ಇತ್ತೀಚೆಗೆ ಬಾಲಿವುಡ್ನಲ್ಲಿ ಬ್ಯುಸಿಯಾಗುತ್ತಿರುವ ದಕ್ಷಿಣ ಭಾರತದ ತಾರೆಇಲಿಯಾನಾ ಡಿಸೋಜ ಇಲ್ಲಿನ ತಮ್ಮ ಆಸ್ತಿಪಾಸ್ತಿಯನ್ನು ಮಾರಾಟಕ್ಕಿಟ್ಟಿದ್ದಾಳಂತೆ. ಸದ್ಯಕ್ಕೆ ಬಾಲಿವುಡ್ನಲ್ಲಿ ಸಾಕಷ್ಟು ಅವಕಾಶಗಳನ್ನ ಬಾಚಿಕೊಳ್ಳುತ್ತಿರುವ ಇಲಿಯಾನಾ, ಹೈದರಾಬಾದ್ನ ಲ್ಯಾಂಕೋವರ್ಸ್ ಟವರ್ಸ್ನ ಸುಮಾರು 1.3 ಕೋಟಿ ರೂ. ಬೆಲೆ ಬಾಳುವ ಫ್ಲಾಟ್ಅನ್ನು ಮಾರಾಟಕ್ಕೆ ಇಟ್ಟಿದ್ದಾಳೆ ಎನ್ನುತ್ತವೆ ಮೂಲಗಳು. ಇನ್ನು ಮುಂದೆ ಮುಂಬೈನಲ್ಲೇ ಸೆಟ್ಲ್ ಆಗಲು ನಿರ್ಧರಿಸಿರುವುದರಿಂದ ಈ ತೀರ್ಮಾನ. ತೆಲುಗು, ತಮಿಳು ಚಿತ್ರಗಳಲ್ಲೇ ಒಂದು ಕೋಟಿ ರೂ. ಸಂಭಾವನೆ ಎಣಿಸುತ್ತಿದ್ದಳು. ಈಗ ಆಕೆಯ ದೃಷ್ಟಿ ಬಾಲಿವುಡ್ ಕಡೆಗೆ ನೆಟ್ಟಿದ್ದು, ಇನ್ನು ದಕ್ಷಿಣ ಚಿತ್ರಗಳಿಗೆ ಬಹುತೇಕ ಗುಡ್ಬೈ ಹೇಳಿ, ತನ್ನ ವಿಳಾಸವನ್ನೂ ಮುಂಬೈಗೆ ಬದಲಾಯಿಸಿಕೊಂಡಿದ್ದಾಳೆ. ಮುಂಬೈನಲ್ಲಿ ಈಗಾಗಲೇ 3.5 ಕೋಟಿ ರೂ.ನ ಫ್ಲಾಟ್ ಖರೀದಿಸಿದ್ದಾಳೆ ಎನ್ನುವ ಸುದ್ದಿ ಇದೆ.