ಸಾಧ್ಯವಾದಷ್ಟೂ ಕಡಿಮೆ ಬಟ್ಟೆಯಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುವ ಪಾಕಿಸ್ತಾನಿ ನಟಿ ವೀಣಾ ಮಲ್ಲಿಕ್ಗೆ ಬಿಕಿನಿ ಬೇಸರ ತರಿಸಿದೆ. ಇನ್ನೆಂದೂ ಬಿಕಿನಿ ತೊಟ್ಟು ಬಾಲಿವುಡ್ ಚಿತ್ರಗಳಲ್ಲಿ ನಟಿಸಲಾರೆ ಎಂದು ಆಕೆ ಪ್ರತಿಜ್ಞೆ ಮಾಡಿದ್ದೂ ಆಗಿದೆ. ಆಕೆ ಸದ್ಯ ನಟಿಸುತ್ತಿರುವ ಸಿನಿಮಾ 'ಸೂಪರ್ ಮಾಡೆಲ್'ನಲ್ಲಿ ಲೆಕ್ಕವಿಲ್ಲದಷ್ಟು ಸಂಖ್ಯೆಯ ಬಿಕಿನಿಗಳನ್ನು ತೊಟ್ಟಿದ್ದಾಳಂತೆ. ಹೀಗಾಗಿ ಬಿಕಿನಿ ಬಗ್ಗೆ ತಾತ್ಸಾರ ಭಾವ ಮೂಡಿದೆ. ಟೂ ಪೀಸ್ನಲ್ಲಿ ಇನ್ನೂ ಹೊಸದಾಗಿ ಮಾಡುವುದೇನೂ ಇಲ್ಲ ಎನ್ನುವ ತೀರ್ಮಾನಕ್ಕೆ ಆಕೆ ಬಂದಿದ್ದಾಳೆ. ಹೀಗಾಗಿಯೇ 'ನಾನು ಇನ್ನುಮುಂದೆ ಬಾಲಿವುಡ್ ಸಿನಿಮಾಗಳಲ್ಲಿ ಎಂದೂ ಬಿಕಿನಿ ತೊಡಲಾರೆ' ಎಂದು ಘೋಷಿಸಿದ್ದಾಳೆ.
ನವೀನ್ ಬಾತ್ರಾ ನಿರ್ದೇಶನದ ಸಿನಿಮಾವನ್ನು ಫಿಜಿಯಲ್ಲಿ ಚಿತ್ರಿಸಲಾಗಿದೆ. ಅಮೀಷಾ ಪಟೇಲ್ ಕೂಡ ಪ್ರಮುಖ ಪಾತ್ರ ಮಾಡಿದ್ದಾಳೆ.