ನಿಖಿಲ್ ಗಾಗಿ ನೈಜ ಘಟನೆ ಆಧಾರಿತ ಕಥೆ ಸಿದ್ದಪಡಿಸುತ್ತಿದ್ದಾರೆ ನಿರ್ದೇಶಕ ಕೃಷ್ಣ!
ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರ್ 4ನೇ ಸಿನಿಮಾ ಬಿಗ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ, ಲೈಕಾ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗಾಗಿ ಕಥೆ ಬರೆಯಲಾಗುತ್ತಿದೆ.
ಬೆಂಗಳೂರು: ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರ್ 4ನೇ ಸಿನಿಮಾ ಬಿಗ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ, ಲೈಕಾ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗಾಗಿ ಕಥೆ ಬರೆಯಲಾಗುತ್ತಿದೆ.
ನಿಖಿಲ್ ಗಾಗಿ ಸಿದ್ದಪಡಿಸುತ್ತಿರುವ ಕಥೆ ನೈಜಕಥೆ ಆಧಾರಿತವಾಗಿದ್ದು, ಅದರ ಮೇಲೆ ಕಥೆ ಬರೆಯಲಾಗುತ್ತಿದೆ ಎಂದು ನಿರ್ದೇಶಕ ಕೃಷ್ಣ ತಿಳಿಸಿದ್ದಾರೆ, ಆದರೆ ಕಥೆಯ ಬಗ್ಗೆ ಹೆಚ್ಚಿನ ಸುಳಿವು ನೀಡಿಲ್ಲ, ಗಜಕೇಸರಿ, ಹೆಬ್ಬುಲಿ, ಮತ್ತು ಪೈಲ್ವಾನ್ ಗಿಂತ ಈ ಕಥೆ ಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ.
ಇದು ಸಂಪೂರ್ಣವಾಗಿ ಹೊಸ ತರನಾದ ಕಥೆ, ನಿಖಿಲ್ ಗೂ ಕಥೆ ಇಷ್ಟವಾಗಿದೆ, ಇದನ್ನು ವಿಶಿಷ್ಟವಾದ ರೀತಿಯಲ್ಲಿ ಹೇಳಲು ಹೊರಟಿದ್ದು ಹೆಚ್ಚು ಆಸಕ್ತಿ ಮೂಡಿಸಿದೆ, ಈ ಸಿನಿಮಾ ಕಥೆಗಾಗಿ ನಿಖಿಲ್ ಸಂಪೂರ್ಣ ಬದಲಾವಣೆಯಾಗುತ್ತಿದ್ದಾರೆ ಎಂದು ಕೃಷ್ಣ ಹೇಳಿದ್ದಾರೆ.
ಸಿನಿಮಾಗೆ ನಾಯಕ ಫೈನಲ್ ಆಗಿದ್ದು ಉಳಿದ ಪಾತ್ರಗಳಿಗಾಗಿ ಇನ್ನೂ ಆಯ್ಕೆ ನಡೆದಿಲ್ಲ, ಜೊತೆಗೆ ನಾಯಕಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.