ತಾಯ್ತನದ ಸವಿ ಉಂಡ ಐಶ್ವರ್ಯ ರೈ ಮತ್ತೆ ಬೆಳ್ಳಿ ಪರದೆ ಬೆಳಗಲು ಸಜ್ಜಾಗಿದ್ದಾಳೆ. ಆಕೆಯ ರೀ ಎಂಟ್ರಿ ಬಗ್ಗೆ ಇದ್ದ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಈ ಸಲ ಐಶ್ ವಿಶೇಷ ನೃತ್ಯದ ಮೂಲಕ ಅಭಿಮಾನಿಗಳ ಮನ ತಣಿಸಲಿದ್ದಾಳೆ. ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ 'ರಾಮ್ ಲೀಲಾ'ದಲ್ಲಿ ಐಶ್ವರ್ಯ ರೈ ಬಚ್ಚನ್ ವಿಶೇಷ ಗೀತೆಯೊಂದಕ್ಕೆ ಹೆಜ್ಜೆ ಹಾಕಲಿದ್ದಾಳೆ. ಆಕೆಯ ಕಾಲ್ಶೀಟ್ಗಾಗಿ ಅನೇಕ ನಿರ್ಮಾಪಕರು, ನಿರ್ದೇಶಕರು ಕಾದು ಕುಳಿತಿದ್ದರು. ಆದರೆ ಕರಾವಳಿ ಕನ್ಯೆಯ ಚಿತ್ತ ಹರಿದದ್ದು ತನ್ನ ಫೇವರಿಟ್ ಡೈರೆಕ್ಟರ್ ಭನ್ಸಾಲಿಯತ್ತ. 'ಹಾಡಿನ ಮಹತ್ವವನ್ನು ವಿವರಿಸಿದ ತಕ್ಷಣ ಐಶ್ವರ್ಯ ಒಪ್ಪಿಗೆ ಸಿಕ್ಕಿತು' ಎನ್ನುವುದು ಭನ್ಸಾಲಿ ಮಾತು. 'ರಾಮ್ ಲೀಲಾ'ದಲ್ಲಿ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಒಟ್ಟಿಗೆ ನಟಿಸುತ್ತಿದ್ದಾರೆ.