ಭಾರತೀಯ ಮೂಲದ, ಕೆನಡಾ ಸಂಜಾತೆ, ವಯಸ್ಕರ ಚಿತ್ರಗಳ ರಾಣಿ, ಸನ್ನಿ ಲಿಯೋನ್ ಎನ್ನುವ ರತಿ ಸುಂದರಿ 'ಟೀನಾ ಆ್ಯಂಡ್ ಲೋಲೊ' ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿಯನ್ನು ಇದೇ ಅಂಕಣದಲ್ಲಿ ಓದಿದ್ದೀರಿ. ಈಗಿನ ವರ್ತಮಾನ ಏನೆಂದರೆ ಇದೊಂದು ಆ್ಯಕ್ಷನ್ ಚಿತ್ರ. ಇದಕ್ಕಾಗಿ ಸನ್ನಿ ಸಿಕ್ಕಾಪಟ್ಟೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಳೆ ಎನ್ನುವುದು. ಶೂಟಿಂಗ್ ಶುರುವಾಗುವುದನ್ನೇ ಕಾಯುತ್ತಿರುವ ಸನ್ನಿಯಂತೂ ಥ್ರಿಲ್ ಆಗಿದ್ದಾಳಂತೆ. ಮಾಮೂಲಿಗಿಂತ ಭಿನ್ನವಾದ ಸಾಹಸಗಳು ಈ ಸಿನಿಮಾದಲ್ಲಿ ಇವೆಯಂತೆ. 'ಬಿಗ್ಬಾಸ್ 5' ಮೂಲಕ ಭಾರತಕ್ಕೆ ಬಂದು, 'ಜಿಸ್ಮ್ 2'ನಿಂದ ಬಾಲಿವುಡ್ಗೆ ಕಾಲಿಟ್ಟು, 'ರಾಗಿಣಿ ಎಂಎಂಎಸ್ 2' ಮತ್ತು 'ಜಾಕ್ಪಾಟ್'ಗಾಗಿ ಕಾಯುತ್ತಿರುವ ಸನ್ನಿ, ನಿಧಾನಕ್ಕೆ ಬಾಲಿವುಡ್ನಲ್ಲಿ ತಳವೂರುತ್ತಿದ್ದಾಳೆ ಅನ್ನಿ.