ರಾಧಿಕಾ ಮರ್ಚೆಂಟ್ ಮಿಸ್ಸಿಂಗ್! ಕಾರಣವೇನು?

ರಾಧಿಕಾ ಅವರ ಗೈರುಹಾಜರಿಗೆ ಯಾವುದೇ ಕಾರಣವನ್ನು ನೀಡಿಲ್ಲ. ಕುಟುಂಬದ ಫೋಟೋಗಳಲ್ಲಿ ಯಾವಾಗಲೂ ಪ್ರೀತಿಪೂರ್ವಕವಾಗಿ ಕಾಣಿಸಿಕೊಳ್ಳುವ ರಾಧಿಕಾ ಅಲ್ಲಿ ಇಲ್ಲದಿರುವುದು ಈ ವಿಷಯದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದೆ.

ಮುಂಬೈ: ಭಾರತದ ಷೇರುಪೇಟೆಯಲ್ಲಿ ಬಹುನಿರೀಕ್ಷಿತ ಜಿಯೋ ಪ್ಲಾಟ್‌ಫಾರ್ಮ್ಸ್ (Jio Platforms) ಷೇರುಗಳು ಬುಧವಾರ ಭರ್ಜರಿ ಆರಂಭ ಕಂಡಿದ್ದವು. ರಿಲಯನ್ಸ್ ಇಂಡಸ್ಟ್ರೀಸ್‌ನ ಡಿಜಿಟಲ್ ಮತ್ತು ಟೆಲಿಕಾಂ ಅಂಗಸಂಸ್ಥೆಯಾದ ಜಿಯೋ, ತನ್ನ ಐಪಿಒ ಬೆಲೆಗಿಂತ ಶೇ. 21ಕ್ಕೂ ಹೆಚ್ಚು ಪ್ರೀಮಿಯಂನಲ್ಲಿ ಷೇರುಪೇಟೆಗೆ ಪ್ರವೇಶಿಸಿದೆ. ಕಂಪನಿಯ ಬಲವಾದ ಮಾರುಕಟ್ಟೆ ಸ್ಥಾನ ಮತ್ತು ದೀರ್ಘಾವಧಿಯ ಬೆಳವಣಿಗೆಯ ಸಾಧ್ಯತೆಗಳಿಂದ ಹೂಡಿಕೆದಾರರ ಗಮನ ಸೆಳೆದಿದೆ.

ಅಕ್ಟೋಬರ್ 28, 2026ರಂದು ಎನ್‌ಎಸ್‌ಇ (NSE) ಮತ್ತು ಬಿಎಸ್‌ಇ (BSE) ಎರಡರಲ್ಲೂ ಜಿಯೋ ಪ್ಲಾಟ್‌ಫಾರ್ಮ್ಸ್ ಷೇರುಗಳು ತಲಾ ₹1,358ರಲ್ಲಿ ಲಿಸ್ಟ್ ಆಗಿವೆ. ಕಂಪನಿಯ ಐಪಿಒ ವಿತರಣಾ ಬೆಲೆ ಪ್ರತಿ ಷೇರಿಗೆ ₹1,119 ಆಗಿತ್ತು. ಈ ಮೂಲಕ ಷೇರುಗಳು ಐಪಿಒ ಬೆಲೆಗಿಂತ ಸುಮಾರು ಶೇ. 21.36ರಷ್ಟು ಪ್ರೀಮಿಯಂನಲ್ಲಿ ಮಾರುಕಟ್ಟೆಗೆ ಪ್ರವೇಶಿಸಿವೆ.

ಇದರ ಪ್ರಯುಕ್ತ ಬುಧವಾರ ಬೆಳಿಗ್ಗೆ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್‌ನಲ್ಲಿ ನಡೆದ ಜಿಯೋ ಲಿಸ್ಟಿಂಗ್ ಕಾರ್ಯಕ್ರಮದಲ್ಲಿ (Jio listing event) ಮುಕೇಶ್ ಅಂಬಾನಿ ತಾಯಿ ಕೋಕಿಲಾಬೆನ್, ಪತ್ನಿ ನೀತಾ, ಮಕ್ಕಳಾದ ಆಕಾಶ್, ಇಶಾ ಮತ್ತು ಅನಂತ್, ಸೊಸೆ ಶ್ಲೋಕಾ ಮೆಹ್ತಾ, ಅಳಿಯ ಆನಂದ್ ಪಿರಾಮಲ್ ಹಾಗೂ ಮೊಮ್ಮಕ್ಕಳು ವೇದಿಕೆಯಲ್ಲಿದ್ದರು. ಆದರೆ, ಕುಟುಂಬದ ಒಬ್ಬ ಸದಸ್ಯೆ ಅಲ್ಲಿ ಕಾಣಿಸಲಿಲ್ಲ. ಅವರೇ ಅನಂತ್ ಅಂಬಾನಿ ಅವರ ಪತ್ನಿ ರಾಧಿಕಾ ಮರ್ಚೆಂಟ್.

ಅಕ್ಟೋಬರ್ 2026 ರ ಕೊನೆಯ ವಾರದಲ್ಲಿ, ಅವರು ತಮ್ಮ ಮಾವ ಮುಖೇಶ್ ಅಂಬಾನಿ ಅವರೊಂದಿಗೆ ಮುಂಬೈನ ಪ್ರಸಿದ್ಧ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ ಅಕ್ಟೋಬರ್ 28, 2026 ರಂದು ನಡೆದ ಜಿಯೋ ಲಿಸ್ಟಿಂಗ್ (Jio listing) ಕಾರ್ಯಕ್ರಮದಲ್ಲಿ ಇಡೀ ಅಂಬಾನಿ ಕುಟುಂಬ ಭಾಗವಹಿಸಿತ್ತು, ಆದರೆ ರಾಧಿಕಾ ಅವರು ಮಾತ್ರ ಗೈರಾಗಿದ್ದರು. ಇದು ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ರಾಧಿಕಾಗೆ ಅನಾರೋಗ್ಯವಿತ್ತೇ? ರಾಧಿಕಾ ಅವರ ಗೈರುಹಾಜರಿಗೆ ಯಾವುದೇ ಕಾರಣವನ್ನು ನೀಡಿಲ್ಲ. ಕುಟುಂಬದ ಫೋಟೋಗಳಲ್ಲಿ ಯಾವಾಗಲೂ ಪ್ರೀತಿಪೂರ್ವಕವಾಗಿ ಕಾಣಿಸಿಕೊಳ್ಳುವ ರಾಧಿಕಾ ಅಲ್ಲಿ ಇಲ್ಲದಿರುವುದು ಈ ವಿಷಯದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದೆ.

ಅವರಿಗೆ ಅನಾರೋಗ್ಯವಿತ್ತೇ? ತಮ್ಮ ಪತಿಯ ಕುಟುಂಬಕ್ಕೆ ಇಷ್ಟೊಂದು ಮಹತ್ವಪೂರ್ಣವಾದ ಸಮಾರಂಭದಿಂದ ರಾಧಿಕಾ ದೂರ ಉಳಿಯಲು ಕಾರಣವೇನು? ಎಂಬುದು ನಿಗೂಢವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನಾಸೀರುದ್ದೀನ್ ಶಾ ಸೈದ್ಧಾಂತಿಕ ಒಲವುಗಳನ್ನು ನಾನು ತಪ್ಪಾಗಿ ಅರ್ಥೈಸಿದ್ದೆ: ಅವರೊಬ್ಬ ಅಪಾಯಕಾರಿ ದಿಮಾಗಿ ನಕ್ಸಲ್, ವಿನಾಶಕಾರಿ ಚಿಂತಕ'

ವಿದೇಶದಲ್ಲಿರುವ ಭಾರತೀಯರು ಉದ್ಯೋಗವಿಲ್ಲದೆ ಭಾರತಕ್ಕೆ ಮರಳಲು ಎಷ್ಟು ಹಣ ಬೇಕು? (ಹಣಕ್ಲಾಸು)

ಹಾಸನಾಂಬ ದರ್ಶನಕ್ಕೆ ಕ್ಷಣಗಣನೆ, ಇಂದು ಗರ್ಭಗುಡಿ ಬಾಗಿಲು ಓಪನ್! ಈ ಬಾರಿ ಸುಮಾರು 30 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ

ದೇವರಿಲ್ಲ ಎಂದು ನಾನು ಹೇಳಿಲ್ಲ: ಕೆಟ್ಟ ಕೆಲಸ ಮಾಡಿ ಪೂಜೆ ಮಾಡಿದರೆ ದೇವರು ಒಳ್ಳೆಯದು ಮಾಡಲ್ಲ; ಸಿದ್ದರಾಮಯ್ಯ

ಎಕ್ಸ್‌ಪ್ರೆಸ್‌ವೇನಲ್ಲಿ 120 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸಿದರೆ ದಂಡವಿಲ್ಲ: ನಿತಿನ್‌ ಗಡ್ಕರಿ ಮಹತ್ವದ ಘೋಷಣೆ!