ಬಾಲಿವುಡ್ನಲ್ಲಿ ಮುಂದಿನ ವಾರ 'ಚೋಪ್ರಾಸ್ ವೀಕೆಂಡ್'! ಪ್ರಿಯಾಂಕಾ ಚೋಪ್ರಾ ಮತ್ತು ಆಕೆಯ ಕಸಿನ್ ಪರಿಣೀತಿ ಚೋಪ್ರಾ ಇಬ್ಬರ ಸಿನಿಮಾಗಳೂ ಸೆ.6ರಂದೇ ಬಿಡುಗಡೆಯಾಗಲಿವೆ. ಪ್ರಿಯಾಂಕಾಳ 'ಝಂಜೀರ್', ಪರಿಣೀತಿಯ 'ಶುದ್ಧ್ ದೇಸಿ ರೋಮ್ಯಾನ್ಸ್' ಬಿಡುಗಡೆಗೆ ಒಂದೇ ದಿನ ನಿಗದಿಯಾಗಿದೆ. ಈ ಬಗ್ಗೆ ಇಬ್ಬರಿಗೂ ಬೇಸರವೇನೂ ಇಲ್ಲ. 'ಚೋಪ್ರಾಸ್ ವೀಕೆಂಡ್' ಹೆಸರು ಕೊಟ್ಟಿರುವ ಪ್ರಿಯಾಂಕಾ, 'ಚಿತ್ರಮಂದಿರಗಳಿಗೆ ಹೋಗಿ. ಸಿನಿಮಾ ನೋಡಿ. ಎಂಜಾಯ್ ಮಾಡಿ. ಆದರೆ ಇಬ್ಬರನ್ನೂ ಹೋಲಿಸಬೇಡಿ' ಎಂದು ಸಿನಿಪ್ರೇಮಿಗಳಿಗೆ ಮನವಿ ಮಾಡಿದ್ದಾಳೆ. ಆದರೂ ಪೈಪೋಟಿಯಲ್ಲಿ ಗೆಲುವು ಯಾರಿಗೆ ಎನ್ನುವ ಕುತೂಹಲ ಬಿ ಟೌನ್ ಮಂದಿಗೆ.