ಸಿನಿಮಾಗೆ ಬಂದಮೇಲೆ ಬಟ್ಟೆ ಬಿಚ್ಚಬೇಕೋ, ಬೇಡವೋ ಎಂಬ ಪ್ರಶ್ನೆ ನಟಿಯರಿಗೆ ಎದುರಾಗುತ್ತದೆ. ಆದರೆ ಬಟ್ಟೆ ಬಿಚ್ಚಿದ ಕಾರಣಕ್ಕೆ ಸಿನಿಮಾದಲ್ಲಿ ಅವಕಾಶ ಸಿಕ್ಕ ಹೆಗ್ಗಳಿಕೆ ಇರುವವರು ಪೂನಂ ಪಾಂಡೆ. ಆದರೆ, ಎಕ್ಸ್‌ಪೋಸ್ ಮಾಡಿಯೇ ಜನಪ್ರಿಯವಾಗಿರುವ ನನಗೆ ನಶಾ ಚಿತ್ರದಿಂದ ಬಾಲಿವುಡ್‌ನಲ್ಲೂ 'ಎಕ್ಸ್‌ಪೋಷರ್' ಸಿಗುತ್ತದೆ ಎಂಬ ಪೂನಂ ನಂಬಿಕೆ ಸುಳ್ಳಾಗಿದೆ. ಪೋಸ್ಟರ್ ನೋಡಿ, ಪೂನಂ ಬೆನ್ನು ನೋಡಲು ಹೋದವರು ತಲೆಕೆರೆದುಕೊಂಡು ವಾಪಸ್ಸು ಬಂದಿದ್ದಾರೆ.
ಪೂನಂ ಪಾಂಡೆ ಈ ಬಾರಿಯಾದರೂ ಆಡಿದ ಮಾತಿಗೆ ತಪ್ಪುವುದಿಲ್ಲ ಎಂದುಕೊಂಡವರಿಗೆ ಮತ್ತೆ ಭ್ರಮನಿರಸನವಾಗಿದೆ. ಸಿನಿಮಾದಲ್ಲಿ 'ಅಂಥದ್ದೇನೂ' ಇಲ್ಲವಂತೆ ಎಂಬುದೇ ಅದಕ್ಕೆ ಕಾರಣ. ಹಾಗಾಗಿ, ಮೊದಲ ದಿನ ಮತ್ತು ಮೊದಲ ವಾರದ ಕಲೆಕ್ಷನ್ ಡಲ್ ಆಗಿದೆ. ಪೂನಂ ಪಾಂಡೆಯ ಅಲ್ಪಸ್ವಲ್ಪ ಸ್ಕಿನ್ 'ಶೋ' ಇದ್ದರೂ ಒಂದು ಶೋ ಕೂಡಾ ಹೌಸ್‌ಪುಲ್ ಆಗಲಿಲ್ಲವಂತೆ.
ಇಂಡಿಯನ್ ಕ್ರಿಕೆಟ್ ಟೀಮ್ ವರ್ಲ್ಡ್‌ಕಪ್ ಗೆದ್ದರೆ ಬೆತ್ತಲಾಗುತ್ತೇನೆ ಎಂದಿದ್ದ ಪೂನಂ ನಶಾ ಚಿತ್ರದಲ್ಲಿ ಕೇವಲ ಬೆತ್ತ ಹಿಡಿದ ಟೀಚರ್ ಆಗಿದ್ದಾರೆ. ಟೀಚರ್ ಪೂನಂ ಪಾಂಡೆ ಮತ್ತು ಸ್ಟೂಡೆಂಟ್ ಒಬ್ಬನ ನಡುವಿನ ರೊಮ್ಯಾನ್ಸ್, ಈ ಚಿತ್ರದ ಕಥೆ. ಆದರೆ ಅದರ 'ನಡುವಿನ' ವಿಷಯ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. 'ಲವ್ ಅಂದ್ರೆ ಬೇಸಿಗೆ ರಜಾ ಇದ್ದಂತೆ, ಅದು ಪ್ರತಿವರ್ಷ ಬೇರೆ ಬೇರೆ ಥರಾ ಮಜಾ ಕೊಡುತ್ತೆ' ಎನ್ನುವ ಪೂನಂ ಪಾಂಡೆಯ ಡೈಲಾಗ್ ವರ್ಕ್‌ಔಟ್ ಆಗಿಲ್ಲ. ನಶಾ ಚಿತ್ರದಲ್ಲಿ ಪೂನಂ 'ಕ್ಲಾಸ್' ಟೀಚರ್ ಆಗಿದ್ದರೂ ಇದು 'ಮಾಸ್' ಸಿನಿಮಾ ಎಂದೇ ಅರ್ಥೈಸಲಾಗಿತ್ತು. ಆದರೆ ಥಿಯೇಟರ್‌ನಲ್ಲಿ 'ಅಟೆಂಡನ್ಸ್' ಮಾತ್ರ ತೀರಾ ಕಡಿಮೆಯಂತೆ.
ಟ್ರೈಲರ್, ಪೋಸ್ಟರ್‌ಗಳಲ್ಲಿ ಕಂಡಿದ್ದ ಪೂನಂ ಮತ್ತು ಶಿವಂ ಜೋಡಿ ಪ್ರೇಕ್ಷಕರಿಗೆ ಸುಂದರಂ ಎನಿಸಿಲ್ಲ. ಅಲ್ಲದೆ, ಪೋಸ್ಟರ್‌ಗಳು ಕೇವಲ ಪ್ರೇಕ್ಷಕರನ್ನು ಆಕರ್ಷಿಸಲು ಹಾಕಿದ್ದು ಎಂದು ಸ್ವತಃ ಪೂನಂ ಹೇಳಿದ್ದಾರೆ.
ಚಿತ್ರದ ಬಿಡುಗಡೆಗೆ ಮುನ್ನ ನಶಾ ಚಿತ್ರದಿಂದ ಲೀಕ್ ಆಗಿದೆ ಎಂಬ ಗಾಳಿಸುದ್ದಿಯೊಂದಿಗೆ ಬಿಡುಗಡೆಯಾಗಿದ್ದ ಪೂನಂ ಪಾಂಡೆಯ ಎಮ್‌ಎಮ್‌ಎಸ್ ಕ್ಲಿಪ್ ಕೂಡಾ ನಶಾ ಕ್ಲಿಕ್ ಆಗಲು ಸಹಾಯ ಮಾಡಿಲ್ಲ. ಆ ಎಮ್‌ಎಮ್‌ಎಸ್ ಅನ್ನು ಇಂಟರ್‌ನೆಟ್‌ನಲ್ಲಿ ಕ್ಲಿಕ್ ಮಾಡಿ ನೋಡಿಕೊಂಡವರು ಬಹಳ ಜನ. ಆದರೆ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಹೋದವರು ತೀರಾ ಕಡಿಮೆ. ವಿಮರ್ಶಕರು ಕೂಡ ಚಿತ್ರದ ಬಗ್ಗೆ ನೆಗೆಟಿವ್ ಅಭಿಪ್ರಾಯ ಕೊಟ್ಟಿದ್ದಾರೆ. ಜೊತೆಗೆ, ಪೂನಂರ ಜನಪ್ರಿಯ ಇಮೇಜ್‌ನಿಂದಾಗಿ ಫ್ಯಾಮಿಲಿ ಆಡಿಯೆನ್ಸ್
ಚಿತ್ರಮಂದಿರದ ಬಳಿ ಸುಳಿದಿಲ್ಲ. ಈ ಎಲ್ಲ ಕಾರಣಗಳಿಂದ ಬಾಲಿವುಡ್ ಸಿನಿಮಾ ಪ್ರಿಯರು, ಪೂನಂ ಪಾಂಡೆ, ಚುಲ್‌ಬುಲ್ ಪಾಂಡೆ ಆಗೋಕಾಗುತ್ತ ಎನ್ನುತ್ತಾ ಚಿತ್ರವನ್ನು ಕಡೆಗಣಿಸಿದ್ದಾರೆ. ಹಾಗಾಗಿ, ನಿರ್ದೇಶಕರಾಗಿ ಅಮಿತ್ ಸಕ್ಸೇನಾ ಈ ಬಾರಿ ಸಕ್ಸಸ್ ಕಂಡಿಲ್ಲ ಎನ್ನಬಹುದು. <
-ಹರಿ