'ನಶೆ'ಯೋ, ಹುಂಬತನವೊ? ತನ್ನ ಚೊಚ್ಚಲ ಬಾಲಿವುಡ್ ಸಿನಿಮಾ 'ನಶಾ' ಬಾಕ್ಸಾಫೀಸ್‌ನಲ್ಲಿ ಹಿಟ್ ಆದರೆ ಅಭಿಮಾನಿಗಳ ಮನ 'ತಣಿಸುವೆ' ಎಂದು ಪೂನಂ ಪಾಂಡೆ 'ಆಫರ್' ನೀಡಿದ್ದಾಳೆ. ಆಕೆ ಇನ್ನೆಂಥ ಆಮಿಷ ಒಡ್ಡಬಹುದು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲವಲ್ಲ. ಸಿನಿಮಾ ಗೆದ್ದರೆ ಅಭಿಮಾನಿಗಳಿಗೆ ಹುಟ್ಟುಡುಗೆಯಲ್ಲಿ ತನ್ನ ದೇಹಸಿರಿ ತೋರಿಸುವುದಾಗಿ ಹೇಳಿಕೊಂಡಿದ್ದಾಳೆ. ಚಿತ್ರ ಬಿಡುಗಡೆ ಸನ್ನಿಹಿತವಾಗಿದ್ದ ಕಾಲದಲ್ಲಿಯೇ ಆಕೆ ಈ ಬಾಂಬ್ ಸ್ಫೋಟಿಸಿರುವುದು. 'ಕ್ರಿಕೆಟ್ ವಿಶ್ವಕಪ್ ಹೊತ್ತಲ್ಲಿ ಆಡಿದ್ದ ಮಾತಿನಂತಲ್ಲ ಇದು. ಖಂಡಿತವಾಗಿಯೂ ಈಡೇರಿಸುವೆ' ಎಂದಿದ್ದಾಳೆ. ಜುಲೈ 26ರಂದು ಸಿನಿಮಾ ತೆರೆ ಕಂಡಿದೆ. ಚಿತ್ರದಲ್ಲಿನ ಹಸಿಬಿಸಿ ದೃಶ್ಯಗಳನ್ನು ನೋಡಿದವರು 'ಪೂನಂ ಬೆತ್ತಲೆ ದೇಹವನ್ನು ಹೊಸದಾಗಿ ನೋಡುವುದಕ್ಕೆ ಏನೂ ಉಳಿದಿಲ್ಲ' ಎಂದು ಹೇಳುತ್ತಿದ್ದಾರಂತೆ.