ಭಾರತದಲ್ಲಿ ರಾಜಾರೋಷವಾಗಿ ಮೆರೆದಾಡಲು ಪಾಕಿಸ್ತಾನವೇ ತೂರಿಬಿಟ್ಟ 'ಸೆಕ್ಸಿ ಬಾಂಬ್' ವೀಣಾ ಮಲಿಕ್! ಮೇಲಿಂದ ಮೇಲೆ ವಿವಾದ ಸೃಷ್ಟಿಸಿ, ಬೆರಗಿನ ಹೊಗೆ ಹರಡಿಸುವ ಬೆಡಗಿ.
ಮೊನ್ನೆ ಮೊನ್ನೆಯಷ್ಟೇ ಭಗವದ್ಗೀತೆಯನ್ನು ಓದಲು ಶುರುಮಾಡಿದ್ದೀನಿ ಅಂತ ಹೇಳಿ ಅಚ್ಚರಿ ಹುಟ್ಟಿಸಿದ ವೀಣಾ, ಈ ಸಂಬಂಧ ಪಾಕ್‌ನಲ್ಲಿ ವಿರೋಧಕ್ಕೂ ಗುರಿಯಾಗಿದ್ದಳು. ಅವರ ಟೀಕೆಗಳನ್ನೆಲ್ಲ ಧಿಕ್ಕರಿಸಿ, 'ಭಗವದ್ಗೀತೆಯನ್ನು ನಾನು ಪ್ರೀತಿಸುತ್ತೇನೆ' ಎಂದ ಮಲಿಕ್ ನಮ್ಮೆಲ್ಲರ ಕಣ್ಣಿಗೆ 'ಸಂಪ್ರದಾಯಸ್ಥ ಬಾಲೆ' ಅಂತಲೇ ಬಣ್ಣ ಹಚ್ಚಿದಳು. ಆದರೆ, ಈಗ ಆಕೆ ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ತೆಲುಗಿನ 'ನಗ್ನಸತ್ಯಂ'ನ ಚಿತ್ರೀಕರಣದ ವೇಳೆಯಲ್ಲೇ ಈ ಜಾಹೀರಾತಿನ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾಳಂತೆ. 'ಸಂಪ್ರದಾಯಸ್ಥೆ'ಯ ಲಕ್ಷಣ ಅಂದ್ರೆ ಇದಪ್ಪಾ...!