ಹೈದರಾಬಾದ್: ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರದ ಬಾಕ್ಸ್ ಆಫೀಸ್ ಗಳಿಕೆ 3 ದಿನಕ್ಕೆ 600 ಕೋಟಿ ರೂ ದಾಟಿದ್ದು, ಈ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ 500 ಕೋಟಿ ರೂ ಗಳಿಕೆ ಕಂಡ ಸಿನಿಮಾ ಎಂಬ ದಾಖಲೆಗೆ ಪಾತ್ರವಾಗಿದೆ.
ಹೌದು.. ತೆಲುಗು ಸ್ಟಾರ್ ಅಲ್ಲು ಅರ್ಜುನ್ ಅವರ ಪುಷ್ಪ 2: ದಿ ರೂಲ್ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 600 ಕೋಟಿ ರೂಪಾಯಿಗಳನ್ನು ದಾಟಿದ್ದು, ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ಈ ಚಿತ್ರ ಮೂರು ದಿನಕ್ಕೆ ತನ್ನ ಗಳಿಕೆಯನ್ನು 621 ಕೋಟಿ ರೂಗೆ ಏರಿಸಿಕೊಂಡಿದೆ. ಪ್ರಮುಖವಾಗಿ ವಾರಾಂತ್ಯ ಮತ್ತು ಭಾನುವಾರ ಚಿತ್ರ ಉತ್ತಮ ಗಳಿಕೆ ಕಂಡಿದೆ ಎಂದು ಹೇಳಲಾಗಿದೆ.
ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಮೂಲಗಳ ಪ್ರಕಾರ, ಪುಷ್ಪಾ ಚಿತ್ರದ ಗಳಿಕೆ 600 ಕೋಟಿ ರೂ ದಾಟಿದ್ದು, ಕಡಿಮೆ ಅವಧಿಯಲ್ಲಿ 500 ಕೋಟಿ ರೂ ಗಳಿಸಿದ ಮೊದಲ ಭಾರತೀಯ ಚಿತ್ರ ಎಂಬ ಕೀರ್ತಿಗೆ ಪುಷ್ಪ 2 ಪಾತ್ರವಾಗಿದೆ.
ಪುಷ್ಪ 2 ಚಿತ್ರ ತೆಲುಗು, ಹಿಂದಿ, ತಮಿಳು, ಕನ್ನಡ, ಬೆಂಗಾಲಿ ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ಬಿಂಗ್ ಆವೃತ್ತಿಗಳೊಂದಿಗೆ ಗುರುವಾರ ಪ್ರಪಂಚದಾದ್ಯಂತ ಬಿಡುಗಡೆಯಾಗಿತ್ತು. ಮೊದಲ ದಿನ ಈ ಚಿತ್ರ 294 ಕೋಟಿ ರೂಪಾಯಿಗಳ ಗಳಿಕೆ ಕಾಣುವ ಮೂಲಕ ಮೊದಲ ದಿನವೇ ಅತೀ ಹೆಚ್ಚು ಗಳಿಕೆ ಕಂಡ ಮೊದಲ ಸಿನಿಮಾ ಎಂಬ ದಾಖಲೆಗೂ ಪಾತ್ರವಾಗಿದೆ.
ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಓಪನಿಂಗ್ ಗಳಿಸಿದ ಚಿತ್ರಗಳ ದಾಖಲೆಯನ್ನು ಪುಷ್ಪ2 ಮುರಿದಿದ್ದು, ಇದಕ್ಕೂ ಮೊದಲು SS ರಾಜಮೌಳಿಯವರ RRR (Rs 223.5 ಕೋಟಿ), ಬಾಹುಬಲಿ 2 (Rs 217 ಕೋಟಿ) ಮತ್ತು ಕಲ್ಕಿ 2898 AD (Rs 175 ಕೋಟಿ) ಗೆ ಸೇರಿತ್ತು.