ಅಮೀರ್ ಖಾನ್ ಉತ್ತರದ ಕಮುಲ್ ಹಾಸನ್ ಇದ್ದಂತೆ. ತನ್ನ ನಿರ್ದೇಶನದ ಹಾಗೂ ತಾನು ನಟಿಸಿದ ಚಿತ್ರಗಳಲ್ಲಿ ಏನಾದರೂ ಹೊಸತನ ಇರಲೇಬೇಕೆಂದು ಬಯಸುವ ಕ್ರಿಯಾಶೀಲ ವ್ಯಕ್ತಿ. 'ತಾರೆ ಜಮೀನ್ ಪರ್'ನಂತಹ ವಿಶೇಷ ಚಿತ್ರ ಕೊಟ್ಟಿದ್ದಲ್ಲದೆ 'ಗಜನಿ'ಯಲ್ಲಿ ಸಿಕ್ಸ್ ಪ್ಯಾಕ್ ದೇಹದಾರ್ಢ್ಯತೆಯನ್ನು ಪ್ರದರ್ಶಿಸಿ ವಾಹ್ ಎನಿಸಿಕೊಂಡಿದ್ದರು. ಇದಂ ಶರೀರಂ ಪರೋಪಕಾರಾರ್ಥಂ ಎಂಬಂತೆ ಈಗ ಮತ್ತೆ ದೇಹ ದಂಡಿಸಿ 'ಧೂಮ್ 3'ಯಲ್ಲಿ ನಟಿಸುತ್ತಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಈ ದೇಹ ದಂಡನಾ ಕಾರ್ಯಕ್ಕೆ ಬ್ರಿಟಿಷ್ ಮೂಲದವರಿಂದ ತರಬೇತಿ ಪಡೆದಿದ್ದಾರಂತೆ. ಬೆನ್ನು ಪ್ರದರ್ಶಿಸಿ ಅವರ ಅಭಿಮಾನಿಗಳಿಂದ ಬೆನ್ನು ಚಪ್ಪರಿಸಿಕೊಳ್ಳಲು ಬರುತ್ತಿದ್ದಾರೆ. ಧೂಮ್‌ನ ಮೊದಲ ಎರಡು ಭಾಗಗಳಲ್ಲಿ ನಟಿಸಿದ ಜಾನ್ ಅಬ್ರಹಾಂ ಮತ್ತು ಹೃತಿಕ್ ರೋಷನ್‌ರನ್ನು ಅಮೀರ್ ಹಿಂದಿಕ್ಕುತ್ತಾರಾ ಕಾದು ನೋಡಬೇಕಾಗಿದೆ.