ಟಾಲಿವುಡ್ನ ಸೂಪರ್ ಸ್ಟಾರ್, ನಾಗಾರ್ಜುನ ಈಗ ಕರ್ನಾಟಕದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅಂದರೆ ತಮ್ಮ ನೂತನ ಚಿತ್ರದ ಶೂಟಿಂಗ್ನಲ್ಲಿ ನಿರತರಾಗಿದ್ದಾರೆ. ಅದೂ ಮೈಸೂರಿನಲ್ಲಿ ಕಳೆದ 10 ದಿನಗಳಿಂದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ವಿಷಯ ಏನೆಂದರೆ ಅವರಿಗೂ ಮೈಸೂರು ನೆಚ್ಚಿನ ತಾಣ ಎಂಬುದು. ಅವರು ಈಗಾಗಲೇ ಸುಮಾರು ಬಾರಿ ಮೈಸೂರಿಗೆ ಬಂದು ಹೋಗಿದ್ದರೂ ಮತ್ತೆ ಮತ್ತೆ ಬರಬೇಕೆಂಬ ಆಸೆಯಿದೆಯಂತೆ. ಮೈಸೂರು ಮೆಚ್ಚಿನ ತಾಣವಾಗಿದೆ ಎಂದು ನೂತನ ಚಿತ್ರ 'ಮನಂ'ನ ಚಿತ್ರೀಕರಣದ ಸಮಯದಲ್ಲಿ ಅವರೇ ತಿಳಿಸಿದ್ದಾರೆ. ಅವರನ್ನು ತುಂಬಾ ಇಂಪ್ರೆಸ್ ಮಾಡಿರುವ ಸ್ಥಳಗಳು ಚಾಮುಂಡಿ ಬೆಟ್ಟ, ಕೆಆರ್ಎಸ್. ಇಲ್ಲಿನ ಹಸಿರು ವಾತಾವರಣಕ್ಕೆ ಅವರು ಮನಸೋತಿದ್ದಾರೆ. ಕೆಆರ್ಎಸ್ ಹಿನ್ನೀರಿನ ತಾಣದಲ್ಲಿ ಅವರ ನೂತನ ಚಿತ್ರದ ಶೂಟಿಂಗ್ ನಡೆದಿದೆ. ಮೈಸೂರೇ ಹಾಗಲ್ವಾ? ಎಂತಹವರನ್ನೂ ತನ್ನತ್ತ ಸೆಳೆಯುವ ಶಕ್ತಿ ಇದೆ.