ಬಾಲಿವುಡ್ನಲ್ಲಿ ಮಾತ್ರವಲ್ಲ ಇಡೀ ಮಾಧ್ಯಮ ಲೋಕದಲ್ಲಿ ಸುದ್ದಿಯಲ್ಲಿರುವ ಸಂಗತಿ ಎಂದರೆ ಇತ್ತೀಚೆಗೆ ಸಲ್ಮಾನ್ ಆಡಿದ ಮಾತುಗಳು. ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಸಲ್ಮಾನ್ ತಾನಿನ್ನೂ ವರ್ಜಿನ್, ಯಾವುದೇ ಹುಡುಗಿಯ ಜೊತೆಯಲ್ಲೂ ಸೆಕ್ಸ್ನಲ್ಲಿ ಪಾಲ್ಗೊಂಡಿಲ್ಲ ಎಂಬ ಹೇಳಿಕೆ. ಇಡೀ ಚಿತ್ರೋದ್ಯಮ ಅವರತ್ತ ತಿರುಗಿ ನೋಡುವಂತೆ ಮಾಡಿದೆಯಲ್ಲದೆ ಚರ್ಚೆಗೂ ಗ್ರಾಸವಾಗಿದೆ. ಈ ವಿಷಯವಾಗಿ ರಾಖಿ ಸಾವಂತ್ ಕಮೆಂಟ್ ಮಾಡಿದ್ದಾಳೆ. ಬಾಲಿವುಡ್ನಲ್ಲಿ ಸದಾ ಸುದ್ದಿಯಲ್ಲಿರುವ ಈ ಐಟಂ ಗರ್ಲ್ ಇದೀಗ ಸಲ್ಮಾನ್ಗೆ ಎದುರೇಟು ನೀಡಿದ್ದಾಳೆ. ಸಲ್ಮಾನ್ನಂತೆ ತಾನೂ ಈಗಲೂ ವರ್ಜಿನ್. ಈವರೆಗೆ ತಾನೂ ಯಾರೊಂದಿಗೂ ಸೆಕ್ಸ್ನಲ್ಲಿ ಪಾಲ್ಗೊಂಡಿಲ್ಲ ಎಂದಿರುವುದಷ್ಟೇ ಅಲ್ಲದೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಐ ಲವ್ ಯೂ ಸಲ್ಲು ಎಂದು ಹೇಳಿದ್ದಾಳೆ. ಇದನ್ನು ಒಪ್ಪಿಕೊಳ್ಳುವುದು ಬಿಡುವುದು ಸಲ್ಮಾನ್ಗೆ ಬಿಟ್ಟದ್ದು.