ಬಾಲಿವುಡ್ ಸಿನಿಮಾಗಳಲ್ಲಿ ಇನ್ನೆಂದೂ ಬಿಕಿನಿ ತೊಡಲಾರೆ ಎಂದು ಪಾಕಿಸ್ತಾನಿ ಬೆಡಗಿ ವೀಣಾ ಮಲ್ಲಿಕ್ ಘೋಷಿಸಿದ್ದರೆ, ನಮ್ಮ ಕತ್ರಿನಾ ಕೈಫ್ ಯಾನೆ ಕ್ಯಾಟ್ ದಶಕದ ನಂತರ ಬಿಕಿನಿ ತೊಟ್ಟು ಹಾಟ್ ಹಾಟ್ ಆಗಿದ್ದಾಳೆ. 'ಧೂಮ್ 3' ಚಿತ್ರದಲ್ಲಿ ಕತ್ರಿನಾ ಬಿಕಿನಿ ತೊಟ್ಟಿದ್ದಾಳೆ. ಇದರ ಸಲುವಾಗಿಯೇ ಆಕೆ ತನ್ನ ದೇಹ ತೂಕವನ್ನು ಐದು ಕೆ.ಜಿ. ಇಳಿಸಿಕೊಂಡು ಸ್ಲಿಮ್ ಆಗಿದ್ದಾಳೆ. ಎರಡು ದೃಶ್ಯಗಳಲ್ಲಿ ಟೂಪೀಸ್ನಲ್ಲಿ ಕಾಣಿಸಿಕೊಂಡಿದ್ದಾಳೆ. ಚರ್ಮ ಪ್ರದರ್ಶನವನ್ನು ನಿರಾಕರಿಸುತ್ತಲೇ ಬಂದಿದ್ದ ಕತ್ರಿನಾ ಕೊನೆಗೂ ಆಮೀರ್ಖಾನ್ ಗಾಗಿ ಇಂಥ ಉಡುಗೆ ತೊಡಲು ಒಪ್ಪಿದ್ದು ಆಕೆಯ ಅಭಿಮಾನಿಗಳ ನಿದ್ದೆಗೆಡಿಸಿದೆ.