ಕಿಲಾಡಿ ಕುಮಾರನ ಹೋಮ್ ಪ್ರೊಡಕ್ಷನ್ನಲ್ಲಿ ನಿರ್ಮಾಣವಾಗುತ್ತಿರುವ ಹಿಂದಿ ಸಿನಿಮಾ 'ಬಾಸ್'ನಲ್ಲಿ ಅದಿತಿ ರಾವ್ ಹೈದರಿ ಎನ್ನುವ ಬಳಕುವ ತರುಣಿ ನಾಯಕಿ. ಅವಳಿಗೀಗ ತನ್ನ 'ಬಾಸ್' ಅಕ್ಕಿ ಉರ್ಫ್ ಅಕ್ಷಯ್ಕುಮಾರ್ನನ್ನು ಹೊಗಳುವುದೇ ಕೆಲಸ. 'ಅಕ್ಷಯ್ ಕ್ಯಾಮೆರಾ ಹಿಂದೆ ಮತ್ತು ಮುಂದೆ ಸಿಕ್ಕಾಪಟ್ಟೆ ಶಿಸ್ತಿನ ಮನುಷ್ಯ. ಆತನೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು, ಅದರಲ್ಲೂ ಆತನ ಸ್ವಂತ ಬ್ಯಾನರ್ ಸಿನಿಮಾದಲ್ಲಿ ನಟಿಸುತ್ತಿರುವುದು ನನ್ನ ಅದೃಷ್ಟ. ನಾನಂತೂ ಅವನಿಂದ ಸ್ಫೂರ್ತಿ ಪಡೆದಿದ್ದೇನೆ...' ಹೀಗೆ ಸಾಗುತ್ತದೆ ಅವಳ ಬಣ್ಣನೆ. ಆದರೆ ಅಕ್ಷಯ್ ಸಿಕ್ಕಾಪಟ್ಟೆ ತಮಾಷೆ ಮನುಷ್ಯ. ಆತ ಇದ್ದಲ್ಲಿ ಮೋಜು-ಮಸ್ತಿಗೇನೂ ಕೊರತೆಯಿಲ್ಲ ಎನ್ನುವುದೂ ಅವಳ ಹೇಳಿಕೆ.
ಅಂಥೋಣಿ ಡಿ'ಸೋಜಾ ನಿರ್ದೇಶನದ 'ಬಾಸ್'ನಲ್ಲಿ ಮಿಥುನ್ ಚಕ್ರವರ್ತಿ, ಜಾನಿ ಲಿವರ್, ರೋನಿತ್ ರಾಯ್ ಕೂಡ ನಟಿಸುತ್ತಿದ್ದಾರೆ.