ಮೋರ್ಗನ್ ಆಸ್ಟೆ ಮತ್ತು ಧ್ರುವ ಸರ್ಜಾ 
ಸಿನಿಮಾ

'ಪೊಗರು' ಚಿತ್ರದ ಮೂಲಕ ಬಾಡಿ ಬಿಲ್ಡರ್ ಮೋರ್ಗನ್ ಆಸ್ಟೆ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ 

ಪೊಗರು ಚಿತ್ರದಲ್ಲಿ ಕ್ಲೈಮ್ಯಾಕ್ಸ್ ದೃಶ್ಯವನ್ನು ವಿಶಿಷ್ಟ ರೀತಿಯಲ್ಲಿ ತೋರಿಸಲು ಸಜ್ಜಾಗಿದ್ದಾರೆ ಅದರಲ್ಲಿ ಕುಖ್ಯಾತನ ಪಾತ್ರ ನಿರ್ವಹಿಸುತ್ತಿರುವ ಧ್ರುವ ಸರ್ಜಾ ಮತ್ತು ನಿರ್ದೇಶಕ ನಂದ ಕಿಶೋರ್. 

ಪೊಗರು ಚಿತ್ರದಲ್ಲಿ ಕ್ಲೈಮ್ಯಾಕ್ಸ್ ದೃಶ್ಯವನ್ನು ವಿಶಿಷ್ಟ ರೀತಿಯಲ್ಲಿ ತೋರಿಸಲು ಸಜ್ಜಾಗಿದ್ದಾರೆ ಅದರಲ್ಲಿ ಕುಖ್ಯಾತನ ಪಾತ್ರ ನಿರ್ವಹಿಸುತ್ತಿರುವ ಧ್ರುವ ಸರ್ಜಾ ಮತ್ತು ನಿರ್ದೇಶಕ ನಂದ ಕಿಶೋರ್. ಇದಕ್ಕಾಗಿ ವಿಶ್ವದ ಹಲವು ಭಾಗಗಳಲ್ಲಿ ಉನ್ನತ ಮಟ್ಟದ ಬಾಡಿ ಬಿಲ್ಡರ್ ಗಳು ಮತ್ತು ಅಥ್ಲೆಟ್ ಗಳನ್ನು ಚಿತ್ರದಲ್ಲಿ ಸೇರಿಸುತ್ತಿದ್ದಾರೆ. 


ಚಿತ್ರೀಕರಣ ಹೈದರಾಬಾದ್ ನಲ್ಲಿ ಭರದಿಂದ ಸಾಗುತ್ತಿದ್ದು ಚಿತ್ರೀಕರಣ ಸೆಟ್ ಗೆ ಮೊರ್ಗನ್ ಅಸ್ಟೆ ಬಂದು ಸೇರಿದ್ದಾರೆ. ಫ್ರಾನ್ಸ್ ಮೂಲದ ಅಸ್ಟೆ ವಿಶ್ವದಲ್ಲಿಯೇ ಉನ್ನತ ಬಾಡಿ ಬಿಲ್ಡರ್ ಗಳಲ್ಲಿ ಒಬ್ಬರು. ಇದೀಗ ಕನ್ನಡ ಚಿತ್ರದ ಮೂಲಕ ಭಾರತೀಯ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 


ವೃತ್ತಿಪರ ಬಾಡಿ ಬಿಲ್ಡರ್ ಆಗಿರುವ ಮೊರ್ಗನ್ ಐಎಫ್ ಬಿಬಿ ಫ್ರಾನ್ಸ್ ಚಾಂಪಿಯನ್ ಷಿಪ್. ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಚಿತ್ರೀಕರಣ ಮಧ್ಯೆ ನಟ ಧ್ರುವ ಸರ್ಜಾಗೆ ಕೂಡ ತರಬೇತಿ ಕೊಡುತ್ತಿದ್ದಾರೆ. ಧ್ರುವ ಅವರು ಡ್ವೇನ್ ‘ದಿ ರಾಕ್’ ಜಾನ್ಸನ್ ಅವರ ಜೊತೆ ಕೂಡ ತೆರೆ ಹಂಚಿಕೊಳ್ಳುವ ಸಾಧ್ಯತೆಯಿದೆ.


ಬಿ ಕೆ ಗಂಗಾಧರ್ ನಿರ್ಮಾಣದ ಪೊಗರು ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ. ಧನಂಜಯ್ ಕೂಡ ಖಳ ನಾಯಕನ ಪಾತ್ರ ಮಾಡುತ್ತಿದ್ದಾರೆ. ಸಂಪತ್, ರವಿ ಶಂಕರ್ ಮತ್ತು ತಾರಾ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಕ್ಲೈಮ್ಯಾಕ್ಸ್ ಚಿತ್ರೀಕರಣ ಕೆಲ ದಿನಗಳವರೆಗೆ ಮುಂದುವರಿಯಲಿದೆ. 


ಮುಂದಿನ ದಿನಗಳಲ್ಲಿ ಚಿತ್ರತಂಡದಿಂದ ಇನ್ನೂ ಕೆಲವು ಪ್ರಮುಖ ಸುದ್ದಿಗಳು ಹೊರಬರುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ