ಬಾಲಿವುಡ್

ಝೀರೊ ಸೈಜ್ ಒಲ್ಲದ ಪ್ರಿಯಾಂಕಾ

'ಝೀರೊ ಸೈಜ್‌ನಲ್ಲಿ ನಂಬಿಕೆ ಇಲ್ಲ' ಅಂತ ಹೇಳಿದ್ದಾಳೆ ಪ್ರಿಯಾಂಕಾ ಚೋಪ್ರಾ. ಹಾಗಂತ ವರ್ಕೌಟ್ ಮಾಡದೆ ಇರಬೇಕು ಅಂತಲ್ಲ.

'ನನಗೆ ಝೀರೊ ಸೈಜ್‌ನಲ್ಲಿ ನಂಬಿಕೆ ಇಲ್ಲ' ಅಂತ ಮತ್ತೆ ಹೇಳಿದ್ದಾಳೆ ಪ್ರಿಯಾಂಕಾ ಚೋಪ್ರಾ. ಹಾಗಂತ ವರ್ಕೌಟ್ ಮಾಡದೆ ಇರಬೇಕು ಅಂತಲ್ಲ. ಸಿಕ್ಕಾಪಟ್ಟೆ ಡಯಟ್ ಮಾಡಿ, ತೂಕ ಇಳಿಸಿಕೊಂಡು, ಝೀರೊ ಸೈಜ್ ಫಿಗರ್ ಅಂತ ಕರೆಸಿಕೊಳ್ಳೋದಕ್ಕಿಂತ ಇಷ್ಟವಾದದ್ದನ್ನು ಮಿತವಾಗಿ ತಿಂದು, ನಿಯಮಿತವಾಗಿ ವ್ಯಾಯಾಮ ಮಾಡುತ್ತ ಅಂಗಾಂಗಗಳ ಅಂದ ಕಾಪಾಡಿಕೊಳ್ಳಬೇಕು ಎನ್ನುವುದು ಅವಳ ಸಲಹೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಲಿರುವ, ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್ ಜೀವನ ಆಧಾರಿತ ಚಿತ್ರಕ್ಕಾಗಿ ಪ್ರಿಯಾಂಕಾ ತಯಾರಿ ಮಾಡುತ್ತಿದ್ದಾಳೆ. ಈ ಹಿನ್ನೆಲೆಯಲ್ಲೇ ಪತ್ರಕರ್ತರು ಅವಳಿಗೆ ಝೀರೊ ಸೈಜ್ ಪ್ರಶ್ನೆ ಎಸೆದದ್ದು, ಅದಕ್ಕೆ ಆಕೆ ಮತ್ತೊಮ್ಮೆ ಖಡಕ್ ಆಗಿ ಉತ್ತರಿಸಿದ್ದು. 'ನಾನು ಮೆರಿ ಕೋಮ್ ಥರ ಕಾಣಲಾರೆ. ಆದರೆ ಆಕೆಗಿರುವಂತೆ ನನ್ನ ಮಾಂಸಖಂಡಗಳೂ ಎದ್ದುಕಾಣುವಂತೆ ಮಾಡಲು ವಿಶೇಷ ಕಸರತ್ತುಗಳನ್ನಂತೂ ಮಾಡುತ್ತಿದ್ದೇನೆ' ಎಂದಿದ್ದಾಳೆ ಪ್ರಿಯಾಂಕಾ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್