ಸಿಬ್ಬಂದಿ ನೇಮಕಾತಿ ಆಯೋಗ Online Desk
ವೃತ್ತಿ & ಉದ್ಯೋಗ ಅವಕಾಶಗಳು

ಪಿಯುಸಿ ಪಾಸಾದವರಿಗೆ ಕೇಂದ್ರ ಸರ್ಕಾರದಲ್ಲಿ ಬಂಪರ್ ಉದ್ಯೋಗಾವಕಾಶ; 2500ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ SSC

ದ್ವಿತೀಯ ಪಿಯುಸಿ ಪಾಸಾಗಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್; ಸಿಬ್ಬಂದಿ ನೇಮಕಾತಿ ಆಯೋಗವು ಗ್ರೂಪ್ ಸಿ ವೃಂದದಡಿ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ಖಾಲಿ ಇರುವ 2,536 ಹುದ್ದೆಗಳ ಭರ್ತಿಗಾಗಿ ಹೈಯರ್ ಸೆಕೆಂಡರಿ ಲೆವೆಲ್ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆ ಕುರಿತ ವರದಿ ಇಲ್ಲಿದೆ:

SSC Recruitment 2026: ದ್ವಿತೀಯ ಪಿಯುಸಿ ಪಾಸಾಗಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್; ಸಿಬ್ಬಂದಿ ನೇಮಕಾತಿ ಆಯೋಗವು (SSC) ಗ್ರೂಪ್ ‘ಸಿ’ ವೃಂದದಡಿ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಕಚೇರಿಗಳಲ್ಲಿ ಖಾಲಿ ಇರುವ ಒಟ್ಟು 2,536 ಹುದ್ದೆಗಳ ಭರ್ತಿಗಾಗಿ ಹೈಯರ್ ಸೆಕೆಂಡರಿ ಲೆವೆಲ್ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಯ ವಿವರ:

  • ಒಟ್ಟು ಹುದ್ದೆಗಳು: 2,536

  • ಹುದ್ದೆಯ ಹೆಸರು:

    • ಕಿರಿಯ ವಿಭಾಗದ ಗುಮಾಸ್ತ

    • ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್

    • ಡೇಟಾ ಎಂಟ್ರಿ ಆಪರೇಟರ್

  • ನೇಮಕಾತಿ ಸಂಸ್ಥೆ: ಸಿಬ್ಬಂದಿ ನೇಮಕಾತಿ ಆಯೋಗ (SSC)

ಅರ್ಹತೆ:

  • ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕಡ್ಡಾಯವಾಗಿ ದ್ವಿತೀಯ ಪಿಯುಸಿ (12ನೇ ತರಗತಿ) ಅಥವಾ ಅದಕ್ಕೆ ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. (ಗಮನಿಸಿ: ಕೆಲವು ನಿರ್ದಿಷ್ಟ ಇಲಾಖೆಗಳ DEO ಹುದ್ದೆಗಳಿಗೆ ವಿಜ್ಞಾನ ವಿಭಾಗದಲ್ಲಿ ಗಣಿತ ವಿಷಯದೊಂದಿಗೆ ಪಿಯುಸಿ ಮುಗಿಸಿರಬೇಕು).

  • ವಯೋಮಿತಿ: 1 ಆಗಸ್ಟ್ 2026 ಕ್ಕೆ ಅನ್ವಯಿಸುವಂತೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 27 ವರ್ಷ ಮೀರಿರಬಾರದು. (ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇರುತ್ತದೆ)

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: ಸೆಪ್ಟೆಂಬರ್ 7, 2026.

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 7, 2026 (ರಾತ್ರಿ 11:00 ಗಂಟೆಯವರೆಗೆ).

  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಅಕ್ಟೋಬರ್ 8, 2026.

  • ಅರ್ಜಿ ತಿದ್ದುಪಡಿ ವಿಂಡೋ (Correction Window): ಅಕ್ಟೋಬರ್ 14 ರಿಂದ ಅಕ್ಟೋಬರ್ 16, 2026

ಅರ್ಜಿ ಶುಲ್ಕ:

  • ಅರ್ಜಿ ಶುಲ್ಕ: ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಪುರುಷ ಅಭ್ಯರ್ಥಿಗಳಿಗೆ ರೂ. 100 ಇರಲಿದೆ. ಜೊತೆಗೆ ಎಸ್‌ಸಿ, ಎಸ್‌ಟಿ, ವಿಕಲಚೇತನರು, ಮಾಜಿ ಸೈನಿಕರು ಮತ್ತು ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

  • ಕನ್ನಡದಲ್ಲೂ ಪರೀಕ್ಷೆ: ಈ ಪರೀಕ್ಷೆಯನ್ನು ಇಂಗ್ಲಿಷ್, ಹಿಂದಿ ಜೊತೆಗೆ ಕನ್ನಡ ಭಾಷೆಯಲ್ಲೂ ಬರೆಯಲು ಅವಕಾಶವಿರುತ್ತದೆ.

  • ಕರ್ನಾಟಕದ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ಉಡುಪಿ, ಹುಬ್ಬಳ್ಳಿ, ಬೆಳಗಾವಿ ಮತ್ತು ಕಲಬುರಗಿ.

ಸಂಬಳ:

  • LDC / JSA ಹುದ್ದೆಗಳು: ರೂ. 19,900 ರಿಂದ ರೂ. 63,200 (Level-2)

  • Data Entry Operator (DEO): ರೂ. 25,500 ರಿಂದ ರೂ. 81,100 (Level-4) ಮತ್ತು ಕೆಲವು ಇಲಾಖೆಗಳಲ್ಲಿ ರೂ. 92,300 ರವರೆಗೆ (Level-5) ಇರಲಿದೆ.

ಅರ್ಜಿ ಸಲ್ಲಿಕೆ ವಿಧಾನ:

ಸಿಬ್ಬಂದಿ ನೇಮಕಾತಿ ಆಯೋಗದ (SSC) ಗ್ರೂಪ್ ಸಿ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುಲು ಅಭ್ಯರ್ಥಿಗಳು ಎಸ್‌ಎಸ್‌ಸಿಯ ಹೊಸ ಅಧಿಕೃತ ವೆಬ್‌ಸೈಟ್ ssc.gov.in ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ.

ಆಯ್ಕೆ ವಿಧಾನ:

ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆಗಳಾದ ಟಯರ್-1 (Tier-I) ಮತ್ತು ಟಯರ್-2 (Tier-II) ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ಕೊನೆಯಲ್ಲಿ ಟೈಪಿಂಗ್ ಅಥವಾ ಸ್ಕಿಲ್ ಟೆಸ್ಟ್ ಮತ್ತು ದಾಖಲಾತಿ ಪರಿಶೀಲನೆ ಇರುತ್ತದೆ. (ಗಮನಿಸಿ: ಈ ಬಾರಿ ಟಯರ್-1 ಪರೀಕ್ಷೆಯಲ್ಲಿ ಪ್ರತಿ ವಿಷಯಕ್ಕೂ 15 ನಿಮಿಷಗಳ ಸೆಕ್ಷನಲ್ ಟೈಮಿಂಗ್ಸ್ ನಿಯಮವನ್ನು ತರಲಾಗಿದೆ).

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BRICS Business Forum 2026: ಭಾರತದ ಮಾರುಕಟ್ಟೆ ಬೃಹತ್, ವೇಗವಾಗಿ ಬೆಳೆಯುತ್ತಿದೆ; ಬಲಿಷ್ಠ ಆರ್ಥಿಕ ಸಹಭಾಗಿತ್ವಕ್ಕೆ ಸೂಕ್ತ ರಾಷ್ಟ್ರ: ವಿದೇಶಾಂಗ ಸಚಿವ ಜೈಶಂಕರ್

ಭಾರತ–ಚೀನಾ ಸಂಬಂಧ; ಭೂಮಿಯ ಲೋಹಗಳು, ವೀಸಾ, ಹೂಡಿಕೆ; ಕ್ಸಿ-ಜಿನ್ ಪಿಂಗ್-ಪ್ರಧಾನಿ ಮೋದಿ ಮಾತುಕತೆ ಅಜೆಂಡಾ ಏನು?

BRICS ಶೃಂಗಸಭೆ: ದೆಹಲಿಗೆ ಆಗಮಿಸಿದ Vladimir Putin; ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ, ಭಾರತ-ರಷ್ಯಾ ಸ್ನೇಹಕ್ಕೆ ಮತ್ತಷ್ಟು ಬಲ..!

'Brand Bengaluru'ಯೋಜನೆಗೆ ಬಿಗ್ ಬೂಸ್ಟ್: ಸಿಲಿಕಾನ್ ಸಿಟಿ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ನೀಡಲು GBA ಮಾಸ್ಟರ್ ಪ್ಲ್ಯಾನ್!

ಮಧು ಬಂಗಾರಪ್ಪ ದಿನಕ್ಕೊಂದು ಶೂ ಹಾಕ್ತಾರೆ, ಶಾಲಾ ಮಕ್ಕಳಿಗೆ ಕಿತ್ತೋಗಿರೋ ಶೂ ಕೊಡ್ತಾರೆ; ಚಿಂದಿ ಆಯುವವರು ಕೂಡ ಅದನ್ನು ತಗೊಳ್ಳಲ್ಲ- ಶ್ರೀರಾಮುಲು