ಟಾಲಿವುಡ್ನಲ್ಲಿ ಬಿಡುವಿಲ್ಲದೆ ನಟಿಸುತ್ತಿರುವ ನಟಿ ತಾಪ್ಸಿಗೆ ಈಗ ಖಿನ್ನತೆಯೊಂದು ಶುರುವಾಗಿದೆ. ನನ್ನನ್ನು ಯಾರು ಮೆಚ್ಚುಕೊಂಡಿಲ್ಲ, ಯಾರೂ ನನ್ನ ಲವ್ ಮಾಡು ಎಂದು ಕೇಳುತ್ತಿಲ್ಲ ಎಂಬ ಚಿಂತೆ ಕಾಡುತಿದೆಯಂತೆ. ಮೊದಮೊದಲು ನಾನು ನೋಡಲು ಅಷ್ಟು ಚೆನ್ನಾಗಿರಲಿಲ್ಲ. ಹಾಗಾಗಿ ಯಾರೂ ನನ್ನನ್ನು ಪ್ರಪೋಸ್ ಮಾಡಿರಲ್ಲಿಲ್ಲ. ಆದರೀಗ ನಾನು ಅಂದವಾಗಿದ್ದರೂ ಸಹ ಯಾರು ನನಗೆ ಐ ಲವ್ ಯೂ ಎಂದು ಹೇಳೋಕೆ ಮುಂದೆ ಬರುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ನಾನು ನಟಿಯಾಗಿರುವುದು. ಬೇರೆ ದಿನಗಳಲ್ಲಿ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದಂತೆ ಈ ಚಿಂತೆ ಕಾಡಲಾರಂಭಿಸುತ್ತದೆ. ಏಕೆಂದರೆ ಅಂದು ಪ್ರೇಮಿಗಳು ಒಬ್ಬರನ್ನೊಬ್ಬರು ಅಪ್ಪುತ್ತ, ಕಾಣಿಕೆಗಳನ್ನು ನೀಡುತ್ತಾ ಪ್ರಪಂಚದ ಇರೋ ಬರೋ ಮಾತುಗಳನ್ನೆಲ್ಲಾ ಹರಟುತ್ತಾರೆ ಎಂಬುದನ್ನು ತಿಳಿದಾಗ ಅಂತಹ ಲೈಫ್ ನನಗೂ ಬೇಕು ಅನಿಸುತ್ತದೆ ಎಂದಿದ್ದಾಳೆ ತಾಪ್ಸಿ. ಯಾರಾದರೂ ಅಪ್ಲಿಕೇಶನ್ ಹಾಕುವುದಿದ್ದರೆ ಪ್ರಯತ್ನ ಮಾಡಬಹುದು!