480 ಇಂಜಿನಿಯರಿಂಗ್ ಸರ್ವೀಸ್ ಹುದ್ದೆಗಳಿಗೆ UPSC ನೇಮಕಾತಿ ಅಧಿಸೂಚನೆ ಪ್ರಕಟ Online Desk
ವೃತ್ತಿ & ಉದ್ಯೋಗ ಅವಕಾಶಗಳು

Engineering ಪದವೀಧರರಿಗೆ ಗುಡ್‌ನ್ಯೂಸ್: 480 ಇಂಜಿನಿಯರಿಂಗ್ ಸರ್ವೀಸ್ ಹುದ್ದೆಗಳಿಗೆ UPSC ನೇಮಕಾತಿ ಅಧಿಸೂಚನೆ ಪ್ರಕಟ

UPSC Recruitment 2026: ಇಂಜಿನಿಯರಿಂಗ್ ಪದವೀಧರರಿಗೆ ಕೇಂದ್ರ ಸರ್ಕಾರಿ ನೌಕರಿಯ ಬಂಪರ್ ಆಫರ್: UPSC ESE ನೇಮಕಾತಿ ಅಧಿಸೂಚನೆ ಪ್ರಕಟ, ಅರ್ಜಿ ಸಲ್ಲಿಕೆ ಹೇಗೆ? ಅರ್ಹತೆ, ಪ್ರಮುಖ ದಿನಾಂಕಗಳ ಸಂಪೂರ್ಣ ವಿವರ ಇಲ್ಲಿದೆ:

UPSC Recruitment 2026: ಕೇಂದ್ರ ಸಾರ್ವಜನಿಕ ಸೇವಾ ಆಯೋಗವು (UPSC) ಗ್ರೂಪ್ ಎ ಮತ್ತು ಗ್ರೂಪ್ ಬಿ ದರ್ಜೆಯ ಸುಮಾರು 480 ಇಂಜಿನಿಯರಿಂಗ್ ಸರ್ವೀಸ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ESE 2027 ಅಧಿಸೂಚನೆಯನ್ನು ಪ್ರಕಟಿಸಿದೆ. ಭಾರತ ಸರ್ಕಾರದ ವಿವಿಧ ತಾಂತ್ರಿಕ ಮತ್ತು ಮೂಲಸೌಕರ್ಯ ಇಲಾಖೆಗಳಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಇಂಜಿನಿಯರಿಂಗ್ ಪದವೀಧರರಿಗೆ ಇದು ಸುವರ್ಣ ಅವಕಾಶವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಗಳ ವಿವರ:

  • ಒಟ್ಟು ಹುದ್ದೆಗಳು: 480

    • ಸಿವಿಲ್ ಇಂಜಿನಿಯರಿಂಗ್ (Civil Engineering) - 219 ಹುದ್ದೆಗಳು

    • ಮೆಕಾನಿಕಲ್ ಇಂಜಿನಿಯರಿಂಗ್ (Mechanical Engineering) - 91 ಹುದ್ದೆಗಳು

    • ಎಲೆಕ್ಟ್ರಿಕಲ್ ಇಂಜಿನಿಯರಿಂಗ್ (Electrical Engineering) - 77 ಹುದ್ದೆಗಳು

    • ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಇಂಜಿನಿಯರಿಂಗ್ (Electronics & Telecommunication) - 93 ಹುದ್ದೆಗಳು

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: ಸೆಪ್ಟೆಂಬರ್ 16, 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 6, 2026 (ಸಂಜೆ 6:00 ಗಂಟೆಯವರೆಗೆ)

  • ಪೂರ್ವಭಾವಿ ಪರೀಕ್ಷೆ (Prelims) ದಿನಾಂಕ: ಜನವರಿ 31, 2027

  • ಮುಖ್ಯ ಪರೀಕ್ಷೆ (Mains) ದಿನಾಂಕ: ಜೂನ್ 18, 2027

ಅರ್ಹತೆ:

  • ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಪಟ್ಟ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ (B.E / B.Tech) ಪೂರ್ಣಗೊಳಿಸಿರಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳೂ ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

  • ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ತುಂಬಿರಬೇಕು ಮತ್ತು ಗರಿಷ್ಠ 30 ವರ್ಷ ಮೀರಿರಬಾರದು. (ನಿಯಮಾವಳಿಗಳ ಪ್ರಕಾರ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ)

ಅರ್ಜಿ ಶುಲ್ಕ:

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ: ₹200

  • ಮಹಿಳಾ, ಎಸ್‌ಸಿ, ಎಸ್‌ಟಿ ಮತ್ತು PwBD ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕ ಇರುವುದಿಲ್ಲ (ವಿನಾಯಿತಿ ಇದೆ)

ಅರ್ಜಿ ಸಲ್ಲಿಕೆ ವಿಧಾನ:

  • UPSC Online Portalಗೆ ಹೋಗಿ

  • Universal Registration (URN) ರಚಿಸಿ, Common Application Form (CAF) ಭರ್ತಿ ಮಾಡಬೇಕು.

  • ಸಾಮಾನ್ಯ ಫೋಟೋದ ಜೊತೆಗೆ ಲೈವ್ ಫೋಟೋಗ್ರಾಫ್ ಅಪ್‌ಲೋಡ್ ಮಾಡುವುದು ಕಡ್ಡಾಯ.

  • ಬಿಳಿ ಹಾಳೆಯ ಮೇಲೆ ಕಪ್ಪು ಶಾಯಿಯಲ್ಲಿ ಒಂದರ ಕೆಳಗೆ ಒಂದರಂತೆ 3 ಬಾರಿ ಸಹಿ ಮಾಡಿ ಅಪ್‌ಲೋಡ್ ಮಾಡಬೇಕು.

  • ಅಂತಿಮ ಸಲ್ಲಿಕೆಯ ನಂತರ ಅರ್ಜಿಯನ್ನು ಹಿಂಪಡೆಯಲು ಅಥವಾ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಮೂರು ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:

  • ಹಂತ 1: ಪ್ರಿಲಿಮಿನರಿ ಪರೀಕ್ಷೆ (Preliminary Exam - Objective Type)

  • ಹಂತ 2: ಮುಖ್ಯ ಪರೀಕ್ಷೆ (Main Exam - Conventional Type)

  • ಹಂತ 3: ವ್ಯಕ್ತಿತ್ವ ಪರೀಕ್ಷೆ / ಸಂದರ್ಶನ (Personality Test / Interview)

ಅರ್ಜಿ ಸಲ್ಲಿಕೆ ಪೋರ್ಟಲ್:

UPSC Online Portal (upsconline.nic.in)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೊಲೆ ಆರೋಪಿ ನಟ ದರ್ಶನ್​​ಗೆ ಮತ್ತೊಂದು ಶಾಕ್; ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಜಾ!

'ಪಾಕಿಸ್ತಾನಕ್ಕೆ ಸರಿಯಾದ ಸಲಹೆ ನೀಡಿ': ಜಮ್ಮು- ಕಾಶ್ಮೀರ ಕುರಿತ ಹೇಳಿಕೆ ಬಗ್ಗೆ OIC ಗೆ ಭಾರತದ ತಿರುಗೇಟು!

ರಾಜ್ಯ ಬಿಜೆಪಿ ಉಸ್ತುವಾರಿಗಳ ಬದಲಾವಣೆ; ಕರ್ನಾಟಕಕ್ಕೆ ಹೊಸ ಉಸ್ತುವಾರಿ ನೇಮಕ; ರಾಧಾಮೋಹನ್‌ ದಾಸ್‌ಗೆ ಕೊಕ್!

ಕಚ್ಚಾ ತೈಲ ಬೆಲೆ ಇಳಿಕೆ ಎಫೆಕ್ಟ್; ಕೊನೆಗೂ ಪುಟಿದೆದ್ದ Indian Stock market, ಸೆನ್ಸೆಕ್ಸ್ 299 ಅಂಕ ಏರಿಕೆ!

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್​ಗೆ 1 ಕೋಟಿ ರೂ. ಬಹುಮಾನ ಘೋಷಿಸಿದ ಭಗವಂತ್ ಮಾನ್!