ಬರ್ತಾ ಬರ್ತಾ ಬಾಲಿವುಡ್ ನಟಿಯರೆಲ್ಲ 'ಡರ್ಟಿ' ಪದಗಳಿಗೆ ಜೋತು ಬಿದ್ದಿದ್ದಾರೆ. 'ಡರ್ಟಿ ಪಿಕ್ಚರ್' ಮುಗಿದ ಮೇಲೆ ಈಗ 'ಡರ್ಟಿ ಪಾಲಿಟಿಕ್ಸ್' ಶುರುವಾಗಿದೆ.
'ಡರ್ಟಿ ಪಾಲಿಟಿಕ್ಸ್'ನ ಪ್ರಧಾನ ನಾಯಕಿ ಮಲ್ಲಿಕಾ ಶೆರಾವತ್. ಚಿತ್ರೀಕರಣ ಶುರುವಾದ ನಾಲ್ಕೇ ದಿನಗಳಲ್ಲಿ ಆಕೆಗೆ 'ಡರ್ಟಿ' ಕರೆಗಳೂ ಬರಲು ಶುರುವಾಗಿವೆಯಂತೆ. ಚಿತ್ರದಲ್ಲಿ ಭನ್ವರಿ ದೇವಿಯ ಕೊಲೆ ಪ್ರಕರಣವೂ ಪ್ರಸ್ತಾಪಗೊಳ್ಳುವುದರಿಂದ, ರಾಜಸ್ಥಾನದ ರಾಜಕಾರಣಿಯೊಬ್ಬರು ಕರೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರಂತೆ. ಡೈರೆಕ್ಟಾಗಿ ಮಲ್ಲಿಕಾಳಿಗೆ ಅಲ್ಲವಾದರೂ, ಅವಳ ಅಣ್ಣನಿಗೆ ಕರೆ ಬಂದಿದೆ. 'ನಿನ್ನ ತಂಗಿಗೆ ಸುಮ್ಮನಿರಲು ಹೇಳು. ಆ ಚಿತ್ರದಿಂದ ಹಿಂದೆ ಸರಿಯಲು ಹೇಳು' ಅಂತ ಹೆದರಿಸಿದ್ದಾರೆ. ಆದರೆ, ಇದಕ್ಕೆ ಮಲ್ಲಿಕಾ ಹೇಳಿದ್ದು 'ಐ ಡೋಂಟ್ ಕೇರ್'!