ಇತ್ತೀಚೆಗೆ ವಿರಾಟ್ ಕೋಹ್ಲಿ ಮತ್ತು ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಜಾಹೀರಾತಿಗಾಗೆ ಒಟ್ಟಿಗೆ ನಟಿಸಿದ್ದರು. ಅಲ್ಲಿಂದಾಚೆಗೆ ಇಬ್ಬರೂ ಒಟ್ಟಿಗೆ ಓಡಾಡುವುದು, ಸಮಯಕಳೆಯುವುದು ಮಾಮೂಲಿಯಾಗಿ ಹೋಗಿತ್ತು. ಸೌತ್ ಆಫ್ರಿಕಾಗೆ ತೆರಳುವ ಮುನ್ನ ಕೋಯ್ಲಿ ಅನುಷ್ಕಾ ಶರ್ಮಾಳನ್ನು ಭೇಟಿ ಮಾಡಿದ್ದು, ಅನುಷ್ಯಾ ಶರ್ಮಾ ಕೋಹ್ಲಿಗೆ ಮುತ್ತು ಕೊಟ್ಟು ಬೀಳ್ಕೊಟ್ಟಿದ್ದು ಜಗಜ್ಜಾಹೀರಾಗಿತ್ತು. ಈಗ ಬಾಲಿವುಡ್ನಲ್ಲಿ ಹರಿದಾಡುತ್ತಿರುವ ಸುದ್ದಿ ಎಂದರೆ ಈ ಯುವ 'ಪ್ರೇಮಿಗಳು' ಹೋಸ ವರ್ಷದ ಒಟ್ಟಿಗೆ ಆಚರಿಸಲ್ಲಿದ್ದಾರೆ ಎಂಬುದು. ಪ್ರತಿಭಾವಂತ ಆಟಗಾರ ಕೋಹ್ಲಿ ಈಗ ಸೌತ್ ಆಫ್ರಿಕಾ ಟೂರ್ನಲ್ಲಿದ್ದು ಹೊಸ ವರ್ಷ ಆಚರಣೆಗಾಗಿ ಡಿಸೆಂಬರ್ 30ರಂದು ಮುಂಬೈಗೆ ಬಂದು ಅನುಷ್ಕಾಳೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳಲಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ನಿಮಗೆ ಬಿಟ್ಟದ್ದು. ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಅಲ್ವಾ?