ಬಾಲಿವುಡ್

ಸಖತ್ ಮಾಧುರಿ

ಆಗಲೂ ಅಷ್ಟೆ, ಈಗಲೂ ಅಷ್ಟೆ. ಡಾನ್ಸ್ ಅಂದ್ರೆ ಮಾಧುರಿ, ಮಾಧುರಿ ಅಂದ್ರೆ ಡಾನ್ಸ್. ಆದರೆ ಮಾಧುರಿಗೆ ಆವತ್ತಿಗೂ, ಇವತ್ತಿಗೂ ವ್ಯತ್ಯಾಸ ಕಾಣುತ್ತಿಲ್ಲ. 'ಯೆ ಜವಾನಿ ಹೈ ದೀವಾನಿ'ಯಲ್ಲಿ ರಣಬೀರ್ ಜತೆ ಐಟಂ ಸಾಂಗೊಂದಕ್ಕೆ ಸಖತ್ತಾಗಿ ಸ್ಟೆಪ್ಸ್ ಹಾಕಿದ್ದಾಳೆ ಈಕೆ. 'ಸಿನಿಮಾಗಳಲ್ಲಿ ನೃತ್ಯದ ಸ್ವರೂಪದಲ್ಲಿ ಏನು ಮಹಾ ಬದಲಾವಣೆ ಮಾಡಬಹುದು? ಹಾಡು ಹಾಡೇ ಅಲ್ಲವೆ? ಈಗ ಕ್ಯಾಮೆರಾ ಚಲನೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಕ್ಯಾಮೆರಾ ಮೂವ್‌ಮೆಂಟ್ ಫಾಸ್ಟಾಗಿರುವುದಿಂದ ನಾವು ಒಂಚೂರು ಫಾಸ್ಟ್ ಆಗಿ ಸ್ಟೆಪ್ಸ್ ಹಾಕಬೇಕು ಅಷ್ಟೆ' ಎಂದಿದ್ದಾಳೆ.
1999ರಲ್ಲಿ ಅಮೆರಿಕ ಮೂಲದ ವೈದ್ಯ ಶ್ರೀರಾಮ್ ನೆನೆ ಅವರನ್ನು ವಿವಾಹವಾದ ಬಳಿಕ ಕೆಲಕಾಲ ಅಭಿನಯದಿಂದ ದೂರವಿದ್ದಳು ಸ್ನಿಗ್ಧ ನಗುವಿನ ಸುಂದರಿ. ಆರು ವರ್ಷ ಹಿಂದೆ 'ಆಜಾ ನಾಚ್‌ಲೆ' ಮೂಲಕ ಬೆಳ್ಳಿಪರದೆಗೆ ಮರಳಿದ್ದ ಮಾಧುರಿ ದೀಕ್ಷಿತ್, ಈಗ 'ಗುಲಾಬ್ ಗ್ಯಾಂಗ್‌' ಹಾಗೂ 'ದೇದ್ ಇಷ್ಕಿಯಾ' ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!