ಇಮ್ರಾನ್ ಹಷ್ಮಿ ಹೆಸರಿನೊಂದಿಗೆ 'ಸೀರಿಯಲ್ ಕಿಸ್ಸರ್' ಟ್ಯಾಗ್ ಅಂಟಿಕೊಂಡುಬಿಟ್ಟಿದೆ. ತೆರೆ ಮೇಲೆ ತಾರೆಯರೊಂದಿಗೆ ಸಿಕ್ಕಾಪಟ್ಟೆ ರೋಮ್ಯಾನ್ಸ್ ಮಾಡುವ, ಅಧರಕ್ಕೆ ಅಧರ ಸೇರಿಸಿ ಮುತ್ತಿಕ್ಕುವ ಈತನನ್ನು ಹೆಂಡತಿ ಹೇಗೆ ಸ್ವೀಕರಿಸಿರಬಹುದು? ಸಿನಿಮಾದಲ್ಲೇ ಆದರೂ ನಾಯಕಿಯರೊಂದಿಗೆ 'ಮಿತಿ ಮೀರಿ' ಪ್ರಣಯ ದೃಶ್ಯಗಳಳ್ಲಿ ಕಾಣಿಸಿಕೊಳ್ಳುವ ಹೀರೋಗಳ ಬಗ್ಗೆ ಅವರ ಪತ್ನಿಯರಿಗೆ ರ್ಕಣಕಾಲವಾದರೂ ಅಸಮಾಧಾನ ಉಂಟಾಗುವುದು ಸ್ವಾಭಾವಿಕ. ಇನ್ನು ಲಿಪ್ಲಾಕ್ ಮಾಡುವ ಗಂಡನ ಬಗ್ಗೆ ಹೆಂಡತಿಗೆ ಹೇಗಾಗಬೇಡ?
ಆದರೆ, 'ನನ್ನ ಹೆಂಡತಿ ಜಾಣೆ, ಪ್ರಬುದ್ಧೆ. ಬೇರೆಯವರಾಗಿದ್ದರೆ ನನಗೆ ಎಂದೋ ಸೋಡಾ ಚೀಟಿ ಕೊಟ್ಟಿರುತ್ತಿದ್ದಳು. ನನ್ನಾಕೆಗೆ ನನ್ನ ಬಗ್ಗೆ ತುಂಬುನಂಬುಗೆ. ಅವಳಿಗೆ ಅಭದ್ರತೆ ಭಾವ ಯಾವತ್ತೂ ಕಾಡಿಲ್ಲ. ನಮ್ಮದು ಅನ್ಯೋನ್ಯ ದಾಂಪತ್ಯ' ಎಂದು ಹೇಳಿಕೊಂಡಿದ್ದಾನೆ 30ಕ್ಕೂ ಅಧಿಕ ಹಿಂದಿ ಚಿತ್ರಗಳಳ್ಲಿ ನಟಿಸಿರುವ ಹಷ್ಮಿ. 2006ರಲ್ಲಿ ಇಮ್ರಾನ್ನನ್ನು ಕೈ ಹಿಡಿದಾಕೆ ಪರ್ವೀನ್ ಸಹಾನಿ. ದಂಪತಿಗೆ ಅಯಾನ್ ಹೆಸರಿನ ಪುತ್ರನಿದ್ದಾನೆ.