ಕೆಲವರಿರುತ್ತಾರೆ, ಅವರ ಕೆಲಸವೇ ಗಾಸಿಪ್ ಹರಡಿಸುವುದು. ನಟ-ನಟಿಯರ ಸಂಬಂಧಗಳ ವಿಚಾರದಲ್ಲಿ ಇವರದ್ದು ಹದ್ದಿನ ಕಣ್ಣು. ಅದರಲ್ಲೂ ಒಮ್ಮೆ ಸ್ನೇಹದಿಂದ ಇದ್ದು ಬೇರ್ಪಟ್ಟವರು ಮತ್ತೆ ಜತೆಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂದರಂತೂ ಮುಗಿದೇ ಹೋಯಿತು. ರಣಬೀರ್ ಕಪೂರ್, ದೀಪಿಕಾ ವಿಚಾರದಲ್ಲಿ ಆಗಿರುವುದೂ ಇದೇ. ಅವರಿಬ್ಬರೂ 'ಯೆ ಜವಾನಿ ಹೈ ದೀವಾನಿ' ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಪ್ರಚಾರಕ್ಕೆ ಕೂಡ ಜತೆಯಾಗಿ ಹೋಗುತ್ತಿದ್ದಾರೆ. ಹೀಗಾಗಿ 'ಇವರ ಮಧ್ಯೆ ಪುನಃ ಕುಛ್ಕುಛ್ ಶುರುವಾಗಿದೆ' ಎಂಬ ವದಂತಿ ಹುಟ್ಟಿಕೊಂಡಿದೆ. ಹೋದಲ್ಲೆಲ್ಲ ಪತ್ರಿಕಾಗೋಷ್ಠಿಗಳಲ್ಲಿ ಇದೇ ಪ್ರಶ್ನೆ. ಉತ್ತರ ಕೊಟ್ಟುಕೊಟ್ಟು ಸುಸ್ತಾದ ರಣಬೀರ್ ಈಗ ಶುರುವಿನಲ್ಲಿಯೇ 'ನನ್ನ, ದೀಪಿಕಾ ಸಂಬಂಧದ ವಿಚಾರ ಬಿಟ್ಟು ಬೇರೇನಾದರೂ ಕೇಳಿ. ನಾವು ಬಂದಿರುವುದು ಸಿನಿಮಾ ಪ್ರಚಾರಕ್ಕೆ' ಎಂದು ಹೇಳುತ್ತಿದ್ದಾನಂತೆ.