ಪ್ರತಿ ಸಿನಿಮಾದಲ್ಲೂ ಹೊಸತನವನ್ನು ಇಷ್ಟಪಡುವ ನಟಿ ಪ್ರಿಯಾಂಕಾ ಚೋಪ್ರಾ. ತನ್ನ ಸೆಕ್ಸಿ ಡಾನ್ಸ್ಗಳಿಂದ ಜನಪ್ರಿಯತೆ ಗಳಿಸಿಕೊಂಡಿರುವ ಈಕೆ, ಮುಂದಿನ ಸಿನಿಮಾ 'ಗನ್ಡೆ'ಯಲ್ಲಿ ಕ್ಯಾಬರೆ ಡಾನ್ಸ್ ಮಾಡಿದ್ದಾಳೆ. ಕೋಲ್ಕತ್ತಾದಲ್ಲಿ ಅದರ ಚಿತ್ರೀಕರಣವೂ ನಡೆದಿದೆ. ಪಿಂಕಿ ಮ್ಯಾಡಂ ಸಖತ್ತಾಗಿ ಸೊಂಟ ಕುಲುಕಿದ್ದಾರೆ ಎನ್ನುವ ಅಭಿಪ್ರಾಯ ಚಿತ್ರತಂಡದಿಂದ ಬಂದಿದೆ. ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಹೇಳಿದ ತಕ್ಷಣ ಖುಷಿಯಿಂದ ಒಪ್ಪಿಕೊಂಡಳಂತೆ. 'ಇದು ಚಿತ್ರಕಥೆಯ ಭಾಗ. ಹೊಸ ಹಾಡನ್ನೇ ಬಳಸಿದ್ದೇವೆಯೇ ವಿನಾ ರೀಮಿಕ್ಸ್ ಮಾಡಿಲ್ಲ' ಎನ್ನುವುದು ಜಾಫರ್ ಸಮಜಾಯಿಷಿ.