ತಾಪಸಿ ಪನ್ನು 'ಸ್ಟಂಟ್' ಮಾಡುತ್ತಿದ್ದಾಳೆ. ತಪ್ಪಾಗಿ ತಿಳಿದುಕೊಳ್ಳುವ ಅಗತ್ಯವಿಲ್ಲ. ತಮಿಳು, ತೆಲುಗುಗಳಲ್ಲಿ ಏಕಕಾಲದಲ್ಲಿ ನಿರ್ಮಾಣವಾಗುತ್ತಿರುವ 'ಮುನಿ 3 ಗಂಗಾ' ಹಾರರ್ ಸಿನಿಮಾದಲ್ಲಿ ಅವಳು ಹೊಡೆದಾಟದ ದೃಶ್ಯಗಳಲ್ಲಿ ನಟಿಸುತ್ತಿದ್ದಾಳೆ. 'ಇವು ಕೇವಲ ಪಂಚ್ ಅಥವಾ ತಮಾಷೆಯ ಸಾಹಸ ಸನ್ನಿವೇಶಗಳಲ್ಲ' ಎಂದಿರುವ ತಾಪಸಿ, ಈಚೆಗಷ್ಟೇ 12 ಗಂಟೆ ಕಾಲ ಸಮುದ್ರದ ಆಳದಲ್ಲಿ ಸಾಹಸ ದೃಶ್ಯದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಳಂತೆ. ಇನ್ನು ಸಮುದ್ರ ದಂಡೆ ಮೇಲೆ ಬೆಂಕಿಯಲ್ಲಿ ಸಾಹಸ ಮಾಡುವ ದೃಶ್ಯವನ್ನು ಸೆರೆ ಹಿಡಿಯುವುದು ಬಾಕಿ ಇದೆಯ ಡ್ಯೂಪ್ಗಳನ್ನು ಬಳಸದೆ ಖುದ್ದು ತಾಪಸಿ ಈ ದೃಶ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾಳೆ.