RRB NTPC Recruitment 2026: ರೈಲ್ವೆ ನೇಮಕಾತಿ ಮಂಡಳಿಯು ತಾಂತ್ರಿಕೇತರ ಜನಪ್ರಿಯ ವರ್ಗಗಳ ಅಡಿಯಲ್ಲಿ ಒಟ್ಟು 5,165 ಖಾಲಿ ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿಯ ಕಿರು ಅಧಿಸೂಚನೆಗಳನ್ನು ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ಪದವಿ ಹಾಗೂ ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಹುದ್ದೆಗಳ ವಿವರ:
ನೇಮಕಾತಿ ಸಂಸ್ಥೆ: ರೈಲ್ವೆ ನೇಮಕಾತಿ ಮಂಡಳಿ (RRB)
ಒಟ್ಟು ಹುದ್ದೆಗಳು: 5,165
ಪದವೀಧರ ಮಟ್ಟ: 3,477 ಹುದ್ದೆಗಳು
ಗೂಡ್ಸ್ ಟ್ರೈನ್ ಮ್ಯಾನೇಜರ್
ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್‌ವೈಸರ್
ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್
ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್
ಪದವಿಪೂರ್ವ / 12ನೇ ತರಗತಿ ಮಟ್ಟ: 1,688 ಹುದ್ದೆಗಳು
ಟ್ರೈನ್ಸ್ ಕ್ಲರ್ಕ್
ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್
ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್
ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್
ಪ್ರಮುಖ ದಿನಾಂಕಗಳು:
ಪದವಿ ಮಟ್ಟದ ಹುದ್ದೆಗಳು:
ಅರ್ಜಿ ಸಲ್ಲಿಕೆ ಆರಂಭವಾಗುವ ದಿನಾಂಕ: 08 ಅಕ್ಟೋಬರ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06 ನವೆಂಬರ್ 2026 (ರಾತ್ರಿ 11:59 ರವರೆಗೆ)
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 08 ನವೆಂಬರ್ 2026
ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಅವಕಾಶ: 09 ನವೆಂಬರ್ ರಿಂದ 18 ನವೆಂಬರ್ 2026
ಪದವಿಪೂರ್ವ ಮಟ್ಟದ ಹುದ್ದೆಗಳು:
ಅರ್ಜಿ ಸಲ್ಲಿಕೆ ಆರಂಭವಾಗುವ ದಿನಾಂಕ: 15 ಅಕ್ಟೋಬರ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13 ನವೆಂಬರ್ 2026 (ರಾತ್ರಿ 11:59 ರವರೆಗೆ)
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 15 ನವೆಂಬರ್ 2026
ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಅವಕಾಶ: 16 ನವೆಂಬರ್ ರಿಂದ 25 ನವೆಂಬರ್ 2026
ಅರ್ಹತೆ:
ಶೈಕ್ಷಣಿಕ ಅರ್ಹತೆ:
ಪದವಿ ಹುದ್ದೆಗಳಿಗೆ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿರಬೇಕು. ಪದವಿಪೂರ್ವ ಹುದ್ದೆಗಳಿಗೆ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ (01/01/2027ಕ್ಕೆ ಅನ್ವಯಿಸುವಂತೆ):
ಪದವಿಪೂರ್ವ ಹುದ್ದೆಗಳು: 18 ರಿಂದ 30 ವರ್ಷಗಳು.
ಪದವೀಧರ ಹುದ್ದೆಗಳು: 18 ರಿಂದ 33 ವರ್ಷಗಳು.
(ಗಮನಿಸಿ: ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ).
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಮತ್ತು EWS ಅಭ್ಯರ್ಥಿಗಳಿಗೆ ₹500 ಹಾಗೂ ಎಸ್‌ಸಿ, ಎಸ್‌ಟಿ, ಮಹಿಳಾ, ಮಾಜಿ ಸೈನಿಕ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ₹250 ಇರಲಿದೆ.
ಅರ್ಜಿ ಸಲ್ಲಿಸುವುದು ಹೇಗೆ?:
ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದಂದು ರೈಲ್ವೆ ಇಲಾಖೆಯ ಅಧಿಕೃತ ಅಪ್ಲಿಕೇಶನ್ ಪೋರ್ಟಲ್ ಆದ RRB Apply ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು (CBT 1 ಮತ್ತು CBT 2), ಹುದ್ದೆಗಳಿಗೆ ಅನುಗುಣವಾಗಿ ಟೈಪಿಂಗ್ ಕೌಶಲ್ಯ ಪರೀಕ್ಷೆ/ಅಪ್ಟಿಟ್ಯೂಡ್ ಟೆಸ್ಟ್, ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ತಪಾಸಣೆ ನಡೆಯಲಿದೆ.