ಅಮೀತ್ ಗೌರ್ ಎನ್ನುವ ಮಾಡೆಲ್ ಕಂ ನಟ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾನೆ. ಅದಕ್ಕೆ ಕಾರಣ ಸನ್ನಿ ಲಿಯೋನ್ ಜತೆ ರೊಮ್ಯಾನ್ಸ್ ಮಾಡುವ ಅವಕಾಶ ಸಿಕ್ಕಿರುವುದು. ನಿಜ ಜೀವನದಲ್ಲಲ್ಲ ಸ್ವಾಮಿ, ಸಿನಿಮಾದಲ್ಲಿ. 'ಟೀನಾ ಅಂಡ್ ಲೊಲೊ'ದಲ್ಲಿ 'ಫೋರ್ಸ್' ಖ್ಯಾತಿಯ ಅಮೀತ್ ಗೌರ್ ಸನ್ನಿಯ ಜತೆಗಾರ. ಸನ್ನಿ ಟೀನಾ ಪಾತ್ರ ನಿರ್ವಹಿಸಲಿದ್ದು, ಲೊಲೊ ಆಗಿ ಮಿನಿಷಾ ಲಂಬಾ ಕಾಣಿಸಿಕೊಳ್ಳಲಿದ್ದಾಳೆ. ಚಿತ್ರೀಕರಣ ಸಂಪೂರ್ಣವಾಗಿ ರಷ್ಯ, ಜಾರ್ಜಿಯಾಗಳಲ್ಲಿ ನಡೆಯಲಿದೆ. ಅಮೀತ್ ಖುಷಿಗೆ ಇನ್ನೊಂದು ಕಾರಣ ಎಂದರೆ ರಣಬೀರ್ ಕಪೂರ್- ಜಾಕ್ವೆಲಿನ್ ಫರ್ನಾಂಡಿಸ್ ಜೋಡಿಯ 'ರಾಯ್'ನಲ್ಲೂ ಒಳ್ಳೆ ಪಾತ್ರ ಸಿಕ್ಕಿರುವುದು.