ಸೋನಾಲಿ ಬೇಂದ್ರೆ ರಜೆಯ ಮೂಡ್ನಲ್ಲಿದ್ದಾಳೆ. ಈಚೆಗಷ್ಟೇ 'ಇಂಡಿಯಾ'ಸ್ ಬೆಸ್ಟ್ ಡ್ರೀಮ್ಬಾಝ್' (ಐಬಿಡಿ) ರಿಯಾಲಿಟಿ ಶೋ ಮುಗಿಸಿರುವ 38ರ ಸುಂದರಿ, ಕಿರುತೆರೆಯಿಂದ ಸುದೀರ್ಘ ಬಿಡುವು ಪಡೆಯುವ ಇಂಗಿತ ವ್ಯಕ್ತಪಡಿಸಿದ್ದಾಳೆ. ಈ ಶೋನಲ್ಲಿ ಆಕೆ ತೀರ್ಪುಗಾರ್ತಿಯಾಗಿದ್ದಳು. 'ಇನ್ನುಮುಂದೆ ವರ್ಷಕ್ಕೆ ಒಂದು ರಿಯಾಲಿಟಿ ಶೋ ಮಾತ್ರ ಒಪ್ಪಿಕೊಳ್ಳುತ್ತೇನೆ. ಆ ನಂತರ ದೊಡ್ಡದೊಂದು ಬಿಡುವು ಪಡೆಯುತ್ತೇನೆ. ಈ ತೀರ್ಮಾನವನ್ನು ಈ ವರ್ಷದಿಂದಲೇ ಜಾರಿಗೆ ತರುತ್ತೇನೆ. ಹೇಗೂ ಐಬಿಡಿ ಮುಗಿದಿದೆ. ದೀರ್ಘಾವಧಿ ಪ್ರವಾಸ ಕೈಗೊಳ್ಳಲು ಇದು ಸೂಕ್ತ ಕಾಲ' ಎಂದಿರುವ ಸೋನಾಲಿ, 'ವೃತ್ತಿ, ಕುಟುಂಬ, ಸಂಬಂಧ ಮತ್ತು ವೈಯಕ್ತಿಕ ನೆಮ್ಮದಿ ಇವೆಲ್ಲದರ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ' ಎಂದಿದ್ದಾಳೆ.