ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಇಬ್ಬರೂ ವೃತ್ತಿ ಬದುಕಿನಲ್ಲಿ ಯಾರೊಂದಿಗೂ ಜಿದ್ದಿಗೆ ಬಿದ್ದವರಲ್ಲ. ಸೌಂದರ್ಯ, ನಟನೆ ಜತೆಗೆ ತಮ್ಮ ವ್ಯಕ್ತಿತ್ವದಿಂದಲೂ ಗೌರವ ಗಳಿಸಿಕೊಂಡವರು. ಪ್ರಿಯಾಂಕಾಳನ್ನು ಹೊಗಳುವ ಮೂಲಕ ದೀಪಿಕಾ ಮತ್ತೊಮ್ಮೆ ಹೃದಯ ವೈಶಾಲ್ಯತೆ ತೋರಿಸಿದ್ದಾಳೆ. ಒಲಿಂಪಿಕ್ ಪದಕ ವಿಜೇತೆ, ಭಾರತದ ಹೆಮ್ಮೆಯ ಬಾಕ್ಸರ್ ಮೇರಿ ಕೋಮ್ ಎಂದರೆ ದೀಪಿಕಾಗೆ ಅಚ್ಚುಮೆಚ್ಚು. ಆಕೆಯ ಕುರಿತಾದ ಸಂಜಯ್ ಲೀಲಾ ಬನ್ಸಾಲಿಯ ಸಿನಿಮಾದಲ್ಲಿ ಪ್ರಿಯಾಂಕಾ ಮೇರಿ ಕೋಮ್ ಪಾತ್ರ ನಿರ್ವಹಿಸಲಿದ್ದಾಳೆ. 'ಮೇರಿ ಬಗ್ಗೆ ಸಿನಿಮಾ ಬರುತ್ತಿರುವುದಕ್ಕೆ ನಿಜಕ್ಕೂ ಖುಷಿಯಾಗುತ್ತಿದೆ. ನನಗೇ ಆ ಪಾತ್ರ ಮಾಡಬೇಕೆಂಬ ಆಸೆ ಇದೆ. ಆದರೆ ಪ್ರಿಯಾಂಕಾ ಅದನ್ನು ಮಾಡುತ್ತಿದ್ದಾಳೆ. ಇನ್ಫ್ಯಾಕ್ಟ್, ನನಗಿಂತ ಈ ಪಾತ್ರಕ್ಕೆ ಆಕೆಯೇ ಹೆಚ್ಚು ಸೂಕ್ತ' ಎಂದಿದ್ದಾಳೆ 'ಚೆನ್ನೈ ಎಕ್ಸ್ಪ್ರೆಸ್' ಯಶಸ್ಸಿನಲ್ಲಿ ತೇಲುತ್ತಿರುವ ದೀಪಿಕಾ.