ಡೇಟಾ ಬೇಡ, ಕೇವಲ ಕಾಲ್ ಮಾಡೋಕೆ ಮಾತ್ರ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ತನ್ನಿ AI Image
ವಾಣಿಜ್ಯ

ಡೇಟಾ ಬೇಡ, ಕೇವಲ ಕಾಲ್ ಮಾಡೋಕೆ ಮಾತ್ರ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ತನ್ನಿ: ಜಿಯೋ, ಏರ್‌ಟೆಲ್‌ಗೆ ಟ್ರಾಯ್ ಖಡಕ್ ಆದೇಶ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ, ಎಲ್ಲಾ ಕಂಪನಿಗಳು ಮೊಬೈಲ್ ಡೇಟಾ ಬೇಡದ, ಕೇವಲ ವಾಯ್ಸ್ ಕರೆ ಮತ್ತು ಎಸ್‌ಎಮ್‌ಎಸ್ ಮಾತ್ರ ಬಯಸುವ ಬಳಕೆದಾರರಿಗಾಗಿ ಪ್ರತ್ಯೇಕ ಅಗ್ಗದ ರಿಚಾರ್ಜ್ ಪ್ಲಾನ್‌ಗಳನ್ನು ಕಡ್ಡಾಯವಾಗಿ ತರಬೇಕು ಎಂದು ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ನನ್ನ ಬಳಿಯಿರುವ ಸಿಮ್‌ಗೆ ಕೇವಲ ಕರೆ ಮಾಡಲು ಮಾತ್ರವೇ ರಿಚಾರ್ಜ್ ಸಾಕು. ಆದರೆ, ಕಂಪನಿಗಳು ಕೇವಲ ವಾಯ್ಸ್ ರಿಚಾರ್ಜ್ ಪ್ಲಾನ್‌ ನೀಡದೆ, ಮೊಬೈಲ್ ಡೇಟಾ (ಇಂಟರ್ನೆಟ್) ಪ್ಲಾನ್‌ಗಳನ್ನು ಕೂಡ ಸೇರಿಸಿ ಬೇರೆ ಆಯ್ಕೆ ನೀಡದೆ ಸತಾಯಿಸುತ್ತಿವೆ ಎಂದು ಹಲವು ಗ್ರಾಹಕರು ಹೇಳುತ್ತಾರೆ. ಈಗ ಗ್ರಾಹಕರ ಆ ಸಮಸ್ಯೆಗೆ ಪರಿಹಾರ ಕಂಡುಹಿಡಿದಿರುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI), ಎಲ್ಲಾ ಕಂಪನಿಗಳು ಮೊಬೈಲ್ ಡೇಟಾ ಬೇಡದ, ಕೇವಲ ವಾಯ್ಸ್ ಕರೆ ಮತ್ತು ಎಸ್‌ಎಮ್‌ಎಸ್ ಮಾತ್ರ ಬಯಸುವ ಬಳಕೆದಾರರಿಗಾಗಿ ಪ್ರತ್ಯೇಕ ಅಗ್ಗದ ರಿಚಾರ್ಜ್ ಪ್ಲಾನ್‌ಗಳನ್ನು ಕಡ್ಡಾಯವಾಗಿ ತರಬೇಕು ಎಂದು ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ಅಗತ್ಯಕ್ಕೆ ತಕ್ಕಂತೆ ಕಡಿಮೆ ದರ

ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನಂತಹ ಕಂಪನಿಗಳು ಇಂಟರ್ನೆಟ್ ಡೇಟಾವನ್ನು ಕಡ್ಡಾಯವಾಗಿ ಒಳಗೊಂಡಿರುವ ದುಬಾರಿ ಬಂಡಲ್ ಪ್ಲಾನ್‌ಗಳನ್ನು ಮಾತ್ರ ನೀಡುತ್ತಿದ್ದವು. ಇದರಿಂದಾಗಿ ಇಂಟರ್ನೆಟ್ ಬಳಸದ ಗ್ರಾಹಕರು ತಮಗೆ ಬೇಡದ ಡೇಟಾ ಪ್ಯಾಕ್‌ಗಳಿಗೂ ಸೇರಿಸಿ ಹೆಚ್ಚಿನ ಹಣ ಪಾವತಿಸಬೇಕಾಗಿತ್ತು. ಬಳಕೆದಾರರ ದೂರುಗಳನ್ನು ಆಲಿಸಿದ ಟ್ರಾಯ್, ತನ್ನ 'ದೂರಸಂಪರ್ಕ ಗ್ರಾಹಕ ರಕ್ಷಣೆ (13ನೇ ತಿದ್ದುಪಡಿ) ನಿಯಮಾವಳಿಗಳು, 2026' ಅಡಿಯಲ್ಲಿ ಈ ಹೊಸ ಐತಿಹಾಸಿಕ ಆದೇಶ ಹೊರಡಿಸಿದೆ. ಅದರಂತೆ,  ಟೆಲಿಕಾಂ ಆಪರೇಟರ್‌ಗಳು ಅಕ್ಟೋಬರ್ 21 ರ ಒಳಗಾಗಿ ಕೇವಲ ವಾಯ್ಸ್ ಕರೆ ಮತ್ತು ಎಸ್‌ಎಮ್‌ಎಸ್ ಸೌಲಭ್ಯವಿರುವ ರಿಚಾರ್ಜ್ ವೋಚರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲೇಬೇಕು.

ಎಲ್ಲಾ ವ್ಯಾಲಿಡಿಟಿ ಅವಧಿಗಳಿಗೂ ಲಭ್ಯ

ಪ್ರಸ್ತುತ ಕಂಪನಿಗಳು ನೀಡುತ್ತಿರುವ ಪ್ರತಿ 30 ದಿನಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯ (ಉದಾಹರಣೆಗೆ 28 ದಿನಗಳ) ಡೇಟಾ ಬಂಡಲ್ ಪ್ಲಾನ್‌ಗಳಿಗೆ ಸಮನಾಗಿ, ಡೇಟಾ ಇಲ್ಲದ ಕೇವಲ ಕರೆ/SMS ಪ್ಲಾನ್‌ಗಳನ್ನು ನೀಡಬೇಕು. ಜೊತೆಗೆ, ತಿಂಗಳ ಪ್ಲಾನ್‌ಗಳನ್ನು ಪ್ರತಿ ತಿಂಗಳೂ ಒಂದೇ ನಿಗದಿತ ದಿನಾಂಕದಂದು ನವೀಕರಿಸುವ ಆಯ್ಕೆಯನ್ನು ಗ್ರಾಹಕರಿಗೆ ನೀಡಬೇಕು. ಇದರೊಂದಿಗೆ, ಕನಿಷ್ಠ ಒಂದು ದೀರ್ಘಾವಧಿಯ (ಲಾಂಗ್ ವ್ಯಾಲಿಡಿಟಿ) ವಾಯ್ಸ್-SMS ಮಾತ್ರ ಇರುವ ಪ್ಲಾನ್ ಸಹ ಲಭ್ಯವಿರಬೇಕು.

ಯಾರಿಗೆಲ್ಲಾ ಇದು ಲಾಭದಾಯಕ?

  • ಹಿರಿಯ ನಾಗರಿಕರು: ಕೇವಲ ಕರೆ ಮಾಡಲು ಕೀಪ್ಯಾಡ್ (ಫೀಚರ್) ಫೋನ್ ಬಳಸುವ ಹಿರಿಯರಿಗೆ ಈ ನಿಯಮ ವರವಾಗಲಿದೆ.

  • ಎರಡು ಸಿಮ್ ಕಾರ್ಡ್ ಹೊಂದಿರುವವರು: ಕೇವಲ ಬ್ಯಾಂಕ್ ಒಟಿಪಿ ಮತ್ತು ಕರೆಗಳಿಗಾಗಿ ಎರಡನೇ ಸಿಮ್ ಅನ್ನು ಜೀವಂತವಾಗಿ ಇಡಲು ಪ್ರತಿ ತಿಂಗಳು ದುಬಾರಿ ರಿಚಾರ್ಜ್ ಮಾಡುತ್ತಿದ್ದವರಿಗೆ ದೊಡ್ಡ ಮಟ್ಟದ ಆರ್ಥಿಕ ಪರಿಹಾರ ಸಿಗಲಿದೆ.

  • ಮನೆಯಲ್ಲಿ ವೈ-ಫೈ ಬಳಸುವವರು: ಆಫೀಸ್ ಅಥವಾ ಮನೆಯಲ್ಲಿ ಈಗಾಗಲೇ Wi-Fi Broadband ಇಂಟರ್ನೆಟ್ ಹೊಂದಿದ್ದು, ಮೊಬೈಲ್ ಡೇಟಾ ಅವಶ್ಯಕತೆ ಇಲ್ಲದ ಗ್ರಾಹಕರಿಗೆ ಇದು ಹಣ ಉಳಿಸಲಿದೆ.

ಅದರಲ್ಲೂ, ಖಾಸಗಿ ಟೆಲಿಕಾಂ ಕಂಪನಿಗಳು ಈ ನಿಯಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ, ಗ್ರಾಹಕರ ಹಿತದೃಷ್ಟಿಯಿಂದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ತನ್ನ ನಿರ್ಧಾರವನ್ನು ಕಡ್ಡಾಯವಾಗಿ ಜಾರಿಗೆ ತಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್‌ರನ್ನು ತಕ್ಷಣ ವಜಾಗೊಳಿಸಿ, ಕ್ರಿಮಿನಲ್ ಕೇಸ್ ದಾಖಲಿಸಿ: ರಾಷ್ಟ್ರಪತಿಗೆ ಸಿದ್ದರಾಮಯ್ಯ ಆಗ್ರಹ

ಬ್ಯಾಂಕ್ ಮುಷ್ಕರದ ನಡುವೆ ಗ್ರಾಹಕರಿಗೆ ಬಿಗ್ ರಿಲೀಫ್; ಎಟಿಎಂ ವಹಿವಾಟು ಶುಲ್ಕ ಸಂಪೂರ್ಣ ರದ್ದು, ಎಷ್ಟು ಬಾರಿಯಾದರೂ ಉಚಿತವಾಗಿ ಹಣ ಡ್ರಾ ಮಾಡಿ

ವಿನೋದ್‌ ಕಾಂಬ್ಳಿ ಈಗ ಏಕಾಂಗಿ; ವೃದ್ದಾಶ್ರಮದಿಂದಲೇ ವಿಡಿಯೋ ಹಂಚಿಕೊಂಡ ಮಾಜಿ ಕ್ರಿಕೆಟಿಗ; ಅಭಿಮಾನಿಗಳಿಗೆ ಆತಂಕ!

ವಿರಾಜಪೇಟೆ ಗಣೇಶ ವಿಸರ್ಜನೆ ವೇಳೆ ಕರೆಂಟ್ ಶಾಕ್: ಐವರಿಗೆ ಗಾಯ,ಇಬ್ಬರ ಸ್ಥಿತಿ ಗಂಭೀರ; ತಪ್ಪಿದ ದೊಡ್ಡ ಅನಾಹುತ!

'ಪದ್ಮಭೂಷಣ ಸಣ್ಣ ವಿಷಯ, ಅವರನ್ನು ಪ್ರಧಾನಿಯನ್ನಾಗಿ ಮಾಡಿ': ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ ಹೇಳಿಕೆಗೆ ಕಾಂಗ್ರೆಸ್ ಲೇವಡಿ