ಬಾಲಿವುಡ್

ಕೊನೆಗೂ ಅಮಲಾ-ಧನುಷ್ ಜೋಡಿ

ಮಾದಕ ಚೆಲುವಿನ ಒಡತಿ ಅಮಲಾ ಪೌಲ್ ಕೊನೆಗೂ ಬೇಸರದಿಂದ ಹೊರಬಂದಿದ್ದಾಳೆ. ಅಷ್ಟಕ್ಕೂ ಅವಳಿಗೆ ಆಗಿದ್ದ ಬೇಸರ...

ಮಾದಕ ಚೆಲುವಿನ ಒಡತಿ ಅಮಲಾ ಪೌಲ್ ಕೊನೆಗೂ ಬೇಸರದಿಂದ ಹೊರಬಂದಿದ್ದಾಳೆ. ಅಷ್ಟಕ್ಕೂ ಅವಳಿಗೆ ಆಗಿದ್ದ ಬೇಸರ ಏನೆಂದರೆ ಧನುಷ್ ಜತೆ '3' ಚಿತ್ರದಲ್ಲಿ ನಟಿಸುವ ಅವಕಾಶ ತಪ್ಪಿಹೋಯಿತು ಎನ್ನುವುದು. ಡೇಟ್ಸ್ ಸಮಸ್ಯೆಯಿಂದ '3' ಆಫರ್ ಒಪ್ಪಿಕೊಳ್ಳಲು ಅಮಲಾಗೆ ಸಾಧ್ಯವಾಗಿರಲಿಲ್ಲ. ಧನುಷ್ ಮುಂದಿನ ಸಿನಿಮಾ 'ಎಥಿರ್ ನೀಚಲ್‌'ನಲ್ಲಿ ಅಮಲಾ ನಾಯಕಿ. ಛಾಯಾಗ್ರಾಹಕ ವೇಲ್‌ರಾಜ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಕುರಿತು ಟ್ವೀಟಿಸಿರುವ ಅಮಲಾ, 'ಧನುಷ್ ಜತೆ ನಟಿಸುತ್ತಿರುವುದಕ್ಕೆ ಎಷ್ಟು ಸಂತೋಷವಾಗಿದೆ ಎಂದರೆ ಅದನ್ನು ತಾಳಿಕೊಳ್ಳಲು ನನ್ನಿಂದ ಆಗುತ್ತಿಲ್ಲ' ಎಂದಿದ್ದಾಳೆ. ಆಗಸ್ಟ್‌ನಲ್ಲಿ ಚಿತ್ರೀಕರಣ ಶುರುವಾಗಲಿದೆ. ತನ್ನದು ಚೆನ್ನೈನ ಸಂಪ್ರದಾಯಸ್ಥ ಹುಡುಗಿ ಪಾತ್ರ. ಇದೊಂದು ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್ ಸಿನಿಮಾ ಎಂದು ವಿವರವನ್ನೂ ಒದಗಿಸಿದ್ದಾಳೆ ಸುಂದರಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್